ಮಂಡ್ಯ : ಚಿಂತಕ ಭಗವಾನ್ ಮುಖಕ್ಕೆ ವಕೀಲೆ ಮಸಿ ಬಳಿದ ವಿಚಾರಕ್ಕೆ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಜಾಮೀನು ನೀಡಲು ಮಂಡ್ಯದ ಬಿಜೆಪಿ ಕಾರ್ಯಕರ್ತ ಮುಂದಾಗಿದ್ದಾರೆ.
ವಕೀಲೆ ಮೀರಾ ರಾಘವೇಂದ್ರಗೆ ಬೇಲ್ ನೀಡಲು ಬಿಜೆಪಿ ಮುಖಂಡ ಉತ್ಸುಕ..
ಹಿಂದೂ ಧರ್ಮದ ಅವಹೇಳನ ಮಾಡುವ ಭಗವಾನ್ ಮುಖಕ್ಕೆ ಮಸಿ ಬಳಿದು ತಕ್ಕ ಶಾಸ್ತಿ ಮಾಡಿದ್ದಾರೆ ಎಂದರು. ತಂದೆ ತಾಯಿ ಅವರಿಗೆ ಭಗವಾನ್ ಎಂದು ಹೆಸರಿಟ್ಟಿದ್ದು, ಸಮಾಜಕ್ಕೆ ಒಳ್ಳೆಯದು ಮಾಡಲಿ ಎಂದು. ಆದ್ರೆ, ಅವರಿಗೆ ಪ್ರಾಣಿ ಪಕ್ಷಿಗಳ ಹೆಸರಿಡಬೇಕಿತ್ತು ಎಂದು ಚಿಂತಕ ಭಗವಾನ್ ಅವರನ್ನು ಟೀಕಿಸಿದರು.