ETV Bharat / state

ಕಾವೇರಿ ಕಿಚ್ಚು : ಮಂಡ್ಯ ರೈತರಿಗೆ ಚಿತ್ರದುರ್ಗದಿಂದ ಟ್ಯಾಂಕರ್ ನೀರು

author img

By ETV Bharat Karnataka Team

Published : Oct 8, 2023, 6:36 PM IST

ಮಂಡ್ಯದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿ ಮುಂದುವರೆದಿದೆ.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ

ಹೋರಾಟಗಾರ ಮಂಜುನಾಥ್ ಅವರು ಮಾತನಾಡಿದರು

ಮಂಡ್ಯ : ಮಂಡ್ಯದಲ್ಲಿ ಕಾವೇರಿ ಕಿಚ್ಚು ಆರುವ ಲಕ್ಷಣ ಕಾಣುತ್ತಿಲ್ಲ. ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಹೋರಾಟ ನಡೆಯುತ್ತಲೇ ಇದೆ. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಧರಣಿ ಮುಂದುವರೆದಿದ್ದು, ಹಲವಾರು ಸಂಘಟನೆಗಳು ಬೆಂಬಲ ಸೂಚಿಸುತ್ತಿವೆ. ಮೈಸೂರು, ಬೆಂಗಳೂರು ಹೆದ್ದಾರಿ ತಡೆದು ಆಕ್ರೋಶ ಹೊರಹಾಕುತ್ತಿದ್ದಾರೆ. ಸರ್ಕಾರ ಮಾತ್ರ ಈವರೆಗೆ ಯಾವುದೇ ತೀರ್ಮಾನ ಮಾಡದೆ, ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾದ್ರೆ ಈವತ್ತಿನ ಹೋರಾಟಗಳು ಹೇಗೆಲ್ಲಾ ನಡೀತು ಅನ್ನೋದರ ಮಾಹಿತಿ ಇಲ್ಲಿದೆ.

ಇವತ್ತು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರೋ ಧರಣಿ ಮುಂದುವರೆದಿದ್ದು, ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿದವು. ಇಂದು ಕುಂಭಕರ್ಣನ ವೇಷ ಧರಿಸಿ ಅಣಕು ಪ್ರತಿಭಟನೆ ನಡೆಸಿದ್ರು. ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ಕುಂಭಕರ್ಣನ ರೀತಿ ನಿದ್ರಿಸುತ್ತಿದ್ದಾರೆ. ಅನ್ನದಾತನ ಕೂಗು ಇವರಿಗೆ ಕೇಳಿಸುತ್ತಿಲ್ಲ. ಎಷ್ಟೇ ಹೋರಾಟ ನಡೆಸಿದರೂ ನಿದ್ರಾವಸ್ಥೆಯಲ್ಲಿದ್ದಾರೆ. ನಮ್ಮ ಕೂಗು ಅವರಿಗೆ ಕೇಳಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರುನಾಡ ವಿಜಯಸೇನೆ ರಾಜ್ಯಾಧ್ಯಕ್ಷ ದೀಪಕ್ ಅವರು ಮಾತನಾಡಿದರು

ಇನ್ನು ಕರುನಾಡ ವಿಜಯಸೇನೆ ವತಿಯಿಂದ ಬೃಹತ್ ಪ್ರತಿಭಟನೆ ಕೂಡ ನಡೀತು. ಸಿಲ್ವರ್ ಜ್ಯುಬಿಲಿ ಪಾರ್ಕ್​ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಸಂಜಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಮೈಸೂರು ಬೆಂಗಳೂರು ಹೆದ್ದಾರಿ ತಡೆದರಲ್ಲದೆ ರಸ್ತೆಯಲ್ಲಿ ಮಲಗಿ ಉರುಳು ಸೇವೆ ಮಾಡಿದರು. ಅಲ್ಲದೆ ಬರ ಜಿಲ್ಲೆ ಚಿತ್ರದುರ್ಗದಿಂದ ಟ್ಯಾಂಕರ್​ನಲ್ಲಿ ಮಂಡ್ಯ ರೈತರಿಗೆ ನೀರು ತರುವ ಮೂಲಕ ಮಂಡ್ಯ ಸಂಪೂರ್ಣ ಬರದಿಂದ ಕೂಡಿದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಈ ಬಗ್ಗೆ ಹೋರಾಟಗಾರ ಮಂಜುನಾಥ್​ ಅವರು ಮಾತನಾಡಿ, ರೈತ ಹಿತರಕ್ಷಣಾ ಸಮಿತಿಯ ಹೋರಾಟ ಇವತ್ತು 33ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರಕ್ಕೆ ಕಿವಿ ಇಲ್ಲ, ಕಣ್ಣಿಲ್ಲ. ಮೊನ್ನೆ ರಾಜ್ಯ ಸರ್ಕಾರ ಪ್ರಧಾನಿಯವರು ಮಧ್ಯಪ್ರವೇಶ ಮಾಡಬೇಕೆಂದು ಹೇಳಿಕೆ ಕೊಡ್ತು. ನಾನು ಒಂದು ಮಾತನ್ನು ಕೇಳಲಿಕೆ ಇಷ್ಟಪಡುತ್ತೇನೆ. ಸುಪ್ರೀಂಕೋರ್ಟ್​ ಕೂಡಾ ರಾಜ್ಯ ಸರ್ಕಾರ ಅರ್ಜಿಯನ್ನ ಫೈಲ್ ಮಾಡಿದಂತಹ ಸಂದರ್ಭದಲ್ಲಿ ಪ್ರಾಧಿಕಾರದ ಮುಂದೆ ನೀವು ಬಗೆಹರಿಸಿಕೊಳ್ಳಿ ಎಂದು ಚಾಟಿ ಬೀಸಿದೆ. ಇವತ್ತು ಸಿದ್ದರಾಮಯ್ಯ ಅವರು ಕೂಡಾ ವಕೀಲರು, ಪದವಿಧರರು, ಕಾನೂನಿನಲ್ಲಿ ಅಪಾರವಾದ ಜ್ಞಾನವನ್ನು ಉಳ್ಳವರಾಗಿರುತ್ತಾರೆ. ಒಂದು ಸಲ ಕೋರ್ಟ್​ನ ಆದೇಶದ ಅನ್ವಯ ಪ್ರಾಧಿಕಾರ ರಚನೆ ಆದ ಮೇಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆ ಅಸಾಧ್ಯ. ಹೀಗಾಗಿ ತಮಿಳುನಾಡಿನ ಸಿಎಂ ಸ್ಟಾಲಿನ್​​ ಅವರನ್ನು ರಾಜ್ಯಕ್ಕೆ ಕರೆತಂದು ರಾಜ್ಯದ ಸಮಸ್ಯೆಯನ್ನು ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಬೇಕು ಎಂದರು.

ಇನ್ನು, ತಮಿಳುನಾಡು ಸಿಎಂ ಸ್ಟಾಲಿನ್ ಭಾವಚಿತ್ರ ಹಿಡಿದು ಅವರ ವಿರುದ್ಧ ಪ್ರತಿಭಟನೆ ಮಾಡಿದರು. ಈ ಸಂದರ್ಭ ಪೊಲೀಸರು ಭಾವಚಿತ್ರವನ್ನು ವಶಕ್ಕೆ ಪಡೆದರು. ನಂತರ ಹಿತ ರಕ್ಷಣಾ ಸಮಿತಿ ಧರಣಿ ಮುಂದುವರೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಇದನ್ನೂ ಓದಿ : ರೈತರಿಂದ ಅಣಕು ಆತ್ಮಹತ್ಯೆ ಮೂಲಕ ಪ್ರತಿಭಟನೆ.. ಜಲ ಸಂರಕ್ಷಣ ಸಮಿತಿಯ ನಿಯೋಗ ನಾಳೆ ದೆಹಲಿಗೆ - ಕುರುಬೂರು ಶಾಂತಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.