ETV Bharat / state

ಕೆಆರ್​ಎಸ್​​ ಜಲಾಶಯದಲ್ಲಿ ಒಳ ಹರಿವು ಹೆಚ್ಚಳ - ಕೆಆರ್​ಎಸ್​​ ಜಲಾಶಯ

ಕೊಡಗು-ಕೇರಳ ಭಾಗಗಳ ಪ್ರದೇಶದಲ್ಲಿ ಉತ್ತಮ ಮಳೆ ಬಿದ್ದರೆ ಕೆಆರ್‌ಎಸ್‌ ಜಲಾಶಯದ ಮೇಲ್ಭಾಗದ ಹೇಮಾವತಿ ಹಾಗೂ ಲಕ್ಷ್ಮಣ ತೀರ್ಥ ನದಿಗಳ ಮೂಲಕ ಒಳ ಹರಿವಿನ ಪ್ರಮಾಣ ಹೆಚ್ಚಾಗಿ ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುತ್ತದೆ. ಇದರಿಂದ ಜಲಾಶಯದ ನೀರಿನ ಒಳ ಹರಿವು ಹೆಚ್ಚಾಗಿದೆ.

KRS dam water level increase due to continuous rainfall
ಕೆಆರ್​ಎಸ್​​ ಜಲಾಶಯದಲ್ಲಿ ನೀರಿನ ಒಳ ಹರಿವು ಹೆಚ್ಚಳ
author img

By

Published : Jul 18, 2021, 11:01 PM IST

ಮಂಡ್ಯ: ಕಾವೇರಿ ಕಣಿವೆ ಪ್ರದೇಶದಲ್ಲಿ ಸತತ ಮಳೆ ಬಿದ್ದ ಪರಿಣಾಮ ಕೃಷ್ಣರಾಜ ಸಾಗರ ಜಲಾಶಯದಲ್ಲಿ ನೀರಿನ ಒಳ ಹರಿವು ಹೆಚ್ಚಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿಗಳಿದ್ದು, ಪ್ರಸ್ತುತ 97.55 ಅಡಿ ನೀರು ಏರಿಕೆಯಾಗಿದೆ.

ಕೆಆರ್​ಎಸ್​​ ಜಲಾಶಯದಲ್ಲಿ ಒಳ ಹರಿವು ಹೆಚ್ಚಳ

ಸದ್ಯ ಜಲಾಶಯದ ಒಳ ಹರಿವು 16,601 ಕ್ಯೂಸೆಕ್‌ ಇದ್ದು, ಹೊರ ಹರಿವು 2,324 ಕ್ಯೂಸೆಕ್‌ ಆಗಿದೆ. ಜಲಾಶಯದಲ್ಲಿ 20.952 ಟಿಎಂಸಿ ನೀರಿನ ಪ್ರಮಾಣ ಲಭ್ಯವಿದೆ. ಕೊಡಗು-ಕೇರಳ ಭಾಗಗಳ ಪ್ರದೇಶದಲ್ಲಿ ಉತ್ತಮ ಮಳೆ ಬಿದ್ದರೆ ಕೆಆರ್‌ಎಸ್‌ ಜಲಾಶಯದ ಮೇಲ್ಭಾಗದ ಹೇಮಾವತಿ ಹಾಗೂ ಲಕ್ಷ್ಮಣ ತೀರ್ಥ ನದಿಗಳ ಮೂಲಕ ಒಳ ಹರಿವಿನ ಪ್ರಮಾಣ ಹೆಚ್ಚಾಗಿ ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುತ್ತದೆ. ಈ ಮೂಲಕ ಒಳ ಹರಿವಿನ ಪ್ರಮಾಣವೂ ಹೆಚ್ಚಾಗಿ, ಈ ಬಾರಿ ಜಲಾಶಯ ತುಂಬುವುದರಲ್ಲಿ ಸಂಶಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಮಂಡ್ಯ, ಮೈಸೂರು ಜಿಲ್ಲೆಯ ರೈತರು ಕೆಎಸ್​ಆರ್​ಎಸ್​ ಜಲಾಶಯದ ನೀರನ್ನು ಅವಲಂಬಿಸಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಈ ಬಾರಿ ನಿರೀಕ್ಷೆಯ ಸಮಯಕ್ಕಿಂತ ಮೊದಲೇ ಜಲಾಶಯದಲ್ಲಿ ನೀರು ಹೆಚ್ಚಳವಾಗಿರುವುದು ರೈತರಿಗೆ ಸಂತಸ ತಂದಿದೆ.

ಓದಿ: ಕಂದಕಕ್ಕೆ ಕ್ರೂಸರ್ ವಾಹನ ಉರುಳಿ 8 ಮಂದಿ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.