ETV Bharat / state

KRS Reservoir: 104 ಅಡಿ ತಲುಪಿದ ಕೆಆರ್‌ಎಸ್‌ ಅಣೆಕಟ್ಟೆಯ ನೀರಿನ ಮಟ್ಟ: ರೈತರ ಮೊಗದಲ್ಲಿ ಸಂತಸ- ವಿಡಿಯೋ - KRS Reservoir water level

KRS Reservoir water level: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ಇಂದು ಬೆಳಗ್ಗೆ 104.80 ಅಡಿ ತಲುಪಿದೆ.

krs dam
ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ಹೆಚ್ಚಳ
author img

By

Published : Jul 26, 2023, 12:13 PM IST

ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ಹೆಚ್ಚಳ

ಮಂಡ್ಯ : ಕಾವೇರಿ ನದಿಯ ಉಗಮ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಮಂಡ್ಯ ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟೆಯ (ಕೆಆರ್‌ಎಸ್‌) ನೀರಿನ ಮಟ್ಟ 100 ಅಡಿ ತಲುಪಿದೆ. ಡ್ಯಾಂಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಹೆಚ್ಚಳವಾಗುತ್ತಿದ್ದು, ಕಾವೇರಿ ಜಲಾಶಯಕ್ಕೆ ಜೀವಕಳೆ ತಂದಿದೆ. ಕಳೆದ 24 ಗಂಟೆಯಲ್ಲಿ 4 ಟಿಎಂಸಿ ನೀರು ಹರಿದು ಬಂದಿದೆ.

ಇಂದು ಬೆಳಗ್ಗೆ 51,508 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಮಂಗಳವಾರ ಸಂಜೆ 100 ಅಡಿಗೆ ನೀರು ತಲುಪಿದೆ. ಇಂದು ಬೆಳಗ್ಗೆ ಜಲಾಶಯದಲ್ಲಿ 104.80 ಅಡಿ ನೀರಿದ್ದು, ಒಂದೇ ದಿನದಲ್ಲಿ 5 ಅಡಿ ಜಲಧಾರೆ ಅಣೆಕಟ್ಟೆಯ ಒಡಲು ಸೇರಿದೆ.

ಇನ್ನೊಂದೆಡೆ, ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ದಿನದಿನಕ್ಕೂ ಹೆಚ್ಚಳವಾಗುತ್ತಿರುವುದು ರೈತರ ಬದುಕಿನಲ್ಲಿ ಹರುಷ ಮೂಡಿಸಿದೆ. ಹಾರಂಗಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚಿನ ಪ್ರಮಾಣದ ನೀರು ಹೊರಬಿಡಲಾಗಿದೆ. ಹಾಗಾಗಿ, ಕೃಷ್ಣರಾಜಸಾಗರ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಹೇಮಾವತಿ ಜಲಾಶಯದ ಒಳ ಹರಿವು ಕೂಡ ಹೆಚ್ಚಾಗಿದೆ. ಹೇಮಾವತಿಯಿಂದಲೂ ನೀರನ್ನು ಹೊರಬಿಟ್ಟರೆ ಕೆಆರ್‌ಎಸ್ ಜಲಾಶಯಕ್ಕೆ ಮತ್ತಷ್ಟು ನೀರು ಹರಿದು ಬರಲಿದೆ. ಮುಂಗಾರು ವೈಫಲ್ಯದಿಂದ ನೀರಿಲ್ಲದೆ ಸೊರಗಿದ್ದ ಜಲಾಶಯ ಇದೀಗ ಮೈದುಂಬಿಕೊಳ್ಳುತ್ತಿದೆ.

ಇದನ್ನೂ ಓದಿ : Kabini Reservoir : ಕಬಿನಿ ಜಲಾಶಯ ಭರ್ತಿ : 10,000 ಕ್ಯೂಸೆಕ್ ನೀರು ಬಿಡುಗಡೆ

KRS ನೀರಿನ ಮಟ್ಟ:

  • KRSನ ಗರಿಷ್ಠ ನೀರಿನ ಮಟ್ಟ 124.80 ಅಡಿ
  • ಡ್ಯಾಂನ ಇಂದಿನ ನೀರಿನ ಮಟ್ಟ 104.80 ಅಡಿ
  • ಒಳಹರಿವು 51,508 ಕ್ಯೂಸೆಕ್
  • ಹೊರಹರಿವು 5,489 ಕ್ಯೂಸೆಕ್

ಇದನ್ನೂ ಓದಿ : Karnataka Rain update : ಕಲಬುರಗಿಗೆ ಭಾರಿ ಮಳೆ ಮುನ್ಸೂಚನೆ, ರೆಡ್‌ ಅಲರ್ಟ್ : ಇಂದು ಎಲ್ಲೆಲ್ಲಿ ಶಾಲೆಗೆ ರಜೆ ಗೊತ್ತೇ?

ಕಲಬುರಗಿಗೆ ರೆಡ್‌ ಅಲರ್ಟ್ ಘೋಷಣೆ : ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಗೆ ಇಂದು ರೆಡ್‌ ಅಲರ್ಟ್ ಘೋಷಿಸಲಾಗಿದೆ. ಶಾಲೆ,‌ ಅಂಗನವಾಡಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಆದೇಶಿಸಿದ್ದಾರೆ. ಕಳೆದ ಐದಾರು ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಜುಲೈ 26 ರ ಬುಧವಾರ ಭಾರಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈಗಾಗಲೇ ಸತತ ಮಳೆಯಿಂದ ಜಿಲ್ಲೆಯ ಹಲವೆಡೆ ಅವಘಡಗಳು ಸಂಭವಿಸಿವೆ. ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಗಾರಂಪಳ್ಳಿ ಸೇತುವೆ ಮೇಲೆ ನೀರು ನಿಂತು ಹಳ್ಳಿಗಳು ಸಂಪರ್ಕ ಕಳೆದುಕೊಂಡಿವೆ. ನರನಾಳ ಕೆರೆಯಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆಯಾಗುತ್ತಿದ್ದು, ನೂರಾರು ಎಕರೆ ಜಮೀನಿನಲ್ಲಿದ್ದ ಬೆಳೆಗಳು ಹಾಳಾಗಿದೆ.

ಇದನ್ನೂ ಓದಿ : Telangana Rain: ತೆಲಂಗಾಣದಲ್ಲಿ ವರುಣನ ಅಬ್ಬರ : ಇಂದು, ನಾಳೆ ಶಿಕ್ಷಣ ಸಂಸ್ಥೆಗಳಿಗೆ ರಜೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.