ಮಂಡ್ಯ: ಹೆಂಡತಿಯೊಡನೆ ಜಗಳವಾಡಿಕೊಂಡು ವ್ಯಕ್ತಿವೋರ್ವ ಗ್ರಾಮದಲ್ಲಿರುವ ಬಿಎಸ್‌ಎನ್ಎಲ್ ಟವರ್ ಏರಿ ಕುಳಿತ ಘಟನೆ ಮದ್ದೂರು ತಾಲೂಕಿನ ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ನವಿಲೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶೀನಪ್ಪ (35) ಎಂಬ ವ್ಯಕ್ತಿ ಮೂಗನಾಗಿದ್ದು, ಈತ 2 ದಿನಗಳಿಂದ ಮನೆಯಲ್ಲಿ ಊಟ ಮಾಡದೆ, ಹೆಂಡತಿ ಹಾಗೂ ಮಕ್ಕಳೊಂದಿಗೆ ಜಗಳ ಮಾಡಿಕೊಂಡು ಬೆಳಗ್ಗೆ ಟವರ್ ಏರಿದ್ದಾನೆ. ಇದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು, ಶೀನಪ್ಪ ಅವರ ಮನೆಯವರಿಗೆ ವಿಷಯ ತಿಳಿಸಿದರು. ಅವರು ಟವರ್ ಬಳಿ ಬಂದು ಕೆಳಗೆ ಇಳಿಯುವಂತೆ ಕೇಳಿಕೊಂಡರು ಶೀನಪ್ಪ ಸ್ಪಂದಿಸಲಿಲ್ಲ.
ಈ ವೇಳೆ ಅವರ ಸಹೋದರರು, ಸಂಬಂಧಿಕರು ಸೇರಿ ಕೆಳಗಿಳಿಸಲು ಟವರ್ ಏರುತ್ತಿದ್ದಂತೆ ಕೆಳಗೆ ಬಿದ್ದು ಬಿಡುತ್ತೇನೆ ಎಂದು ಒಂದು ಕಾಲನ್ನು ಕೆಳಗೆ ಹಾಕಿ ಹೆದರಿಸಲಾರಂಭಿಸಿದ. ಬಳಿಕ ಕೆಸ್ತೂರು ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಟವರ್‌ಗೆ ಏಣಿ ಇರಿಸಿ ಅವರನ್ನು ಇಳಿಸಲು ಪ್ರಯತ್ನಿಸಿದಾಗ ಕೆಳಗೆ ಹಾರುವುದಾಗಿ ಬೆದರಿಸಿದ್ದಾನೆ. ಹೀಗಾಗಿ, ಸದ್ಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಸಂಬಂಧಿಕರು ಶೀನಪ್ಪನನ್ನು ಕೆಳಗಿಯುವಂತೆ ಮನವೊಲಿಸಿದರು.
ಇದನ್ನೂ ಓದಿ: ಮೈಸೂರಲ್ಲಿ ಆಸ್ಪತ್ರೆ ಗ್ರಿಲ್ ಮುರಿದು ಬಂದು ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ!