ಮಂಡ್ಯ: ಮದ್ದೂರು ಸಂಚಾರಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಪಟ್ಟಣದ ಪೊಲೀಸ್ ಠಾಣೆ ಮತ್ತು ಸಂಚಾರಿ ಪೊಲೀಸ್ ಠಾಣೆಗಳನ್ನು ಸೀಲ್ಡೌನ್ ಮಾಡಲಾಗಿದೆ.
ಮದ್ದೂರು ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲೂ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಮದ್ದೂರಿನ ಲೀಲಾವತಿ ಬಡಾವಣೆ, ಕೂಳಗೆರೆ, ಹಾಗಲಹಳ್ಳಿ ಗ್ರಾಮದಲ್ಲೂ ಸೋಂಕಿತ ಕೇಸುಗಳಿವೆ ಎಂದು ಹೇಳಲಾಗಿದೆ.