ಮಂಡ್ಯ: ಗಡಿ ಪ್ರದೇಶ ನಿಡಘಟ್ಟದ ಬಳಿ ಕೇಕ್ ಕತ್ತರಿಸಿ ಅಂಬಿ ಜಯಂತ್ಯುತ್ಸವವನ್ನು ಆಚರಿಸಿದ ಅಭಿಮಾನಿಗಳು ಜಿಲ್ಲೆಗೆ ಆಗಮಿಸಿದ್ದ ಅಭಿಷೇಕ್ಗೆ ಅದ್ದೂರಿ ಸ್ವಾಗತ ಕೋರಿದರು.
ಮದ್ದೂರು ತಾಲೂಕು ಹೊಟ್ಟೇಗೌಡನ ದೊಡ್ಡಿ ಗ್ರಾಮಸ್ಥರು ಕೆಲವು ವರ್ಷಗಳಿಂದ ಅಂಬರೀಶ್ ಹುಟ್ಟಿದ ಹಬ್ಬವನ್ನು ಗ್ರಾಮದ ಹಬ್ಬದಂತೆ ಆಚರಿಸಿಕೊಂಡು ಬಂದಿದ್ದಾರೆ. ಈ ಬಾರಿ ಅಂಬರೀಶ್ ಇಲ್ಲದಿದ್ರೂ ಅವರ ಜಯಂತ್ಯುತ್ಸವವನ್ನು ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಅಂಬಿ ಪುತ್ರ ಅಭಿಷೇಕ್ ಪಾಲ್ಗೊಂಡಿದ್ದಕ್ಕೆ ಗ್ರಾಮಸ್ಥರ ಸಂಭ್ರಮ ಇಮ್ಮಡಿಯಾಗಿತ್ತು.
ಈ ವೇಳೆ ಅಭಿಷೇಕ್ಗೆ ಹಾರ ಹಾಕಿ, ಅವನ ಕೈಯಿಂದಲೇ ಕೇಕ್ ಕಟ್ ಮಾಡಿಸಿದರು. ನಂತರ ಅಭಿಗೆ ಶುಭ ಹಾರೈಸಿ, ಸಮಾವೇಶದೆಡೆಗೆ ಕಳುಹಿಸಿಕೊಟ್ಟರು. ಆಚರಣೆಯ ಕೊನೆಯಲ್ಲಿ ವಾಹನ ಸವಾರರಿಗೆ ಸಿಹಿ ಹಂಚಲಾಯಿತು.