ಮಂಡ್ಯ: ಲಾಕ್ಡೌನ್ ನಡುವೆ ದೂರದೂರುಗಳಿಂದ ಅಗತ್ಯ ಸಾಮಾಗ್ರಿಗಳನ್ನು ಹೊತ್ತು ತರುವ ಲಾರಿ ಚಾಲಕರಿಗೆ ಆಹಾರ ವಿತರಿಸುವ ಮೂಲಕ ಪತ್ರಕರ್ತನೊಬ್ಬ ಮಾನವೀಯ ಕಾರ್ಯ ಮಾಡುತ್ತಿದ್ದಾರೆ.
ದಿನ ಪತ್ರಿಕೆಯೊಂದರ ಕೆ.ಆರ್.ಪೇಟೆ ತಾಲೂಕು ವರದಿಗಾರರಾಗಿರುವ ಮಂಜುನಾಥ್ ಪ್ರತಿನಿತ್ಯ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟ ಮನೆಯಯಲ್ಲೇ ತಯಾರಿಸಿ ತಂದು ರಸ್ತೆ ಬದಿ ನಿಂತು ಲಾರಿ ಚಾಲಕರಿಗೆ ವಿತರಿಸುತ್ತಿದ್ದಾರೆ.
ಕೆ.ಆರ್.ಪೇಟೆ ಮೂಲಕ ಮೈಸೂರು, ಮಂಗಳೂರು, ಬೆಂಗಳೂರಿಗೆ ಸರಕು ಸಾಗಾಣಿಕೆ ಲಾರಿಗಳು ಹೆಚ್ಚಾಗಿ ಓಡಾಡುತ್ತವೆ. ಹೀಗೆ ಬರುವ ಎಲ್ಲಾ ಚಾಲಕರಿಗೂ ಮಂಜುನಾಥ್ ಆಹಾರ ವಿತರಣೆ ಮಾಡುತ್ತಿದ್ದಾರೆ.