ಮಂಡ್ಯ : ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ಗಲಾಟೆ ನಡೆದಿದ್ದು, ಆಕ್ರೋಶಗೊಂಡ ಸಹೋದರ ಅಣ್ಣನನ್ನು ಕೊಲೆಗೈದು, ಅತ್ತಿಗೆಗೆ ಚಾಕುವಿನಿಂದ ಇರಿದಿರುವ ಘಟನೆ ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ಬಾಲಕೃಷ್ಣ (54) ಹತ್ಯೆಯಾದ ವ್ಯಕ್ತಿ. ಇವರ ಪತ್ನಿ ಸರಳ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತನ ತಮ್ಮ ಸುರೇಶ್ ಎಂಬಾತ ಕೊಲೆಗೈದ ಆರೋಪಿಯಾಗಿದ್ದಾನೆ.

ಸುರೇಶ್ ಮತ್ತು ಬಾಲಕೃಷ್ಣ ನಡುವೆ ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ಜಗಳ ಶುರುವಾಗಿತ್ತು. ಈ ವೇಳೆ ಸುರೇಶ್ ಕುಪಿತಗೊಂಡು ಚಾಕುವಿನಿಂದ ತನ್ನ ಅಣ್ಣ ಬಾಲಕೃಷ್ಣ ಹಾಗೂ ಅತ್ತಿಗೆ ಸರಳಗೆ ಇರಿದಿದ್ದಾನೆ.
ಓದಿ : ಬೈಕ್ ಅಡ್ಡಗಟ್ಟಿ ಸುಲಿಗೆ: ದೊಡ್ಡಬಳ್ಳಾಪುರದಲ್ಲಿ ಮೂವರ ಬಂಧನ
ಚಾಕು ಇರಿತದಿಂದ ಗಾಯಗೊಂಡ ಬಾಲಕೃಷ್ಣ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಅವರ ಪತ್ನಿ ಸರಳ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆರೋಪಿ ಸುರೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪಾಂಡವಪುರ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.