ETV Bharat / state

ಮಂಡ್ಯ: ಬೆಂಗಳೂರು ಬಂದ್​ ಬೆಂಬಲಕ್ಕೆ ರೈತ ಹಿತರಕ್ಷಣಾ ಸಮಿತಿ ನಿರ್ಧಾರ - etv bharat karnataka

ಸೆ.26ರ ಬೆಂಗಳೂರು ಬಂದ್‌ಗೆ ಮಂಡ್ಯದಿಂದ ಹಿತರಕ್ಷಣಾ ಸಮಿತಿ ನಿಯೋಗ ತೆರಳಿ ಬೆಂಬಲ ನೀಡಲಿದ್ದೇವೆ ಎಂದು ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ತಿಳಿಸಿದರು.

mandya-farmers-welfare-committee-decision-to-support-bengaluru-bandh-in-september-26
ಮಂಡ್ಯ: ಬೆಂಗಳೂರು ಬಂದ್​ ಬೆಂಬಲಕ್ಕೆ ರೈತ ಹಿತರಕ್ಷಣಾ ಸಮಿತಿ ನಿರ್ಧಾರ
author img

By ETV Bharat Karnataka Team

Published : Sep 24, 2023, 5:51 PM IST

Updated : Sep 24, 2023, 9:39 PM IST

ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ

ಮಂಡ್ಯ: ನಿನ್ನೆಯಷ್ಟೆ ರೈತರ ಹೋರಾಟ ಮತ್ತೊಂದು ಸ್ವರೂಪವನ್ನು ಪಡೆದುಕೊಂಡು ಮಂಡ್ಯ ನಗರವನ್ನು ಬಂದ್ ಮಾಡಲಾಗಿತ್ತು. ಇಂದು ಯಾಥಾಸ್ಥಿತಿ ಮಂಡ್ಯದಲ್ಲಿ ಕಾವೇರಿ ಹೋರಾಟ ಮುಂದುವರಿದಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನಾ ಧರಣಿ ಮುಂದುವರೆದಿದೆ. ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ವಿಶ್ವೇಶ್ವರಯ್ಯ ಪ್ರತಿಮೆ‌ ಮುಂದೆ ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ.

ಇಂದಿನ ಪ್ರತಿಭಟನೆಗೆ ಎಲ್ಲಾ ಕನ್ನಡಪರ ಸಂಘಟನೆಗಳ ಮುಖಂಡರು, ರೈತ ಸಂಘಟನೆಗಳು ಸಾಥ್ ನೀಡಿದರು. ಪ್ರತಿಭಟನಾ ಧರಣಿಯಲ್ಲಿ ಮಾಜಿ ಪರಿಷತ್ ಸದಸ್ಯ ಕೆ ಟಿ ಶ್ರೀಕಂಠೇಗೌಡ, ಸುನಂದಾ ಜಯರಾಂ, ಮಾಜಿ ಶಾಸಕ ಜಿ ಬಿ ಶಿವಕುಮಾರ್, ಕನ್ನಡ ಸೇನೆ ಮಂಜು ಸೇರಿದಂತೆ ಹಲವರು ಭಾಗಿಯಾಗಿದ್ದರು. ಸೆಪ್ಟೆಂಬರ್ 26 ಬೆಂಗಳೂರು ಬಂದ್​ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ರೈತ ಹಿತರಕ್ಷಣಾ ಸಮಿತಿ ಮಹತ್ವದ ಸಭೆ ನಡೆಸಿತು. ಮಂಗಳವಾರ ಹೋರಾಟದ ಸ್ವರೂಪದ ಬಗ್ಗೆ ಚರ್ಚೆ ನಡೆಸಿದರು.

ಕಾವೇರಿ ನೀರು ಕುರಿತು ಶಾಸಕರ ಪ್ರತಿಕ್ರಿಯೆ

ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ನಮಗಾಗಿ ಬೆಂಗಳೂರು ಬಂದ್ ಕರೆ ನೀಡಲಾಗಿದೆ. ನಾವು ಅಂದು ಬಂದ್​ಗೆ ಬೆಂಬಲಿಸುವುದು ನಮ್ಮ ಕರ್ತವ್ಯ. ಸಭೆಯಲ್ಲಿ ಮಂಗಳವಾರದ ಹೋರಾಟದ ರೂಪುರೇಷೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಸೆ. 26ರ ಬಂದ್‌ಗೆ ಮಂಡ್ಯದಿಂದ ಹಿತರಕ್ಷಣಾ ಸಮಿತಿ ನಿಯೋಗ ತೆರಳಿ ಬೆಂಬಲ ನೀಡಲಿದ್ದೇವೆ. ಮಂಡ್ಯದಲ್ಲಿ ಎಂದಿನಂತೆ ಪ್ರತಿಭಟನೆ ಮುಂದುವರೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರದ ನಡೆ ನೋಡಿಕೊಂಡು ಪ್ರತಿಭಟನೆ ತೀವ್ರತೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಕಾವೇರಿ ಹೋರಾಟದಲ್ಲಿ ಮಳವಳ್ಳಿ ಕಾಂಗ್ರೆಸ್ ಶಾಸಕ ಪಿ ಎಂ ನರೇಂದ್ರಸ್ವಾಮಿ ಹಾಗೂ ದರ್ಶನ್ ಪುಟ್ಟಣ್ಣಯ್ಯ ಪ್ರತಿಭಟನೆಯಲ್ಲಿ ಭಾಗಿಯಾಗಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾನತಾಡಿ, ನೀರು ಬಿಟ್ಟು ಅಧಿಕಾರದಲ್ಲಿ ಇರುವವರು ನಮಗೆ ಅವಶ್ಯಕತೆ ಇಲ್ಲ. ನಮ್ಮ ಹೋರಾಟಕ್ಕೆ ಬರೋದಾದರೇ ರಾಜೀನಾಮೆ ಕೊಟ್ಟು ಬನ್ನಿ. ಈ ಹಿಂದೆ ಅಧಿಕಾರದಲ್ಲಿದ್ದಾಗಲೂ ಕಾಂಗ್ರೆಸ್ಸಿಗರು ಬಂದಿದ್ದರು. ನಮ್ಮ ಮುಂದೆ ಬಂದು ಒಂದು ಹನಿಯನ್ನೂ ನೀರು ಬಿಡಲ್ಲ ಅಂದಿದ್ದರು. ನೀರು ಬಿಟ್ಟರೇ ಒಂದು ಕ್ಷಣವೂ ಅಧಿಕಾರದಲ್ಲಿ ಇರಲ್ಲ ಅಂದಿದ್ದರು. ಹೀಗೇ ನೀರು ಬಿಟ್ಟರೇ ಕಾಂಗ್ರೆಸ್‌ನ ಒಬ್ಬರೂ ನಮ್ಮ ವೇದಿಕೆಗೆ ಬರಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಪಿ ಎಂ ನರೇಂದ್ರಸ್ವಾಮಿ ಮಾತನಾಡಿ, ನಮಗೇ ನೀರಿಲ್ಲ, ಕೆರೆ-ಕಟ್ಟೆಗಳು ತುಂಬಿಲ್ಲ. ನಮ್ಮ ಕ್ಷೇತ್ರದಲ್ಲಿ ಬೆಳೆಗಳು ಒಣಗಿ, ಭೂಮಿ ಬರಡಾಗ್ತಿದೆ. ಆ ದೃಶ್ಯವನ್ನ ಕಣ್ಣಲ್ಲಿ ನೋಡೋಕೆ ಆಗ್ತಿಲ್ಲ. ಈ ಬಗ್ಗೆ ನಮ್ಮ ಕ್ಷೇತ್ರಕ್ಕೆ ಬಂದು ನೋಡಿ. ಆದ್ರೂ, ತಮಿಳುನಾಡಿಗೆ ನೀರು ಬಿಡಲಾಗ್ತಿದೆ. ಈ ಬಗ್ಗೆ ನಿನ್ನೆ ಜಗಳವನ್ನೇ ಮಾಡಿದ್ದೇನೆ. ನಮ್ಮದೇ ಸರ್ಕಾರ ಇದ್ದು, ಆಡಳಿತ ಪಕ್ಷದ ಶಾಸಕನಾಗಿ ನಾನು ಅಸಹಾಯಕನಾಗಿದ್ದೇನೆ. ಇದೆಲ್ಲವನ್ನೂ ಬಹಿರಂಗವಾಗಿ ಹೇಳಲು ಆಗಲ್ಲ. ಸಮಯ ಬಂದಾಗ ಎಲ್ಲವೂ ನಿಮಗೇ ಅರಿವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕಾವೇರಿ ವಿಚಾರದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ನಿನ್ನೆ ಖುದ್ದು ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿ ಮಾತನಾಡಿದ್ದೇವೆ. ಸೆ.26 ರಂದು CWRC ಸಭೆ ಮುಂದೆ ನೀರು ಬಿಡಲು ಆಗಲ್ಲ ಎನ್ನುತ್ತೇವೆ ಎಂದಿದ್ದಾರೆ. ಅಂತಹ ದೃಢ ನಿರ್ಧಾರ ತೆಗೆದುಕೊಳ್ಳಬೇಕೆನ್ನುವುದು ಕೂಡ ನಮ್ಮ ಒತ್ತಾಯ. ಸೆ.29 ಕ್ಕೆ ಕರ್ನಾಟಕ ಬಂದ್​ಗೆ ಕರೆಕೊಡಲಾಗಿದೆ. ಕಾವೇರಿ ವಿಚಾರದಲ್ಲಿ ಯಾರೇ ಹೋರಾಟ ಮಾಡಿದರು ಅದಕ್ಕೆ ನಮ್ಮ ಬೆಂಬಲ ಇರುತ್ತೆ. ಒಗ್ಗಟ್ಟಾಗಿ ಒಂದೇ ವೇದಿಕೆಯಲ್ಲಿ ಹೋರಾಟ ನಡೆಸಲು ನಾವು ಕೂಡ ಪ್ರಯತ್ನ ಮಾಡ್ತೇವೆ ಎಂದರು.

ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ನರೇಂದ್ರಸ್ವಾಮಿ, ನಾನು ಶಾಸಕನೆಂಬುದ ಮರೆತು ರೈತನ ಮಗನಾಗಿ ಬಂದಿದ್ದೇನೆ. ನಾವೂ ಇಂದು ಆಡಳಿತ ಪಕ್ಷದಲ್ಲಿದ್ದೇವೆ. ಆದರೆ ಸಂಕಷ್ಟ ಸೂತ್ರ ಕಂಡುಕೊಳ್ಳದೆ ಎಲ್ಲರೂ ಲೋಪ ಎಸಗಿದ್ದೇವೆ. ಸಂಕಷ್ಟ ಸೂತ್ರಕ್ಕೆ ಎಲ್ಲ ರಾಜ್ಯಗಳು ಮುದ್ರೆ ಒತ್ತಿದರೇ ಎಲ್ಲರಿಗೂ ಸಮಪಾಲು-ಸಮಬಾಳು ಆಗುತ್ತೆ. ಆದರೆ ಅದಕ್ಕೆ ಮುಂದಾಗದೆ ಬಾಯಿ ಬಡಿದುಕೊಳ್ಳುವವರು ನಾವೇ. ಅನ್ಯಾಯ ಆಗುತ್ತಿರೋದು ನಮಗೆ. ಮಂಡ್ಯದ ನಾಗರೀಕನಾಗಿ ನೀರು ನಿಲ್ಲಿಸಬೇಕು ಅಂತಾ ಹೇಳ್ತೀನಿ‌. ಮಂಡ್ಯದ ಹಿತಕ್ಕಾಗಿ ಎಲ್ಲ ತ್ಯಾಗಕ್ಕೂ ನಾನು ಸಿದ್ಧ ಎಂದರು.

ಇದನ್ನೂ ಓದಿ: Cauvery water dispute: ರಾಜ್ಯದ ಬರ ಪರಿಸ್ಥಿತಿ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ಎಡವಿದೆ: ಹೆಚ್​ಡಿಕೆ ಆರೋಪ, ಮಂಡ್ಯ ಬಂದ್​ಗೆ ಉತ್ತಮ ಪ್ರತಿಕ್ರಿಯೆ

Last Updated : Sep 24, 2023, 9:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.