ETV Bharat / state

ದೇಶದ ರಾಜಕೀಯದಲ್ಲೇ ಹೊಸ ಇತಿಹಾಸ ಸೃಷ್ಟಿಸಿದ ಮಂಡ್ಯ ಮತದಾರರು! - undefined

ಒಂದು ಪಕ್ಷೇತರ ಅಭ್ಯರ್ಥಿ ಚುನಾವಣಾ ಪ್ರಚಾರದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮೂರೂ ಪಕ್ಷದ ಕಾರ್ಯಕರ್ತರು ಬಾವುಟ ಪ್ರದರ್ಶಿಸಿ ಪ್ರಚಾರ ಮಾಡಿರುವುದು ದೇಶದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲು ಎನ್ನಬಹುದು.

ಸುಮಲತಾ , ನಿಖಿಲ್​
author img

By

Published : Apr 17, 2019, 3:22 PM IST

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ‌ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗಿಂತ ಮಂಡ್ಯ ಲೋಕಸಭೆ ಕ್ಷೇತ್ರ ಭಾರೀ ಸುದ್ದಿಯಲ್ಲಿದೆ. ಒಂದೆಡೆ ಸುಮಲತಾ, ಮತ್ತೊಂದೆಡೆ ನಿಖಿಲ್.

ಮಂಡ್ಯದಲ್ಲಿ ಸುಮಲತಾ, ನಿಖಿಲ್ ಪ್ರಚಾರ

ಇಡೀ ದೇಶವೇ ತಿರುಗಿ ನೋಡುವ ರೀತಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹಾಗೂ ಕಾಂಗ್ರೆಸ್ ಬೆಂಬಲಿತ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪ್ರಚಾರದಲ್ಲಿ ಅಬ್ಬರಿಸಿದ್ದಾರೆ. ಅಲ್ಲದೆ ಮಂಡ್ಯದ ರಣಕಣದಲ್ಲಿ ವಾಕ್ಸಮರ ಕೂಡಾ ಜೋರಾಗಿದೆ. ಇನ್ನು ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕು ಎಂದು ಮೈತ್ರಿ ಧರ್ಮದಂತೆ ಮೈತ್ರಿ‌ ಸರ್ಕಾರವೇ ಮಂಡ್ಯದಲ್ಲಿ ಬೀಡು ಬಿಟ್ಟಿದೆ. ಈ ಮೈತ್ರಿಗೆ ಮಂಡ್ಯದ ಜನರಲ್ಲಿ ಅಸಮಾಧಾನವಿದೆ ಎಂಬುದು ಮೈತ್ರಿ ಸರ್ಕಾರಕ್ಕೂ ಗೊತ್ತು. ಆದರೆ ಕುಮಾರಸ್ವಾಮಿ ಮಾತ್ರ ಮಗನನ್ನು ಎಂಪಿ ಮಾಡೇ ಮಾಡ್ತೀನಿ ಎಂಬ ಹಠಕ್ಕೆ ಬಿದ್ದಿದ್ದಾರೆ ಎನ್ನಿಸುತ್ತಿದೆ.

ಆದರೆ ಕುಮಾರಸ್ವಾಮಿ ಅವರಿಗೆ ಮಂಡ್ಯದ ಜನ ಮಾತ್ರ ನಿದ್ದೆಗೆಡಿಸಿರುವಂತೆ ಕಾಣುತ್ತಿದೆ. ಹೌದು, ಮಂಡ್ಯದಲ್ಲಿ 7 ಜೆಡಿಎಸ್ ಶಾಸಕರು, ಒಬ್ಬರು ಎಂಪಿ, ಇಬ್ಬರು ಮಂತ್ರಿಗಳಿದ್ದರೂ ಎಲ್ಲೋ ಒಂದು ಕಡೆ ಮೈತ್ರಿ ಸರ್ಕಾರಕ್ಕೆ ಹಿನ್ನೆಡೆಯಾಗುತ್ತಿದೆ ಎಂಬ ಮಾತು ಮಂಡ್ಯದಲ್ಲಿ ಸದ್ದು ಮಾಡುತ್ತಿದೆ. ಏಕೆಂದರೆ ಕೆಲವು ದಿನಗಳಿಂದ ಸುಮಲತಾ ಹೋದಲ್ಲೆಲ್ಲಾ ಜೆಡಿಎಸ್​, ಕಾಂಗ್ರೆಸ್ ಹಾಗೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿದ್ದವು. ಈ ಮೂರೂ ಪಕ್ಷದ ಕಾರ್ಯಕರ್ತರು ಹುರುಪಿನಿಂದ ಸುಮಲತಾ ಪರ ಪ್ರಚಾರ ಮಾಡುತ್ತಿದ್ದರು.

ಈ ಪ್ರಮುಖ ಮೂರೂ ಪಕ್ಷಗಳ ಕಾರ್ಯಕರ್ತರ ಮೈತ್ರಿ ಸ್ವಾತಂತ್ರ್ಯ ಭಾರತದ ಚುನಾವಣಾ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ. ಒಬ್ಬ ಪಕ್ಷೇತರ ಅಭ್ಯರ್ಥಿಯ ಪ್ರಚಾರದ ವೇಳೆ ರಾಜ್ಯದ ಮೂರೂ ಪ್ರಕ್ಷಗಳ ಬಾವುಟ ಹಾರಿಸಿ ಮಂಡ್ಯದ ಜನರು ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ.

Intro:೨೦೧೯ ರ ಲೋಕಸಭಾ ಚುನಾವಣೆಗೆ‌ ದಿನಗಣನೆ ಆರಂಭವಾಗಿದೆ. ಇನ್ನೂ ಎಲೆಕ್ಷನ್ ಗೆ ಸ್ಪರ್ಧಿಸಿರುವ ಸ್ಪರ್ಧಿಗಳಲ್ಲಿ ನಾವು ಗೆದ್ದೆಗೆಲ್ತಿವಿಎಂಬ ಭರವಸೆಯೊಂದಿಗೆ
ಅಬ್ಬರದ ಪ್ರಚಾರ ಮಾಡ್ತಿದ್ದಾರೆ.ಅದರಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಇಡೀ ದೇಶವೇ ತಿರುಗಿ ನೋಡುವ ರೀತಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹಾಗೂ ಕಾಂಗ್ರೆಸ್ ಬೆಂಬಲಿತ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪ್ರಚಾರದಲ್ಲಿ ಅಬ್ಬರಿಸ್ತಿದ್ದಾರೆ.ಅಲ್ಲದೆ ಮಂಡ್ಯದ ರಣಕಣದಲ್ಲಿ ವಾಕ್ಯುದ್ದ ಜೋರಾಗಿದೆ.ಇನ್ನೂ ಜೆಡಿಎಸ್ ಪಕ್ಷದ‌ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸ ಬೇಕು ಎಂದು ಮೈತ್ರಿ ಧರ್ಮದಂತೆ ಮೈತ್ರಿ‌ಸರ್ಕಾರವೇ ಮಂಡ್ಯದಲ್ಲಿ ಬೀಡು ಬಿಟ್ಟಿದೆ.ಅಲ್ಲದೆ ಈ ಮೈತ್ರಿಗೆ ಮಂಡ್ಯದ ಜನರಲ್ಲಿ ಅಸಮಾಧಾನವಿದೆ ಎಂಬುದು ಮೈತ್ರಿ ಸರ್ಕಾರಕ್ಕೂ ಗೊತ್ತು.ಅದ್ರೆ ಕುಮಾರಸ್ವಾಮಿ ಮಾತ್ರ ಮಗನನ್ನು ಎಂಪಿ ಮಾಡೇ ಮಾಡ್ತಿನಿ ಎಂಬ ಹಟಕ್ಕೆ ಬಿದ್ದವರಂತೆ ಕಾಣ್ತಿದ್ದಾರೆ.ಅದ್ರೆ ಕುಮಾರಸ್ವಾಮಿ ಅವರಿಗೆ ಮಂಡ್ಯದ ಜನ ಮಾತ್ರ ನಿದ್ರೆ ಕೆಡಿಸಿದ್ದಾರೆ.ಎಸ್ ಮಂಡ್ಯದಲ್ಲಿ ಎಂಟು ಜೆಡಿಎಸ್ ಶಾಸಕರು ೧ ಸಂಸದ ಮೂರು ಜನ ಮಂತ್ರಿಗಳಿದ್ರು ಸಹ ಎಲ್ಲೋ ಒಂದು ಕಡೆ ಮೈತ್ರಿ ಸರ್ಕಾರಕ್ಕೆ ಹಿನ್ನೆಡೆಯಾಗ್ತಿದೆ ಎಂಬ ಮಾತು ಮಂಡ್ಯ ದಲ್ಲಿ ಸದ್ದು ಮಾಡ್ತಿದೆ.Body:ಯಾಕಪ್ಪ ಅಂದ್ರೆ ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ .ಅದ್ರೆ ಮಂಡ್ಯದ ಜೆಡಿಎಸ್, ಕಾಂಗ್ರೆಸ್,ಹಾಗೂ ಬಿಜೆಪಿ ಯ ಕಾರ್ಯಕರ್ತರು ಮೈತ್ರಿ ಮಾಡಿಕೊಂಡತೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರ ಪ್ರಚಾರ ಮಾಡ್ತಿದ್ದಾರೆ.ಸುಮಲತಾ ಅಂಬರೀಸ್ ಎಲ್ಲೇ ಪ್ರಚಾರಕ್ಕೆ ಹೋದ್ರು ಸಹ ಜೆಡಿಎಸ್ ,ಕಾಂಗ್ರೆಸ್,ಹಾಗೂ ಬಿಜೆಪಿ ಭಾವುಟ ಹಿಡಿದು ಕಾರ್ಯಕರ್ತರು ಬಹಳ ಹುರುಪಿನಿಂದ ಪ್ರಚಾರ ಮಾಡ್ತಿದ್ದಾರೆ.Conclusion:ಇನ್ನೂ ಪ್ರಮುಖ ಮೂರು ಪಕ್ಷಗಳ ಕಾರ್ಯಕರ್ತರ ಮೈತ್ರಿ ಸ್ವತಂತ್ರ ಭಾರತದ ಚುನಾವಣಾ ಇತಿಹಾಸದಲ್ಲೇ ಮೊದಲಬಾರಿಯಾಗಿದ್ದು .ಒಬ್ಬ ಪಕ್ಷೇತರ ಅಭ್ಯರ್ಥಿಯ ಪ್ರಚಾರದ ವೇಳೆ ರಾಜ್ಯದ ಮೂರು ಪ್ರಕ್ಷಗಳ ಭಾವುಟ ರಾರಾಜಿಸಿದ್ದು.ಮಂಡ್ಯದ ಜನರು ಹೊಸ ಇತಿಹಾಸವನ್ನೇ ಸೃಷ್ಠಿಸಿದ್ದಾರೆ ಎಂದ್ರೆ ತಪ್ಪಗಲಾರದು.

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.