ETV Bharat / state

ಅಧಿಕಾರಿಗಳ ಯಡವಟ್ಟಿಗೆ ಮಕ್ಕಳಿಗೆ ಶಿಕ್ಷೆ: ಭಯದಲ್ಲೇ ವ್ಯಾಸಂಗ, ಬಯಲೇ ಶೌಚಾಲಯ! - undefined

ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮಂಡ್ಯ ತಾಲೂಕಿನ ಹುಲಿ ಕೆರೆ ಕೊಪ್ಪಲು ಬಳಿಯ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಪರಿಸ್ಥಿತಿ ಹೇಳತೀರದಾಗಿದ್ದು, ರಾತ್ರಿ ಸಮಯ ಭಯದಿಂದಲೇ ವ್ಯಾಸಂಗ ಮಾಡಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಭಯದಲ್ಲೇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು
author img

By

Published : Jul 4, 2019, 11:55 PM IST

ಮಂಡ್ಯ: ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸರ್ಕಾರ ವಸತಿ ಶಾಲೆಗಳನ್ನು ಆರಂಭಿಸಿದೆ. ಸ್ವಂತ ಕಟ್ಟಡ ಇಲ್ಲದ ಶಾಲೆಗಳಿಗೆ ಸುಸಜ್ಜಿತ ಮನೆ ಬಾಡಿಗೆಗೂ ಅವಕಾಶ ನೀಡಿದೆ. ಆದರೆ ಅಧಿಕಾರಿಗಳ ಯಡವಟ್ಟಿಗೆ ಬಡವರ ಮಕ್ಕಳು ಅರಣ್ಯದ ಮಧ್ಯೆ ವಾಸಿಸುವ ಪರಿಸ್ಥಿತಿ ತಾಲೂಕಿನ ಹುಲಿಕೆರೆ ಕೊಪ್ಪಲು ಬಳಿ ಕಂಡುಬಂದಿದೆ.

ಭಯದಲ್ಲೇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು

ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮಂಡ್ಯ ತಾಲೂಲ್ಲೂಕಿನ ಹುಲಿಕೆರೆ ಕೊಪ್ಪಲು ಬಳಿಯ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಪರಿಸ್ಥಿತಿ ಹೇಳತೀರದಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಈ ಶಾಲೆಯಲ್ಲಿ 150 ಮಕ್ಕಳಿದ್ದಾರೆ. ಗ್ರಾಮದಿಂದ ಸುಮಾರು 2 ಕಿ.ಮೀ. ದೂರದ ಅರಣ್ಯ ಪ್ರದೇಶದಲ್ಲಿ ಮದುವೆ ಮಂಟಪವನ್ನು ಬಾಡಿಗೆಗೆ ಪಡೆದು ವಸತಿ ಶಾಲೆ ಆರಂಭ ಮಾಡಲಾಗಿದೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಈ ವಸತಿ ಶಾಲೆಯ ಮಕ್ಕಳು ರಾತ್ರಿ ಸಮಯ ಭಯದಿಂದಲೇ ವ್ಯಾಸಂಗ ಮಾಡಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಮೂಲ ಸೌಲಭ್ಯವೇ ಇಲ್ಲದ ಈ ಕಟ್ಟಡದಲ್ಲೇ ಮಕ್ಕಳು ವಾಸವಿದ್ದಾರೆ. ಈ ಶಾಲೆಗೆ ಹುಲಿಕೆರೆ ಅರಣ್ಯ ಪ್ರದೇಶ ಹೊಂದಿಕೊಂಡಿದ್ದು, ರಾತ್ರಿ ವೇಳೆ ಚಿರತೆಗಳ ಹಾವಳಿ ಹೆಚ್ಚಿದೆ. ಜೊತೆಗೆ ನಿರ್ಜನ ಪ್ರದೇಶವಾಗಿದ್ದು, ಭಯದಿಂದಲೇ ಪಾಠ ಕೇಳುತ್ತಿದ್ದಾರೆ. ಗಂಡು ಮಕ್ಕಳಿಗಾಗಿ ಹೊರಗೆ ಸ್ನಾನದ ಮನೆ ಹಾಗೂ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ ನೀರಿನ ಸಮಸ್ಯೆ ಜೊತೆಗೆ, ಕಾಡು ಪ್ರಾಣಿಗಳ ಭಯ ಕಾಡುತ್ತಿದೆ. ಇನ್ನು ಹೆಣ್ಣುಮಕ್ಕಳಿಗೆ ಒಳಗೆ ಶೌಚಾಲಯ ಇದ್ದರೂ ವಾರಕ್ಕೆ ಎರಡು ದಿನ ಮಾತ್ರ ನೀರು ಕೊಡಲಾಗುತ್ತಿದೆಯಂತೆ. ಸ್ನಾನ ಎರಡು ದಿನಗಳಿಗೊಮ್ಮೆ ಮಾಡಬೇಕು. ದುರದೃಷ್ಟವೆಂದರೆ ಇಲ್ಲಿರುವುದು ಮೂರೇ ರೂಂ. ಇಲ್ಲೇ ಪಾಠ ಕೇಳಬೇಕು, ಮಲಗಬೇಕು, ಪಾಠದ ಅಭ್ಯಾಸ ಮಾಡಬೇಕು. ಜೊತೆಗೆ ಶಿಕ್ಷಕರೂ ಸಹ ಇಲ್ಲೇ ಮಲಗಬೇಕಂದು ವಿದ್ಯಾರ್ಥಿಗಳು ಹೇಳುತ್ತಾರೆ.

ಇನ್ನು ಉತ್ತಮ ಕಟ್ಟಡ ನಿರ್ಮಾಣ ಮಾಡಿಕೊಡಬೇಕಾದ ಅಧಿಕಾರಿಗಳು ಇಂತಹ ಕಟ್ಟಡಕ್ಕೆ ಮಕ್ಕಳನ್ನು ಸಾಗಹಾಕಿ ಕೈ ತೊಳೆದುಕೊಂಡಿದ್ದಾರೆ. ಮಕ್ಕಳು ಭಯದಲ್ಲೇ ಪಾಠ ಕೇಳಬೇಕಾದ ಪರಿಸ್ಥಿತಿ ಇಲ್ಲಿದೆ.

Intro:ಮಂಡ್ಯ: ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸರ್ಕಾರ ವಸತಿ ಶಾಲೆಗಳನ್ನು ಆರಂಭ ಮಾಡಿದೆ. ಸ್ವಂತ ಕಟ್ಟಡ ಇಲ್ಲದ ಶಾಲೆಗಳಿಗೆ ಸುಸಜ್ಜಿತ ಮನೆ ಬಾಡಿಗೆಗೂ ಅವಕಾಶ ನೀಡಿದೆ. ಆದರೆ ಅಧಿಕಾರಿಗಳ ಯಡವಟ್ಟಿಗೆ ಬಡವರ ಮಕ್ಕಳು ಅರಣ್ಯದ ಮಧ್ಯೆ ವಾಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದೂ ಗೋಡಾನ್ ರೀತಿಯ ಕೊಠಡಿಯಲ್ಲಿ. ಅಲ್ಲೇ ಪಾಠ, ಅಲ್ಲೇ ಊಟ, ಅಲ್ಲೇ ನಿದ್ರೆ ಮಾಡಬೇಕು. ಬಯಲೇ ಶೌಚಾಲಯವಾದರೆ, ಇನ್ನು ಹೆಣ್ಣು ಮಕ್ಕಳ ಪರಿಸ್ಥಿತಿಯೇ ಬೇರೆ. ಹಾಗಾದರೆ ಅಲ್ಲಿನ ಮಕ್ಕಳ ಮೂಕ ವೇದನೆ ಇಲ್ಲಿದೆ ನೋಡಿ.

Body:ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮಂಡ್ಯ ತಾಲ್ಲೂಕಿನ ಹುಲಿ ಕೆರೆ ಕೊಪ್ಪಲು ಬಳಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಯಾತನೆಯ ಪರಿಸ್ಥಿತಿ ಹೇಳ ತೀರದಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಈ ಶಾಲೆಯಲ್ಲಿ 150 ಮಕ್ಕಳಿದ್ದಾರೆ. ಗ್ರಾಮದಿಂದ ಸುಮಾರು ಎರಡು ಕಿಲೋ ಮೀಟರ್ ದೂರದ ಅರಣ್ಯ ಪ್ರದೇಶದಲ್ಲಿ ಮದುವೆ ಮಂಟಪವನ್ನು ಬಾಡಿಗೆಗೆ ಪಡೆದು ವಸತಿ ಶಾಲೆ ಆರಂಭ ಮಾಡಲಾಗಿದೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಈ ವಸತಿ ಶಾಲೆಯ ಮಕ್ಕಳು ರಾತ್ರಿ ಸಮಯ ಭಯದಿಂದಲೇ ವ್ಯಾಸಂಗ ಮಾಡಬೇಕಾಗಿದೆ.
ಮೂಲ ಸೌಲಭ್ಯವೇ ಇಲ್ಲದ ಈ ಕಟ್ಟಡದಲ್ಲೇ ಮಕ್ಕಳು ವಾಸವಾಗಿದ್ದಾರೆ.
ಈ ಶಾಲೆಗೆ ಹುಲಿಕೆರೆ ಅರಣ್ಯ ಪ್ರದೇಶ ಹೊಂದಿಕೊಂಡಿದೆ. ರಾತ್ರಿ ವೇಳೆ ಈ ವ್ಯಾಪ್ತಿಯಲ್ಲಿ ಚಿರತೆಗಳ ಹಾವಳಿ ಹೆಚ್ಚಿದೆ. ಜೊತೆಗೆ ನಿರ್ಜನ ಪ್ರದೇಶವಾಗಿದ್ದು, ಭಯದಿಂದಲೇ ಪಾಠ ಕೇಳುತ್ತಿದ್ದಾರೆ. ಗಂಡು ಮಕ್ಕಳಿಗಾಗಿ ಹೊರಗೆ ಸ್ನಾನದ ಮನೆ ಹಾಗೂ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ ನೀರಿನ ಸಮಸ್ಯೆ ಜೊತೆಗೆ, ಕಾಡು ಪ್ರಾಣಿಗಳ ಭಯ ಕಾಡುತ್ತಿದೆ. ಬಟ್ಟೆ ಸ್ವಚ್ಛ ಮಾಡಿದರೆ ಬಯಲಿನಲ್ಲೇ ಹೊಣಗಿಸಬೇಕು. ಹೆಣ್ಣು ಮಕ್ಕಳಿಗೆ ಒಳಗೆ ಶೌಚಾಲಯ ಇದ್ದರೂ ವಾರಕ್ಕೆ ಎರಡು ದಿನ ಮಾತ್ರ ಸ್ನಾನಕ್ಕೆ ನೀರು ಕೊಡಲಾಗುತ್ತಿದೆ. ಬಿಸಿ ನೀರು ಬೇಕು ಎಂದರೆ ಹೊರಗೆ ಸಿದ್ದಪಡಿಸಿಕೊಂಡು ಒಳಗೆ ತೆಗೆದುಕೊಂಡು ಹೋಗಬೇಕು.
ಇರುವುದು ಮೂರೇ ರೂಮ್‌ಗಳು, ಇಲ್ಲೇ ಪಾಠ ಕೇಳಬೇಕು, ಮಲಗಬೇಕು. ಪಾಠದ ಅಭ್ಯಾಸ ಮಾಡಬೇಕು. ಶಿಕ್ಷಕರೂ ಇಲ್ಲೇ ಮಲಗಬೇಕು. ರಾತ್ರಿಯಾದರೇ ಗಂಡು ಮಕ್ಕಳು ಹೆಣ್ಣು ಮಕ್ಕಳ ಶೌಚಾಲಯ ಉಪಯೋಗಿಸಬೇಕಾದ ಪರಿಸ್ಥಿತಿ ಇಲ್ಲಿದೆ. ಉತ್ತಮ ಕಟ್ಟಡ ನೋಡಬೇಕಾದ ಅಧಿಕಾರಿಗಳು ಇಂತಹ ಕಟ್ಟಡಕ್ಕೆ ಮಕ್ಕಳನ್ನು ಸಾಗಹಾಕಿ ಕೈ ತೊಳೆದುಕೊಂಡಿದ್ದಾರೆ. ಮಕ್ಕಳು ಭಯದಲ್ಲೇ ಪಾಠ ಕೇಳಬೇಕಾದ ಪರಿಸ್ಥಿತಿ ಇಲ್ಲಿದೆ. ಜೊತೆಗೆ ಕಳ್ಳರ ಹಾವಳಿಯೂ ಇಲ್ಲಿದ್ದು, ಅಧಿಕಾರಿಗಳು ಕಣ್ಣಿದ್ದು ಕುರುಡಾಗಿದ್ದಾರೆ.
ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಕ್ಷೇತ್ರದಲ್ಲಿ ಈ ಶಾಲೆ ಇದೆ. ಶಾಲೆ ಆರಂಭವಾಗಿ 3 ವರ್ಷವಾದರೂ ಸರ್ಕಾರಿ ಜಾಗ ಗುರುತು ಮಾಡಿ ಕಟ್ಟಡ ಕಟ್ಟುವುದಿರಲಿ, ಉತ್ತಮ ಸ್ಥಿತಿಯ ಕಟ್ಟಡ ಬಾಡಿಗೆ ಪಡೆಯೋದರಲ್ಲಿ ಅಧಿಕಾರಿಗಳು ಕುರುಡರಾಗಿದ್ದಾರೆ. ಈ ಮಕ್ಕಳ ಮೂಕ ವೇದನೆಗೆ ಇನ್ನಾದರೂ ಉತ್ತರ ಸಿಗಬೇಕಾಗಿದೆ.

ಬೈಟ್:
೧. ಹರಿಶ್ರೀ, ವಿದ್ಯಾರ್ಥಿ
೨. ಮಂಜುನಾಥ್, ವಿದ್ಯಾರ್ಥಿ ( ಕಪ್ಪಗೆ ಇರುವವ)
೩. ನಾಗರಾಜು, ವಿದ್ಯಾರ್ಥಿ.

ಪಿಟುಸಿ ಇದೆ.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.