ETV Bharat / state

ಬೈಕ್​ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ: 26 ದ್ವಿಚಕ್ರ ವಾಹನಗಳ ವಶ

ಮಂಡ್ಯ ಜಿಲ್ಲೆಯಲ್ಲಿ ಕಳ್ಳತನ ಮಾಡಿದ್ದ 18 ಹೀರೋ ಸ್ಪೆಂಡರ್​​ ಪ್ಲಸ್, 6 ಹೀರೋ ಫ್ಯಾಷನ್ ಪ್ರೋ, 1 ಬಜಾಜ್ ಪಲ್ಸರ್, 1 ಬಜಾಜ್ ಪ್ಲಾಟಿನಂ ಸೇರಿದಂತೆ ಒಟ್ಟು 26 ದ್ವಿಚಕ್ರ ವಾಹನಗಳವನ್ನು ಖದೀಮರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Mandya police seized bike and jewellary ornaments
Mandya police seized bike and-jewellary ornaments
author img

By

Published : Aug 4, 2021, 9:38 PM IST

ಮಂಡ್ಯ: ಬೈಕ್​ ಹಾಗೂ ಸಿಕ್ಕ ಸಿಕ್ಕ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಗ್ರಾಮದ ಯತೀನ್(25), ವಿಜಯ್ ಕುಮಾರ್(30), ಕಾರ್ತಿಕ್(24) ಹಾಗೂ ಶಿವಕುಮಾರ್(29) ಬಂಧಿತ ಆರೋಪಿಗಳು.

ಬಂಧಿತ ಖದೀಮರು 26 ದ್ವಿಚಕ್ರ ವಾಹನ ಸೇರಿದಂತೆ ಹತ್ತಾರು ಮನೆಗಳ ಕಳ್ಳತನ ಮಾಡಿದ್ದರು. ಈ ಬಗ್ಗೆ ವಿವಿಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ತೀವ್ರಗೊಳಿಸಿದ್ದ ಮಂಡ್ಯ ಪೊಲೀಸರು, ಆರೋಪಿಗಳನ್ನು ಬಂಧಿಸಿ ಕಳ್ಳತನ ಮಾಡಿದ್ದ ಒಟ್ಟು 17 ಲಕ್ಷ ರೂ ಮೌಲ್ಯದ 26 ಬೈಕ್​, ಅಪಾರ ಪ್ರಮಾಣದ ಚಿನ್ನದ ಒಡವೆ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.

ಬೈಕ್​ ಕಳ್ಳತನದ ಬಗ್ಗೆ ಹಲವೆಡೆ ದೂರು ದಾಖಲಾಗಿದ್ದವು. ಖದೀಮರನ್ನು ಪತ್ತೆ ಹಚ್ಚಿ ಈಗ ಬಂಧಿಸಲಾಗಿದೆ. ಬಂಧಿತರಿಂದ 18 ಹೀರೋ ಸ್ಪೆಂಡರ್ ಪ್ಲಸ್, 6 ಹೀರೋ ಫ್ಯಾಷನ್ ಪ್ರೋ, 1 ಬಜಾಜ್ ಪಲ್ಸರ್, 1 ಬಜಾಜ್ ಪ್ಲಾಟಿನಂ ಸೇರಿದಂತೆ ಒಟ್ಟು 26 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎಎಸ್ಎಸ್ಪಿ ಧನಂಜಯ್​ ಅವರ ನೇತೃತ್ವದ ತಂಡದೊಂದಿಗೆ ನಡೆದ ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಪಿಐ ಕೆ.ಸಂತೋಷ್, ಪಶ್ಚಿಮ ಠಾಣೆ PSI ಶರತ್ ಕುಮಾರ್, ಎಸ್.ಪ್ರಭಾ ಅವರಿಗೆ ಎಸ್ಪಿ ಅಶ್ವಿನಿ ಅಭಿನಂದನೆ ಜೊತೆಗೆ ಬಹುಮಾನ‌ ಘೋಷಣೆ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.