ETV Bharat / state

ಮನ್​ಮುಲ್‌ನಿಂದ ನೆಲ್ಲಿಗೆರೆ ಬಾಲು ಸದಸ್ಯತ್ವ ಅನರ್ಹ,ಜೆಡಿಎಸ್‌ಗೆ ಆಘಾತ - ಜೆಡಿಎಸ್

ಮಂಡ್ಯ ಮನ್​ಮುಲ್‌ ನಿಂದ ಜೆಡಿಎಸ್ ಬೆಂಬಲಿತ ಸದಸ್ಯ ನೆಲ್ಲಿಗೆರೆ ಬಾಲು ಸದಸ್ಯತ್ವ ಅನರ್ಹ ಮಾಡಲಾಗಿದೆ. ಇದರಿಂದ ಜೆಡಿಎಸ್ ಸಂಖ್ಯಾಬಲ ಕುಗ್ಗಿದ್ದು, ಚಲುವರಾಯ ಸ್ವಾಮಿ ಮೇಲುಗೈ ಸಾಧಿಸಿದ್ದಾರೆ ಎಂದೇ ಹೇಳಲಾಗುತ್ತಿದೆ.

ನೆಲ್ಲಿಗೆರೆ ಬಾಲು
author img

By

Published : Sep 21, 2019, 10:19 PM IST

ಮಂಡ್ಯ: ಮನ್‌ಮುಲ್ ( ಮಂಡ್ಯ ಜಿಲ್ಲಾ ಹಾಲು ಒಕ್ಕೂಟ)ದ ವಿಚಾರವಾಗಿ ಜೆಡಿಎಸ್‌ಗೆ ಆಘಾತವಾಗಿದೆ. ಒಕ್ಕೂಟದ ಅಧ್ಯಕ್ಷ ಗಾಧಿಯ ಆಸೆ ಕಮರಿದ್ದು, ಜೆಡಿಎಸ್ ಬೆಂಬಲಿತ ಸದಸ್ಯ ನೆಲ್ಲಿಗೆರೆ ಬಾಲು ಸದಸ್ಯತ್ವ ಅನರ್ಹಗೊಳಿಸಲಾಗಿದೆ.

mandya manmul
ಜೆಡಿಎಸ್ ಬೆಂಬಲಿತ ಸದಸ್ಯನ ಸದಸ್ಯತ್ವ ಅನರ್ಹ

ಪಾಂಡವಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಈ ಕುರಿತು ಆದೇಶ ಹೊರಡಿಸಿದ್ದು, ಸಹಕಾರ ಸಂಘಗಳ ಕಾಯಿದೆ 1959 ರ ಪ್ರಕರಣ 29ಸಿ (1)(ಎಫ್)(iii) ಅಡಿ ಕ್ರಮ ಕೈಗೊಂಡಿದ್ದಾರೆ. ಬಾಲು ಅನರ್ಹಗೊಂಡ ಹಿನ್ನೆಲೆಯಲ್ಲಿ ಒಕ್ಕೂಟದಲ್ಲಿ ಜೆಡಿಎಸ್ ಸಂಖ್ಯಾ ಬಲ ಕುಗ್ಗಿದ್ದು, ಚಲುವರಾಯ ಸ್ವಾಮಿ ಮೇಲುಗೈ ಸಾಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿಗೆ ಅಧಿಕಾರ:

ಸಿಎಂ ಯಡಿಯೂರಪ್ಪ ಕೃಪೆಗೆ ಒಳಗಾಗಿರುವ ಎಸ್.ಪಿ.ಸ್ವಾಮಿ ಮನ್‌ಮುಲ್ ಮುಂದಿನ ಅಧ್ಯಕ್ಷ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಯಡಿಯೂರಪ್ಪ ಹಾಗೂ ಡಾ. ಅಶ್ವಥ್ ನಾರಾಯಣ ಭೇಟಿ ಮಾಡಿ ಮಾತುಕತೆ ಮಾಡಿದ್ದರು. ಈಗ ಜೆಡಿಎಸ್ ಸಂಖ್ಯಾಬಲ 6 ಕ್ಕೆ ಕುಸಿತ ಕಂಡಿದ್ದು, ಕಾಂಗ್ರೆಸ್‌ ಸದಸ್ಯರೂ ಎಸ್‌.ಪಿ ಸ್ವಾಮಿಗೆ ಬೆಂಬಲ ನೀಡುವ ಸಾಧ್ಯತೆ ಇದೆ.

ಸೋಮವಾರ ಅಧ್ಯಕ್ಷ ಗಾದಿಗೆ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ನಾಮ ನಿರ್ದೇಶನ ಸೇರಿದಂತೆ ಸರ್ಕಾರದ ಬಳಿ 6 ಮತಗಳಿದ್ದು ಕಾಂಗ್ರೆಸ್‌ನ 3 ಮತಗಳು ಸ್ವಾಮಿಗೆ ಬರುವ ಸಾಧ್ಯತೆ ಇದೆ.

Intro:ಮಂಡ್ಯ: ಮನ್‌ಮುಲ್ ಅಧಿಕಾರ ವಿಚಾರವಾಗಿ ಜೆಡಿಎಸ್‌ಗೆ ಆಘಾತವಾಗಿದೆ. ಮನ್ಮುಲ್ ಅಧ್ಯಕ್ಷ ಗಾಧಿಯ ಆಸೆ ಕಮರಿದ್ದು, ಜೆಡಿಎಸ್ ಬೆಂಬಲಿತ ಸದಸ್ಯ ನೆಲ್ಲಿಗೆರೆ ಬಾಲು ಸದಸ್ಯತ್ವ ಅನರ್ಹ ಮಾಡಲಾಗಿದೆ.
ಪಾಂಡವಪುರ ಉಪವಿಭಾಗಕದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಅನರ್ಹದ ಆದೇಶ ಹೊರಡಿಸಿದ್ದು, ಸಹಕಾರ ಸಂಘಗಳ ಕಾಯಿದೆ 1959 ರ ಪ್ರಕರಣ 29ಸಿ ( 1)(ಎಫ್)(iii) ರ ಅಡಿ ಅನರ್ಹ ಮಾಡಿ ಆದೇಶ ಹೊರಡಿಸಿದ್ದಾರೆ.
ಅನರ್ಹತೆ ಹಿನ್ನೆಲೆಯಲ್ಲಿ ಜೆಡಿಎಸ್ ಸಂಖ್ಯಾ ಬಲ ಕುಗ್ಗಿದ್ದು, ಚಲುವರಾಯ ಸ್ವಾಮಿ ಮೇಲುಗೈ ಸಾಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿಗೆ ಅಧಿಕಾರ: ಸಿಎಂ ಯಡಿಯೂರಪ್ಪ ಕೃಪೆಗೆ ಒಳಗಾಗಿರುವ ಎಸ್.ಪಿ.ಸ್ವಾಮಿ ಮನ್‌ಮುಲ್ ಮುಂದಿನ ಅಧ್ಯಕ್ಷ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಯಡಿಯೂರಪ್ಪ ಹಾಗೂ ಡಾ. ಅಶ್ವಥ್ ನಾರಾಯಣ್ ಭೇಟಿ ಮಾಡಿ ಮಾತುಕತೆ ಮಾಡಿದ್ದರು. ಈಗ ಜೆಡಿಎಸ್ ಸಂಖ್ಯಾಬಲ 6 ಕ್ಕೆ ಕುಸಿತ ಕಂಡಿದ್ದು, ಕಾಂಗ್ರೆಸ್‌ನ ಸದಸ್ಯರೂ ಎಸ್‌.ಪಿ ಸ್ವಾಮಿಗೆ ಬೆಂಬಲ ನೀಡುವ ಸಾಧ್ಯತೆ ಇದೆ.
ಸೋಮವಾರ ಅಧ್ಯಕ್ಷ ಗಾದಿಗೆ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ನಾಮ ನಿರ್ದೇಶನ ಸೇರಿದಂತೆ ಸರ್ಕಾರದ ಬಳಿ 6 ಮತಗಳಿದ್ದು ಕಾಂಗ್ರೆಸ್‌ನ 3 ಮತಗಳು ಸ್ವಾಮಿಗೆ ಬರುವ ಸಾಧ್ಯತೆ ಇದೆ.
Body:ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.