ಮಂಡ್ಯ : ಮಂಡ್ಯ ಚಿನ್ನ ದೋಖಾ ಪ್ರಕರಣದ ಸಂಬಂಧ ಈಗ ಮತ್ತೊಂದ ರೋಚಕ ಸಂಗತಿ ಬಯಲಾಗಿದೆ. ಆರೋಪಿಗಳು ಫೈನಾನ್ಸ್‌ಗಳಲ್ಲಿ 500ಕ್ಕೂ ಹೆಚ್ಚು ನಕಲಿ ಖಾತೆ ಸೃಷ್ಠಿಸಿದ್ದ ವಿಷಯ ಬೆಳಕಿಗೆ ಬಂದಿದೆ.
ಗುರುತು ಇಲ್ಲದ ಕಲ್ಪನಾ ಎಂಬ ಹೆಸರು ಬಳಸಿ, ಖಾತೆ ತೆರೆದು ಅಪಾರ ಮೌಲ್ಯದ ಚಿನ್ನ ಅಡಮಾನ ಮಾಡಿದ್ದರು. ಜೊತೆಗೆ ವಿವಿರಸ್ತೆ, ಆರ್‌ಪಿ ರಸ್ತೆಯಲ್ಲಿ ಸೇಲ್ಸ್ ಹುಡುಗಿಯರು, ಕೆಲಸ ಮಾಡುವ ಕಾವಲುಗಾರರನ್ನು ಕರೆತಂದು ಖಾತೆ ತೆರೆದಿದ್ದರು. 10ಕ್ಕೂ ಹೆಚ್ಚು ಖಾತೆಯನ್ನು ಒಬ್ಬ ಗ್ರಾಹಕನಿಂದ ತೆರೆಸಿದ್ದರು.
ಹೊಸ ಚಿನ್ನ ತಂದಾಗ ಹಳೆ ಖಾತೆಯಲ್ಲೇ ಚಿನ್ನ ಅಡಮಾನ ಮಾಡುತ್ತಿದ್ದರು. ಖಾತೆ ತೆರೆದವರಿಗೆ ಕಮಿಷನ್ ಕೊಡುತ್ತಿದ್ದರು. ಒಂದು ಒಡವೆಯನ್ನು ನಾಲ್ಕೈದು ಬಾರಿ ಅಡಮಾನ ಮಾಡಿ, ಹಣ ಪಡೆಯುತ್ತಿದ್ದರು. ಅದಕ್ಕಾಗಿ ನಕಲಿ ದಾಖಲಾತಿ ಸೃಷ್ಟಿ ಮಾಡುತ್ತಿದ್ದರು.
ಮಹಿಳೆಯರಿಂದ ಆರೋಪಿಗಳು ಪಡೆದ ಚಿನ್ನವನ್ನು ಪರಿಶೀಲನೆ ಮಾಡಲು ರಾಜೇಶ್ ಎಂಬ ಕುಶಲ ಕರ್ಮಿಯನ್ನು ನೇಮಕ ಮಾಡಿದ್ದರು. ಈತನ ನೇತೃತ್ವದಲ್ಲಿ ಕೋಟ್ಯಂತರ ಮೌಲ್ಯದ ಚಿನ್ನ ಕರಗಿಸಿ, ಪೇಟೆಬೀದಿ ಮುಖ್ಯರಸ್ತೆಯಲ್ಲಿರುವ ಪ್ರಸಿದ್ಧ ಚಿನ್ನದ ಮಳಿಗೆಯೊಂದರಲ್ಲಿ ಮಾರಾಟ ಮಾಡುತ್ತಿದ್ದರು.
ಇದನ್ನೂ ಓದಿ: ತಲೈವಾಗೆ ‘ದೇವರ ಎಚ್ಚರಿಕೆಯ ಕರೆ’! ಸದ್ಯಕ್ಕೆ ಪಕ್ಷ ಸ್ಥಾಪನೆ ಮಾಡದಿರಲು ರಜನಿಕಾಂತ್ ನಿರ್ಧಾರ
ಈಗ ಪೊಲೀಸರು ರಾಜೇಶ್‌ನನ್ನೂ ಬಂಧಿಸಿದ್ದು ಕರಗಿಸಿದ ಚಿನ್ನದ ಪ್ರಮಾಣ ತಿಳಿದು ಬಂದಿದೆ. ಮಾರಾಟ ಮಾಡಿರುವ ಚಿನ್ನದ ವಿವರವನ್ನು ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಪೇಟೆಬೀದಿ ಚಿನ್ನದಂಗಡಿಗೆ ದಾಳಿ ನಡೆಸಿದ ಪೊಲೀಸರು ಅಪಾರ ಮೌಲ್ಯದ ಚಿನ್ನದ ಬಿಸ್ಕತ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಹಿನ್ನೆಲೆ : ಹೆಚ್ಚು ಬಡ್ಡಿ ಆಸೆ ತೋರಿಸಿ ಮಹಿಳೆಯರಿಂದ ಚಿನ್ನ ಪಡೆದು ವಂಚನೆ ಮಾಡುತ್ತಿದ್ದರು. ಫೈನಾನ್ಸ್‌ನಲ್ಲಿ ಇಟ್ಟಿದ್ದ ಚಿನ್ನವನ್ನು ಅಕ್ರಮವಾಗಿ ಬಿಡಿಸಿ, ಅದನ್ನು ಕರಗಿಸಿ ಮಾರಾಟ ಮಾಡಿರುವ ಆರೋಪದ ಹಿನ್ನೆಲೆ ಮಂಡ್ಯದ ಆರ್‌ಪಿ ರಸ್ತೆ ಬಳಿಯ ಬ್ಯಾಂಕೊಂದರ ವ್ಯವಸ್ಥಾಪಕರಾಗಿದ್ದ ಶಂಕರ್, ಸಹಾಯಕ ವ್ಯವಸ್ಥಾಪಕಿ ಮತ್ತು ಚಿನ್ನ ಪರಿಶೀಲನೆ ನಡೆಸುತ್ತಿದ್ದ ರಾಜೇಶ್ ಎಂಬಾತನನ್ನು ಬಂಧಿಸಲಾಗಿತ್ತು.