ETV Bharat / state

ಸಿಗದ ಮೂಲ ಸೌಕರ್ಯ.. ರಾಜಕಾರಣಿಗಳಿಗೆ ನೋ ಎಂಟ್ರಿ ಬೋರ್ಡ್ ಹಾಕಿ ಮತದಾನ ಬಹಿಷ್ಕಾರಕ್ಕೆ ಮುಂದಾದ ಜನ

author img

By

Published : Apr 9, 2023, 8:30 AM IST

Updated : Apr 9, 2023, 9:24 AM IST

ಮಂಡ್ಯ ನಗರದ ವಿವೇಕಾನಂದ ಬಡಾವಣೆಯ ಜನ ಸೂಕ್ತ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸದ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಈ ಬಾರಿಯ ಚುನಾವಣೆ ಬಹಿಷ್ಕರಿಸರಿಸಲು ಮುಂದಾಗಿದ್ದಾರೆ.

boycott election
ಮತದಾನ ಬಹಿಷ್ಕಾರಕ್ಕೆ ಮುಂದಾದ ವಿವೇಕಾನಂದ ಬಡಾವಣೆಯ ಜನ

ಮಂಡ್ಯ : ಕಳೆದ 2 ದಶಕಗಳ ಹಿಂದೆ ಇಲ್ಲಿದ್ದ ದೊಡ್ಡ ಕೆರೆಯನ್ನು ಮುಚ್ಚಿಸಿದ್ದ ರಾಜ್ಯ ಸರ್ಕಾರ ದೊಡ್ಡ ಬಡಾವಣೆಯೊಂದನ್ನ ನಿರ್ಮಿಸಿತ್ತು. ಈಗಾಗಲೇ 700 ಮನೆಗಳಿದ್ದು, ಸಾವಿರಾರು ನಿವೇಶನದಾರರು ವಾಸ ಮಾಡ್ತಿದ್ದಾರೆ. ಕೆರೆಯನ್ನೇನೋ ಮುಚ್ಚಿಸಿ ನಿವೇಶನಗಳನ್ನು ಮಾರಾಟ ಮಾಡಿರೋ ಸರ್ಕಾರ ಅಲ್ಲಿನ ನಿವಾಸಿಗಳಿಗೆ ಅಗತ್ಯವಾಗಿ ಬೇಕಾದ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸುವಲ್ಲಿ ವಿಫಲವಾಗಿದೆ.

ಹೌದು, ಪ್ರತಿ ವರ್ಷ ಮಳೆ ಬಂದಂತಹ ಸಂದರ್ಭದಲ್ಲಿ ಇಲ್ಲಿನವರ ಗೋಳು ಕೇಳೋರೆ ಇಲ್ಲದಂತಾಗಿದೆ. ಈ ಎಲ್ಲದರಿಂದ ಬೇಸತ್ತಿರೋ ಸ್ಥಳೀಯರು ತಮ್ಮ ಬಡಾವಣೆಗೆ ಮೂಲಭೂತ ಸೌಲಭ್ಯ ಕಲ್ಪಿಸದ ಹೊರತು ನಾವು ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆ ಬಹಿಷ್ಕರಿಸರಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ : ಕೊಡಗಿನ ಕಾಫಿ ಎಸ್ಟೇಟ್​ ಕಾರ್ಮಿಕರ ಗೋಳು ಕೇಳುವವರಿಲ್ಲ: ಮತದಾನ ಬಹಿಷ್ಕಾರಕ್ಕೆ ನಿರ್ಧಾರ

ಮಂಡ್ಯ ನಗರದ ವಿವೇಕಾನಂದ ಬಡಾವಣೆಯಲ್ಲಿ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕ್ತಿರೋ ಜನರು ಬಡಾವಣೆ ಪ್ರವೇಶಿಸುವ ಪ್ರಮುಖ ಕಡೆಗಳಲ್ಲಿ ಮತದಾನ ಬಹಿಷ್ಕಾರ, ರಾಜಕಾರಣಿಗಳಿಗೆ ನೋ ಎಂಟ್ರಿ ಫಲಕ ಅಳವಡಿಸಿದ್ದಾರೆ. ಮಂಡ್ಯ ನಗರಕ್ಕೆ ಹೊಂದಿಕೊಂಡಂತೆ ಇರೋ ಚಿಕ್ಕ ಮಂಡ್ಯ ಸಮೀಪದ ಕೆರೆ ಅಂಗಳ ಇದೀಗ ಎಲ್ಲರ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ. ಯಾಕಂದ್ರೆ, ಇಲ್ಲಿರೋ ಸುಮಾರು 5 ಸಾವಿರದಷ್ಟು ಮತದಾರರು ಈ ಬಾರಿಯ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಅದಕ್ಕೆ ಕಾರಣ ಮೂಲಭೂತ ಸೌಲಭ್ಯಗಳ ಕೊರತೆ.

ಇದನ್ನೂ ಓದಿ : ಗೃಹ ಸಚಿವರ ಕ್ಷೇತ್ರದಲ್ಲಿ ಮೂಲಸೌಕರ್ಯ ಮರೀಚಿಕೆ ಆರೋಪ.. ಮತದಾನ ಬಹಿಷ್ಕರಿಸಿಲು ಗ್ರಾಮಸ್ಥರ ನಿರ್ಧಾರ

ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿದ್ದು, ಇನ್ನೂ ಸಾವಿರಾರು ನಿವೇಶನಗಳು ಮಾರಾಟವಾಗದೇ ಉಳಿದಿವೆ. ಇಲ್ಲಿ ವಾಸ ಮಾಡ್ತಿರೊ ಜನರಿಗೆ ಮಳೆಗಾಲ ಬಂತೆಂದರೆ ಗೋಳು ತಪ್ಪಿದ್ದಲ್ಲ. ಮಳೆಯ ನೀರು ಸಂಪೂರ್ಣವಾಗಿ ಬಡಾವಣೆಗೆ ಆವರಿಸಿಕೊಂಡು ಇಡೀ ಬಡಾವಣೆಯೇ ಒಂದು ದ್ವೀಪದಂತಾಗುತ್ತದೆ. ಈ ಸಮಸ್ಯೆ ಬಗೆಹರಿಸಿಕೊಡುವಂತೆ ಸ್ಥಳೀಯ ನಿವಾಸಿಗಳು ಹಲವು ಬಾರಿ ಮನವಿ ಮಾಡಿದ್ದರೂ ಸರ್ಕಾರವಾಗಲಿ, ಜನ ಪ್ರತಿನಿಧಿಗಳಾಗಲಿ ಸ್ಪಂದಿಸದ ಕಾರಣ ಈ ಬಾರಿಯ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ : 'ರಸ್ತೆ, ಸೇತುವೆ ಮಾತ್ರವಲ್ಲ ಯುವಕರಿಗೆ ಮದುವೆಯೂ ಇಲ್ಲ': ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು

ಮಂಡ್ಯ ನಗರಸಭೆ ವ್ಯಾಪ್ತಿಗೆ ಬಂದರೂ ಇಲ್ಲಿಗೆ ಯಾವುದೇ ಸೌಲಭ್ಯ ಕಲ್ಪಿಸದ ಕ್ರಮವನ್ನ ಖಂಡಿಸಿರೋ ಜನ, ಸರಿಯಾದ ಚರಂಡಿ ವ್ಯವಸ್ಥೆ, ಸಂಪರ್ಕ ರಸ್ತೆಗಳಿಲ್ಲ. ಸ್ವಚ್ಛತೆಯ ಅಭಾವ ಕೂಡ ಇದ್ದು, ಇನ್ನೂ ಹಲವು ರೀತಿಯ ಸಮಸ್ಯೆಗಳಿಂದ ಬಸವಳಿದಿದ್ದೇವೆ. ಹೀಗಾಗಿ, ಈ ಬಾರಿ ಚುನಾವಣೆಯಲ್ಲಿ ನಾವು ಮತದಾನ ಮಾಡುವುದಿಲ್ಲ. ಜೊತೆಗೆ, ನಮ್ಮ ಬಡಾವಣೆಗೆ ಮೂಲಭೂತ ಸೌಲಭ್ಯ ಕಲ್ಪಿಸೋವರೆಗೂ ಇಲ್ಲಿಗೆ ಯಾವುದೇ ರಾಜಕಾರಣಿಗಳಿಗೆ ಪ್ರವೇಶ ಇಲ್ಲ ಎನ್ನುತ್ತಿದ್ದಾರೆ.

ಇದನ್ನೂ ಓದಿ : ಐದು ದಶಕ ಕಳೆದರೂ ನೆರೆ ನಿರಾಶ್ರಿತರಿಗೆ ಸಿಗದ ಸೌಲಭ್ಯ: ಮತದಾನ ಬಹಿಷ್ಕಾರದ ಎಚ್ಚರಿಕೆ

Last Updated : Apr 9, 2023, 9:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.