ಮಂಡ್ಯ : ಮುಖ್ಯ ಶಿಕ್ಷಕಿಯೊಬ್ಬರು ತರಗತಿಗೆ ಮೊಬೈಲ್ ತಂದ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕಿಯ ಅಮಾನತಿಗೆ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಡಿಡಿಪಿಐ ಶಿಫಾರಸು ಮಾಡಿದೆ.
ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಗ್ರಾಮದ ಶಾಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು. ವಿದ್ಯಾರ್ಥಿನಿಯ ಪೋಷಕರು, ತಹಶೀಲ್ದಾರ್, ಬಿಇಒ ದೂರು ನೀಡಿದ ಹಿನ್ನೆಲೆಯಲ್ಲಿ ಶಿಕ್ಷಕಿ ಸ್ನೇಹಲತಾ ಅವರನ್ನ ಅಮಾನತಿಗೆ ಶಿಫಾರಸು ಮಾಡಲಾಗಿದೆ.
![Mandya student strips case: DDPI recommends to suspend headmistress](https://etvbharatimages.akamaized.net/etvbharat/prod-images/mnd-07-01-teachertortureavb_07012022130201_0701f_1641540721_610.jpg)
ಡಿಡಿಪಿಐ ಜವರೇಗೌಡರಿಂದ ಆಯುಕ್ತರಿಗೆ ಶಿಫಾರಸು ಮಾಡಲಾಗಿದೆ. ಹಲವು ಬಾರಿ ಈ ಶಿಕ್ಷಕಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಅವರು ತಮ್ಮ ವರ್ತನೆಯನ್ನ ಬದಲಾಯಿಸಿಕೊಂಡಿಲ್ಲ. ಆದ್ದರಿಂದ ಅಮಾನತಿಗೆ ಶಿಫಾರಸು ಮಾಡಲಾಗಿದೆ ಎಂದು ಮಂಡ್ಯದಲ್ಲಿ ಡಿಡಿಪಿಐ ಜವರೇಗೌಡ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಶಾಲೆಗೆ ಮೊಬೈಲ್ ತಂದ ಕಾರಣಕ್ಕೆ ವಿದ್ಯಾರ್ಥಿನಿ ಬಟ್ಟೆ ಬಿಚ್ಚಿಸಿ ಅಮಾನವೀಯವಾಗಿ ನಡೆಸಿಕೊಂಡ ಮುಖ್ಯಶಿಕ್ಷಕಿ