ETV Bharat / state

ಮೈಶುಗರ್ ತೆಗೆದು ರಾಕ್ ಶುಗರ್ ಅಂತ ಇಡೋಣ : ಶಾಸಕ ಸುರೇಶ್‌ಗೌಡ

author img

By

Published : Jul 12, 2021, 5:12 PM IST

ಶುಗರ್ ಫ್ಯಾಕ್ಟರಿನ ಪ್ರೈವೇಟ್ ಮಾಡಬಾರದು. ರಾಕ್ ಶುಗರ್ ಚೆನ್ನಾಗಿದೆ, ಕಲ್ಲು ಸಕ್ಕರೆ ಅಂತಾ ತಿಳ್ಕೋಬಹುದು. ಅರ್ಥವಾಗುವವರಿಗೆ ಅರ್ಥವಾಗುತ್ತೆ. ಯಾವುದೇ ರಾಜಕಾರಣಿ ಸ್ವಾರ್ಥ ಇಲ್ಲದೆ ಯಾವ ಕೆಲಸಾನೂ ಮಾಡಲ್ಲ..

gowda
ಶಾಸಕ ಸುರೇಶ್‌ಗೌಡ ಪ್ರತಿಕ್ರಿಯೆ

ಮಂಡ್ಯ : 'ಮೈ ಶುಗರ್ ತೆಗೆದು ರಾಕ್ ಶುಗರ್ ಅಂತಾ ಇಡೋಣ' ಎಂದು ಶಾಸಕ ಸುರೇಶ್‌ಗೌಡ ಪರೋಕ್ಷವಾಗಿ ಮೈ ಶುಗರ್ ಮೇಲೆ ರಾಕ್‌ಲೈನ್ ವೆಂಕಟೇಶ್‌ ಕಣ್ಣು ಇದೆ ಎಂದು ಹೇಳಿದರು‌. ನಾಗಮಂಗಲದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಶುಗರ್ ಮುಚ್ಚಲು ಮಾಜಿ ಸಿಎಂ ಕಾರಣ ಎಂಬ ನರೇಂದ್ರ ಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಇದ್ದಾಗ ಯಾಕೆ ಓಪನ್ ಮಾಡ್ಸಿಲ್ಲಾ..? ಎಂದು ಪ್ರಶ್ನಿಸಿದ್ರು.

ಶಾಸಕ ಸುರೇಶ್‌ಗೌಡ ಪ್ರತಿಕ್ರಿಯೆ

ಕಾರ್ಖಾನೆಯಲ್ಲಿರುವ ಶುಗರ್ ಮಾರಾಟ ಮಾಡಿದ್ರೆ ಫ್ಯಾಕ್ಟರಿ ಪ್ರಾರಂಭವಾಗುತ್ತೆ :

ಇಡೀ ದೇಶದಲ್ಲಿ ಮಂಡ್ಯ ಬಿಟ್ರೇ ಶುಗರ್ ಫ್ಯಾಕ್ಟರಿ ಬೀದರ್​ನಲ್ಲಿದೆ. ಆದ್ರೆ, ಶುಗರ್ ಫ್ಯಾಕ್ಟರಿಯಿಂದ ರೈತರಿಗೆ ಆಗುವ ಅನುಕೂಲ, ಅನಾನುಕೂಲ ಬಗ್ಗೆ ತಿಳಿಯಲು ಸರ್ಕಾರದ್ದೇ ಸಂಸ್ಥೆ ಬೇಕು. ಅದಕ್ಕೆ ನಾವು ಸರ್ಕಾರವೇ ಇದನ್ನು ನಡೆಸುವಂತೆ ಒತ್ತಾಯ ಮಾಡ್ತಿರೋದು. ಹೀಗಾಗಿ, ಅಲ್ಲಿರುವ ಶುಗರ್ ಮಾರಾಟ ಮಾಡಿದ್ರೆ ಕಾರ್ಖಾನೆ ಪ್ರಾರಂಭವಾಗುತ್ತೆ ಎಂದರು‌.

ಕೆಲವರು ಜಿಲ್ಲೆಯ ಆಸ್ತಿ ಹೊಡೆಯೋಕೆ ಸಂಚು ಮಾಡ್ತಿದ್ದಾರೆ :

ಕೆಲವರು ಏನಾದ್ರೂ ಮಾಡಿ ಜಿಲ್ಲೆಯ ಆಸ್ತಿ ಹೊಡೆಯಲು ಸಂಚು ಮಾಡ್ತಿದ್ದಾರೆ. ಮೊದಲ ಸಭೆಯಲ್ಲೇ ಬೆಂಗಳೂರಿನಲ್ಲಿ ಸಕ್ಕರೆ ಮಂತ್ರಿಗೆ ಹೇಳಿದ್ದೇನೆ. ಸಭೆಯಲ್ಲಿ ಶಾಸಕರು, ಮಂಡ್ಯದ ರೈತ ವರ್ಗದವರು, ಸರ್ಕಾರ ಕಾರ್ಖಾನೆ ನಡೆಸುವಂತೆ ಒತ್ತಾಯ ಮಾಡ್ತಿದ್ದಾರೆ. ಆದರೆ, MP ಮಾತ್ರ ಪ್ರೈವೇಟ್ ಮಾಡುವಂತೆ ಮಾತನಾಡಿದ್ದಾರೆ.

ಸಭೆ ಮುಗಿದ ಮೇಲೆ ಹೊರಗೆ ಬಂದ್ರೆ ಚೇಂಬರ್​ನಲ್ಲಿ ಒಬ್ಬರು ಪುಣ್ಯಾತ್ಮ ಕುಳಿತಿದ್ರು.. ಎಂದು ರಾಕ್​ಲೈನ್ ಹೆಸರು ಹೇಳದೆ ಮೈಶುರ್ ತೆಗೆದುಕೊಳ್ಳಲು ರಾಕ್​ಲೈನ್ ವೆಂಕಟೇಶ್​​ ಮುಂದಾಗಿದ್ದಾರೆ ಎಂದು ತಿಳಿಸಿದರು. ಈ ಸಭೆಗೆ ಇವರು ಯಾಕೆ ಬಂದಿದ್ದಾರೆ ಅಂತಾ ಅನುಮಾನ ಬಂತು. ಈ ಎಲ್ಲಾ ಎಪಿಸೋಡ್​ಗಳಿಗೂ ಶುಗರ್ ಫ್ಯಾಕ್ಟರಿನೂ ಒಂದು ಕಾರಣ.

ಶುಗರ್ ಫ್ಯಾಕ್ಟರಿನ ಪ್ರೈವೇಟ್ ಮಾಡಬಾರದು. ರಾಕ್ ಶುಗರ್ ಚೆನ್ನಾಗಿದೆ, ಕಲ್ಲು ಸಕ್ಕರೆ ಅಂತಾ ತಿಳ್ಕೋಬಹುದು ಎಂದರು‌. ಅರ್ಥವಾಗುವವರಿಗೆ ಅರ್ಥವಾಗುತ್ತೆ. ಯಾವುದೇ ರಾಜಕಾರಣಿ ಸ್ವಾರ್ಥ ಇಲ್ಲದೆ ಯಾವ ಕೆಲಸಾನೂ ಮಾಡಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ನರೇಂದ್ರಸ್ವಾಮಿಗೆ ಟಾಂಗ್ ನೀಡಿದರು‌.

ಸಂಸದೆ ವಿರುದ್ಧ ಮಾತನಾಡದಂತೆ ಹೆಚ್‌ಡಿಕೆ ಸೂಚನೆ :

ಚಿಲ್ಲರೆ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ. ನಾವ್ಯಾರೂ ತಲೆಕೆಡಿಸಿಕೊಳ್ಳಲ್ಲ ಎಂದು ತಿಳಿಸಿದರು.

ಕನ್ನಡವನ್ನ ಈಗ ಕಲಿತುಕೊಳ್ತೇವೆ :

ಸುಮಲತಾ ಅವರು ಸಿಕ್ಕಾಪಟ್ಟೆ ದೊಡ್ಡವರು. ನಮಗೆ ಕನ್ನಡ ಸರಿಯಾಗಿ ಗೊತ್ತಿಲ್ಲ, ಕನ್ನಡವನ್ನ ಈಗ ಕಲಿತುಕೊಳ್ತೇವೆ. ನಿಘಂಟು, ಪದಕೋಶದಲ್ಲಿ ಅರ್ಥ ಹುಡುಕಿ ಕೊಳ್ತೀವಿ ಎಂದು ಸಂಸದೆ ಸುಮಲತಾ ವಿರುದ್ಧ ನಾಗಮಂಗಲ ಶಾಸಕ ಸುರೇಶ್ ಗೌಡ ವ್ಯಂಗ್ಯವಾಡಿದರು.

ವಜ್ರಮುನಿ ಒಳ್ಳೆ ನಟ :

ವಜ್ರಮುನಿ ಬಗ್ಗೆ ಮಾತನಾಡಿರೋದು ತಪ್ಪು. ತಪ್ಪಿನ ಅರಿವಾಗಿ ರಾಕ್​ಲೈನ್ ತಪ್ಪು ಒಪ್ಪಿಕೊಂಡಿದ್ದಾರೆ. ಮಾತನಾಡೋರಿಗೆ ಅರಿವಾದ್ರೆ ಸಾಕು ಅಂದ್ರು. ವಜ್ರಮುನಿ ನಾನು ಜೊತೆಯಲ್ಲಿದ್ದವರು, ಒಳ್ಳೆಯ ನಟರು. ವಜ್ರಮುನಿಯಂತಹ ನಟರನ್ನ ಯಾವ ಜನ್ಮದಲ್ಲಿಯೂ ನೋಡೋಕೆ ಆಗಲ್ಲ. ಒಳ್ಳೆಯ ಮನುಷ್ಯರಾಗಿದ್ದರು, ನಮ್ಮ ತಾಲೂಕಿನಲ್ಲಿ ಸಂಬಂಧಿಕರಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.