ಮಂಡ್ಯ: ಆಸ್ತಿ ವಿಚಾರಕ್ಕೆ ಗಲಾಟೆ ಮಾಡಿಕೊಂಡ ಎರಡು ಕುಟುಂಬ ಸದಸ್ಯರಲ್ಲಿ 8 ಮಂದಿ ವಿಷ ಸೇವಿಸಿದ ಘಟನೆ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟರೆ, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ.
ಜಮೀನಿನ ವಿಚಾರವಾಗಿ ಶ್ರೀನಿವಾಸ್ ಮತ್ತು ಮರಂಕಯ್ಯ ಎರಡು ಕುಟುಂಬಗಳ ನಡುವೆ ಜಗಳವಾಗಿದೆ. ಜಗಳದ ನಡುವೆ ಓರ್ವ ಮಹಿಳೆ ವಿಷ ಸೇವಿಸಿದ್ದಾಳೆ. ಇದರಿಂದ ಮತ್ತೊಂದು ಕುಟುಂಬದ ಸದಸ್ಯರು ಭಯಗೊಂಡು ಅವರೂ ವಿಷ ಸೇವಿಸಿದ್ದಾರೆ. ಹೀಗೆ ಎರಡೂ ಕುಟುಂಬದ 8 ಮಂದಿ ವಿಷ ಸೇವಿಸಿ ಅಸ್ವಸ್ಥ ಗೊಂಡಿದ್ದಾರೆ. ಈ ವೇಳೆ ಶೈಲಾ (35) ಎಂಬವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಇನ್ನಿಬ್ಬರು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಮಿಮ್ಸ್ಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ವಿಷ ಸೇವಿಸಿದ್ದ ಪ್ರೇಮಾ , ನಾರಾಯಣ್ , ತಿಮ್ಮಮ್ಮ , ಉತ್ತರಪ್ಪ , ಕರಿಯಪ್ಪ , ಸಿದ್ದೇಶ್ , ಜಯಮ್ಮ ಎಂಬವರಿಗೆ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ.