ETV Bharat / state

ಚಿನ್ನ ದೋಖಾ ಪ್ರಕರಣದಲ್ಲಿ ನಮ್ಮ ಮೇಲಿನ ಆರೋಪ ಸುಳ್ಳು; ಮಂಡ್ಯ ಬಿಜೆಪಿ ನಾಯಕಿ ಮೀನಾ - BJP leader name in MANDYA GOLD SCAM CASE

ಈ ಪ್ರಕರಣದಲ್ಲಿ ಬಿಜೆಪಿ ಒಂದೇ ಅಲ್ಲ, ಕಾಂಗ್ರೆಸ್, ಜೆಡಿಎಸ್​ನ ನೊಂದ ಮಹಿಳೆಯರಿದ್ದಾರೆ. ತಾಯಮ್ಮ ಮಾಡಿರುವ ಆರೋಪ ಶುದ್ಧ ಸುಳ್ಳು. ಕಾನೂನು ಪ್ರಕಾರ ಆರೋಪಿಗಳ ತನಿಖೆ ನಡೆಯುತ್ತಿದೆ ಎಂದು ಮಂಡ್ಯ ಬಿಜೆಪಿ ನಾಯಕಿ ಮೀನಾ ಹೇಳಿದ್ದಾರೆ.

MANDYA GOLD SCAM CASE
ಮಂಡ್ಯ ಬಿಜೆಪಿ ನಾಯಕಿ ಮೀನಾ ಹೇಳಿಕೆ
author img

By

Published : Jan 3, 2021, 5:08 PM IST

ಮಂಡ್ಯ: ಮಂಡ್ಯ ಚಿನ್ನ ದೋಖಾ ಪ್ರಕರಣದ ಸಂಬಂಧ ಆರೋಪಿ ಕುಟುಂಬದವರಿಗೆ ಬಿಜೆಪಿ ನಾಯಕಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕಿ ಮೀನಾ ನಾಗೇಶ್, ಈ ಆರೋಪ ಶುದ್ಧ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

ಮಂಡ್ಯ ಬಿಜೆಪಿ ನಾಯಕಿ ಮೀನಾ ಹೇಳಿಕೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಬಿಜೆಪಿ ಒಂದೇ ಅಲ್ಲ, ಕಾಂಗ್ರೆಸ್, ಜೆಡಿಎಸ್​ನ ನೊಂದ ಮಹಿಳೆಯರಿದ್ದಾರೆ. ನಮ್ಮ ಮೇಲೆ ಆರೋಪಿಸಿದ ತಾಯಮ್ಮನ ಮಗ ಸೋಮಶೇಖರನಿಂದ ಎಷ್ಟೋ ಮಹಿಳೆಯರು ನೊಂದಿದ್ದಾರೆ. ನೊಂದಿರುವ ಮಹಿಳೆಯರ ನೆರವಿಗೆ ನಿಂತಿದ್ದೇವೆ ವಿನಃ ಯಾರಿಗೂ ಕಿರುಕುಳ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 500ಕ್ಕೂ ಹೆಚ್ಚು ನಕಲಿ ಖಾತೆ.. ಕೋಟ್ಯಂತರ ರೂ. ಮೌಲ್ಯದ ಚಿನ್ನ ಅಡ.. ವಿಚಾರಣೆ ವೇಳೆ ಸತ್ಯ ಬಯಲು

ತಾಯಮ್ಮರಿಂದ 80 ಸಾವಿರ ರೂಪಾಯಿ ಹಣ ಪಡೆದಿಲ್ಲ, ಇದು ಸುಳ್ಳು. ಆರೋಪಿ ಸೋಮಶೇಖರ್ ಹೋದ ಮೇಲೆ 3 ಪಟ್ಟು ಹೆಚ್ಚು ಸಹಾಯ ಮಾಡಿದ್ದೇವೆ. ಸೋಮಶೇಖರ್ ಬಿಡುಗಡೆಗೆ ಸಮಯ ಇರಲಿಲ್ಲ. ಸೋಮಶೇಖರ್ ಮೇಲೆ 4 ಜನ ದೂರು ಕೊಟ್ಟಿದ್ದಾರೆ. ಈ ಕೇಸ್​ಗೆ ಸಂಬಂಧಿಸಿದ ನಾಲ್ಕು ಜನರು ಜೈಲಿನಲ್ಲೇ ಇದ್ದಾರೆ. ತಾಯಮ್ಮ ಮಾಡಿರುವ ಆರೋಪ ಶುದ್ಧ ಸುಳ್ಳು. ಆರೋಪಿಗಳಿಗೆ ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ. ಇದರಲ್ಲಿ ನಮ್ಮ ಬಿಜೆಪಿ ಪಕ್ಷದ ಪಾತ್ರ ಇಲ್ಲ, ಇದಕ್ಕೆ ಬಿಜೆಪಿ ಬೆಂಬಲವನ್ನೂ ನೀಡಿಲ್ಲ. ಯಾರೇ ತಪ್ಪು ಮಾಡಿದರೂ ಅದು ತಪ್ಪು. ನ್ಯಾಯದ ಪರ ಇರುತ್ತೇವೆ. ಅನ್ಯಾಯದ ಪರ ಹೋಗಲ್ಲ. ನಾನೇದರೂ ಅವರ ಬಳಿ 80 ಸಾವಿರ ರೂಪಾಯಿ ಪಡೆದಿದ್ದರೆ, 3 ಲಕ್ಷ ದಂಡ ಕಟ್ಟುತ್ತೇನೆ‌‌ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.