ETV Bharat / state

ಪತ್ನಿಯ ಶೀಲ ಶಂಕಿಸಿ ಪತಿಯಿಂದ ಹತ್ಯೆ ಯತ್ನ: ಸತ್ತಳೆಂದು ಭಾವಿಸಿ ಆಕೆಯನ್ನು ರಸ್ತೆ ಬದಿ ಎಸೆದ?! - ಹೆಂಡತಿಯ ಶೀಲ ಶಂಕಿಸಿ ಕೊಲೆ ಯತ್ನ

ಪತ್ನಿಯ ಶೀಲ ಶಂಕಿಸಿದ ಗಂಡನೇ ಹೆಂಡತಿಗೆ ಮದ್ಯ ಕುಡಿಸಿ ಹಲ್ಲೆ ನಡೆಸಿ ಆಕೆಯನ್ನು ರಸ್ತೆ ಬದಿ ಬಿಸಾಡಿ ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ.

man tried to kill his wife at mandya
ಪತ್ನಿಯ ಶೀಲ ಶಂಕಿಸಿ ಪತಿಯಿಂದ ಹತ್ಯೆಗೆ ಯತ್ನ
author img

By

Published : Feb 24, 2022, 12:43 PM IST

ಮಂಡ್ಯ: ಪತ್ನಿಯ ಶೀಲ ಶಂಕಿಸಿದ ಗಂಡನೇ ಹೆಂಡತಿಯ ಕೊಲೆ ಮಾಡಲು ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ.

ಬಾಲಕೃಷ್ಣ ಎಂಬುವವನಿಂದ ಈ ಕೃತ್ಯ ನಡೆದಿದೆ. ಕಾರಿನಲ್ಲಿ ಪತ್ನಿಯನ್ನು ದೇವಾಲಯಕ್ಕೆಂದು‌ ಕರೆದೊಯ್ದು ಮದ್ಯ ಕುಡಿಸಿ ಹಲ್ಲೆ ನಡೆಸಿದ್ದಾನೆ. ಪರಿಣಾಮ, ಆಕೆ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಈ ವೇಳೆ ಪತ್ನಿ ಸತ್ತಳೆಂದು ಭಾವಿಸಿದ ಆರೋಪಿ ಆಕೆಯನ್ನು ರಸ್ತೆ ಬದಿ ಬಿಸಾಡಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ: 79 ಕ್ಯಾಪ್ಸುಲ್ ನುಂಗಿ ಸ್ಮಗ್ಲಿಂಗ್: ಹೊಟ್ಟೆಯಲ್ಲಿತ್ತು 7 ಕೋಟಿ ಮೌಲ್ಯದ ಹೆರಾಯಿನ್, ಬೆಂಗಳೂರಲ್ಲಿ ಆರೋಪಿ ಸೆರೆ

ತೀವ್ರವಾಗಿ ಗಾಯಗೊಂಡ ಮಹಿಳೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.