ಮಂಡ್ಯ: ಜಿಲ್ಲೆಯಲ್ಲಿ 806 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 57,429ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿಂದು 432 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 51,591 ಮಂದಿ ಚೇತರಿಕೆ ಕಂಡಿದ್ದಾರೆ. ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 5409ಕ್ಕೆ ತಲುಪಿದೆ. ಮಂಡ್ಯದಲ್ಲಿ ನಿನ್ನೆ 5 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈವರೆಗೆ ಒಟ್ಟು 427 ಮಂದಿ ಸಾವನ್ನಪ್ಪಿದ್ದಾರೆ.
ತಾಲೂಕುವಾರು ಪ್ರಕರಣಗಳ ವಿವರ:
ಮಂಡ್ಯ 147, ಮದ್ದೂರು 146, ಮಳವಳ್ಳಿ 138, ಪಾಂಡವಪುರ 88, ಶ್ರೀರಂಗಪಟ್ಟಣ 149, ಕೆ.ಆರ್.ಪೇಟೆ 77, ನಾಗಮಂಗಲ 57, ಹೊರ ಜಿಲ್ಲೆಯ 4 ಪ್ರಕರಣಗಳು ದಾಖಲಾಗಿವೆ.