ETV Bharat / state

ರಾಜ್ಯದಲ್ಲಿ ಮತ್ತೆ ಬಹುಮತದಿಂದ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ : ಹೆಚ್​ ಡಿ ಕುಮಾರಸ್ವಾಮಿ ವಿಶ್ವಾಸ - ಈಟಿವಿ ಭಾರತ್ ಕನ್ನಡ ಸುದ್ದಿ

ಮಂಡ್ಯದಲ್ಲಿ ಏಳು ದಿನಗಳ ಕಾಲ ಹೆಚ್​ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆಯು ಹಳ್ಳಿ ಹಳ್ಳಿಗೆ ತಲುಪಲಿದೆ.

ಹೆಚ್​ ಡಿ ಕುಮಾರಸ್ವಾಮಿ
ಹೆಚ್​ ಡಿ ಕುಮಾರಸ್ವಾಮಿ
author img

By

Published : Dec 21, 2022, 3:27 PM IST

ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

ಮಂಡ್ಯ: ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಜೆಡಿಎಸ್ ನಡೆಸುತ್ತಿರುವ ಪಂಚರತ್ನ ರಥಯಾತ್ರೆಯೂ ಇಂದು ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿತು.

ಮಂಡ್ಯದಲ್ಲಿ ಏಳು ದಿನಗಳ ಕಾಲ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆಯು ಹಳ್ಳಿ ಹಳ್ಳಿಗೆ ತಲುಪಲಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ ಎಂ ದೊಡ್ಡಿ ರಥಯಾತ್ರೆಯನ್ನು ಶಾಸಕ ತಮ್ಮಣ್ಣ ಹಾಗೂ ಜೆಡಿಎಸ್ ಅಪಾರ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಕ್ರೇ ಮೂಲಕ ಜೋಳದ ಹಾಗೂ ಕಬ್ಬಿನ ಬೃಹತ್ ಹಾರಹಾಕಿ ಹೆಲಿಕಾಪ್ಟರ್ ಮುಖಾಂತರ ಹೂಮಳೆ ಸುರಿದು ಅದ್ಧೂರಿಯಾಗಿ ಸ್ವಾಗತಿಸಿದರು. ಇಂದು ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 40ಕ್ಕೂ ಹಳ್ಳಿಗಳಲ್ಲಿ ಈ ಪಂಚರತ್ನ ಯಾತ್ರೆಯು ನಡೆಯಲಿದ್ದು, ಸಾವಿರಾರು ಜೆಡಿಎಸ್ ಕಾರ್ಯಕರ್ತರು ಬೈಕ್ ರ್ಯಾಲಿಯ ಮುಖಾಂತರ ಭಾಗವಹಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್​ಡಿಕೆ, ರಾಜ್ಯದಲ್ಲಿ ಮತ್ತೆ ಬಹುಮತದಿಂದ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ. ಮಂಡ್ಯ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಪ್ರವಾಸ ಹಮ್ಮಿಕೊಂಡಿದ್ದೇನೆ. ಪ್ರತಿ ಗ್ರಾಮದಲ್ಲಿ ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ. 75 ಹಳ್ಳಿಗಳಲ್ಲಿ ಜನರನ್ನು ಭೇಟಿ ಮಾಡಿದ್ದೇನೆ. ನಿನ್ನೆಯ ಮಳವಳ್ಳಿಯ ಪ್ರವಾಸಕ್ಕೆ ದೊಡ್ಡ ಮಟ್ಟದಲ್ಲಿ ಬೆಂಬಲ ಕೊಟ್ಟಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಪ್ರವಾಸ ಮಾಡಿದ್ದೇನೆ. ದೊಡ್ಡ ಮಟ್ಟದಲ್ಲಿ ಯಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಿಮ್ಮ ಜೊತೆ ನಾವು ಇದ್ದೇವೆ. ನಿಮಗೆ ನಮ್ಮ ಬೆಂಬಲ ಇದೆ. ಹಲವಾರು ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ ಎಂದು ಎಲ್ಲಾ ಸಮಾಜದ ಜನರು ಮನವಿ ಮಾಡಿದ್ದಾರೆ ಎಂದರು.

ಮಂಡ್ಯ ಜಿಲ್ಲೆಯ ಜನತೆ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ರಾಜಕಾರಣದಲ್ಲಿ ಕೆಲವು ವ್ಯತ್ಯಾಸ ಆಗಿದೆ. ಮಂಡ್ಯ ಜಿಲ್ಲೆಯನ್ನು ಛಿದ್ರ ಮಾಡಿದ್ದೇವೆ, ಜೆಡಿಎಸ್ ಕೋಟೆ ಮುಗಿಸುತ್ತೇವೆ ಅಂತ ವಿರೋಧ ಪಕ್ಷದವರು ಹೇಳ್ತಾರೆ. ಮಂಡ್ಯ ಜಿಲ್ಲೆಯ ಜನತೆ ಜೆಡಿಎಸ್ ಅನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಮಂಡ್ಯ ಜಿಲ್ಲೆಯ ಜನತೆ ಎಲ್ಲಾ ಸಂದರ್ಭದಲ್ಲಿ ದೇವೇಗೌಡರ ಕೈ ಹಿಡಿದಿದ್ದಾರೆ. ಈ ಬಾರಿ ಮತ್ತೊಮ್ಮೆ ಕುಮಾರಣ್ಣನ ಸಿಎಂ ಮಾಡಲು ಗೌರವ ಕೊಟ್ಟಿದ್ದಾರೆ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಮಂಡ್ಯ ಜಿಲ್ಲೆಯ 7 ಕ್ಷೇತ್ರದಲ್ಲಿ ಗೆಲ್ಲುತ್ತೇವೆ.. ನಾನು 14 ತಿಂಗಳು ಸಿಎಂ ಆಗಿದ್ದಾಗ ಹಲವು ಕಾರ್ಯಕ್ರಮಗಳನ್ನು ಕೊಟ್ಟಿದ್ದೇನೆ. ಜೆಡಿಎಸ್ ತೆಗೆಯಲು ಚೆಲುವರಾಯಸ್ವಾಮಿ ಸಂಚು ಮಾಡಿದ್ರು. ಬಿಜೆಪಿ ಪಕ್ಷ ಒಂದು ರೂ ಕೊಟ್ಟಿಲ್ಲ. ಹಲಗೂರು ಹನಿ ನೀರಾವರಿಗೆ 400 ಕೋಟಿ ತಡೆದ್ರು, ಇದು ನನ್ನ ತಪ್ಪಾ ಎಂದು ಪ್ರಶ್ನಿಸಿದರು? ಮಂಡ್ಯ ಜಿಲ್ಲೆಗೆ ಕಾಂಗ್ರೆಸ್ ನವರು ಬಜೆಟ್ ಘೋಷಣೆ ಮಾಡಬೇಡಿ ಅಂದ್ರು. ಬಿಜೆಪಿಯವರು ಮಂಡ್ಯ ಜಿಲ್ಲೆಯ ಬಜೆಟ್ ಅಂತ ನಗುತ್ತಿದ್ದರು. 100 ಕೋಟಿ ಮಂಡ್ಯಕ್ಕೆ ಕೊಟ್ಟೆ ಎಲ್ಲವನ್ನು ಬೇರೆ ಕಡೆ ಬದಲಾವಣೆ ಮಾಡಿದ್ರು.

ನಾನು ಎದೆ ಬಗೆದು ತೋರಿಸುವ ಅಗತ್ಯ ಇಲ್ಲ.. ಜನರಿಗೆ ಗೊತ್ತಿದೆ ನಮ್ಮ ಬಗ್ಗೆ. ಬಿಜೆಪಿಯವರು ಏನೇ ಪೈಪೋಟಿ ಮಾಡಿದ್ರು ಹಣ ತರಬೇಕು. ಕೆ. ಆರ್ ಪೇಟೆಯಲ್ಲಿ ನಾವು ಸ್ವಲ್ಪ ತಪ್ಪಾಗಿ ಸೋತಿದ್ದೇನೆ. ಹಣದ ಹೊಳೆ ಹರಿಸಿ ಬಿಜೆಪಿ ಕೆ ಆರ್​ ಪೇಟೆ ಗೆದ್ದಿದೆ. ಯಾವ ಮುಖ ಎತ್ತಿಕೊಂಡು ಮಂಡ್ಯದಲ್ಲಿ ಬಿಜೆಪಿ ಮತ ಕೇಳುತ್ತೆ. ಆತ್ಮಹತ್ಯೆ ಮಾಡಿಕೊಂಡ ರೈತರ ನೆರವಿಗೆ ನಿಂತಿದ್ದು ಕುಮಾರಸ್ವಾಮಿ ಎಂದು ಟಾಂಗ್​ ಕೊಟ್ಟರು.

ಜನರು ತೀರ್ಮಾನ ಮಾಡ್ತಾರೆ‌.. ರೈತರ ಸಾಲ ಮನ್ನಾ ಮಾಡಿದ್ದು ಮಂಡ್ಯ ರೈತರಿಗೆ ಅನುಕೂಲವಾಗಿದೆ. ಇವರ ಹತ್ತಿರ ಕಲಿಯುವ ಅವಶ್ಯಕತೆ ಇಲ್ಲ. ಮತದಾರರ ಮನವೊಲಿಸಲು ಕಾಂಗ್ರೆಸ್​ನವರು ತಂತ್ರ ಹೂಡಿದ್ದಾರೆ. ಜನರು ತೀರ್ಮಾನ ಮಾಡ್ತಾರೆ‌. ಜೆಡಿಎಸ್ ಹಳೆ ಮೈಸೂರು ಭಾಗಕ್ಕೆ ಸೀಮಿತ ಎಂಬ ಡಿ ಕೆ ಶಿವಕುಮಾರ್ ಹೇಳಿಕೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಯಾವ ಪರಿಸ್ಥಿತಿಯಲ್ಲಿದೆ. ಸರ್ವೇ ಪಟ್ಟಿ ಹಾಕಿಸಿಕೊಂಡು ಮನೆಯಲ್ಲಿಟ್ಟುಕೊಳ್ಳಲಿ ಎಂದು ಟಾಂಗ್​ ಕೊಟ್ಟರು.

ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.. ರಾಷ್ಟ್ರೀಯ ಪಕ್ಷಗಳ ನಾಯಕರು ಜನತೆ ಮುಂದು ಅಭಿವೃದ್ಧಿ ಇಟ್ಟಿಲ್ಲ. ಕಾಂಗ್ರೆಸ್ ರಾಜ್ಯದಲ್ಲಿ ಸ್ವಾತಂತ್ರ್ಯ ಸರ್ಕಾರವನ್ನು ಎರಡು ಬಾರಿ ನಡೆಸಿದೆ. ಕಾಂಗ್ರೆಸ್​ನಲ್ಲಿ 50-60 ಸೀಟ್ ಅಷ್ಟೇ ಇದೆ. ರಾಜ್ಯದಲ್ಲಿ ಜೆಡಿಎಸ್ ಜನತೆ ಆಶೀರ್ವಾದೊಂದಿಗೆ ಜೆಡಿಎಸ್ ಸಂಪೂರ್ಣ ಬಹುಮತದಿಂದ ಗೆಲ್ಲುತ್ತೆ. ಯಾರೂ ತಡೆಯಲು ಸಾಧ್ಯವಿಲ್ಲ. ಪಂಚರತ್ನ ಯೋಜನೆ ಬಗ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅತ್ಯುತ್ತಮ ಕಾರ್ಯಕ್ರಮ ಎಂದು ಜನರು ಎಲ್ಲರೂ ಹೇಳುತ್ತಿದ್ದಾರೆ. ನಾನು ಕೇವಲ ಮುಖ್ಯಮಂತ್ರಿಯಾಗುವುದಕ್ಕೆ ಕೇಳ್ತಿಲ್ಲ. ಜನರ ಬದುಕನ್ನು ಸರಿಪಡಿಸುವ ಕೆಲಸ ಆಗಬೇಕು. ಜನರು ಕಾರ್ಯಕ್ರಮ ಮೆಚ್ಚಿ ಬಹುಮತ ಕೊಟ್ಟು ಬೆಂಬಲ ಕೊಟ್ಟರೆ, ರಾಜ್ಯ ರಾಮರಾಜ್ಯವಾಗುತ್ತೆ ಎಂದರು.

ಓದಿ: ಪಂಚರತ್ನ ರಥಯಾತ್ರೆಯಿಂದ ರಾಷ್ಟ್ರೀಯ ಪಕ್ಷಗಳಿಗೆ ನಡುಕ: ಕುಮಾರಸ್ವಾಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.