ಮಂಡ್ಯ: ಉತ್ತರ ಕರ್ನಾಟಕ, ಶಿವಮೊಗ್ಗ ಹಾಗೂ ಮಡಿಕೇರಿ ನಿರಾಶ್ರಿತರಿಗೆ ಜೆಡಿಎಸ್ ಕಾರ್ಯಕರ್ತರಿಂದ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಆಹಾರ ಸಾಮಾಗ್ರಿಗಳನ್ನು, ಮದ್ದೂರು ಪಟ್ಟಣದಿಂದ ಕಳುಹಿಸಿ ಕೊಡಲಾಯಿತು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸದ್ಯ ಮಳೆಯ ಅಬ್ಬರ ಕಡಿಮೆಯಾದರು ಮೂಲ ಸೌಕರ್ಯಗಳ ಕೊರತೆಯಿಂದಾಗಿ ನೆರೆ ಸಂತ್ರಸ್ತರು ಪರದಾಡುತಿದ್ದಾರೆ. ಈ ಕೊರತೆಯನ್ನು ನೀಗಿಸಲು ಜೆಡಿಎಸ್ ವತಿಯಿಂದ ಸುಮಾರು 50 ಲಕ್ಷ ಮೌಲ್ಯದ ಸರಕುಗಳನ್ನು ಉತ್ತರ ಕರ್ನಾಟಕ, ಶಿವಮೊಗ್ಗ ಹಾಗೂ ಮಡಿಕೇರಿ ನಿರಾಶ್ರಿತರಿಗೆ ಕಳುಹಿಸಿಲಾಗಿದೆ.
ಮದ್ದೂರು ಪಟ್ಟಣದ ಕ್ರೀಡಾಂಗಣದಲ್ಲಿ ಮಾಜಿ ಸಚಿವ ಡಿ.ಸಿ ತಮ್ಮಣ್ಣ ಸಾಮಗ್ರಿ ತುಂಬಿದ ಲಾರಿಗಳಿಗೆ ಹಸಿರು ನಿಶಾನೆ ತೋರಿದರು. 9 ಲಾರಿಗಳಲ್ಲಿ ಅಕ್ಕಿ, ಸಕ್ಕರೆ, ಬಿಸ್ಕತ್ ಸೇರಿದಂತೆ ಪಶು ಆಹಾರವನ್ನು ಕಳುಹಿಸಲಾಯಿತು.