ಮಂಡ್ಯ : ಜಿಲ್ಲೆಯಲ್ಲಿ ಜೆಡಿಎಸ್ನ ಮತ್ತೊಂದು ವಿಕೆಟ್ ಪತನವಾಗುವ ನಿರೀಕ್ಷೆ ಇದೆ. ಈಗಾಗಲೇ ಜೆಡಿಎಸ್ ನಾಯಕ ಅಶೋಕ್ ಜಯರಾಮ್ ಹಾಗೂ ಲಕ್ಷ್ಮಿ ಅಶ್ವಿನ್ ಗೌಡ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾರೆ. ಈಗ ಇನ್ನೊಬ್ಬ ನಾಯಕರು ಜೆಡಿಎಸ್ ತೊರೆಯುವ ಮಾತುಗಳನ್ನಾಡುತ್ತಿದ್ದಾರೆ.
ಹಣ ಇದ್ದರಷ್ಟೇ ಜೆಡಿಎಸ್ ಟಿಕೆಟ್ ಸಿಗುತ್ತೆ, ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಗುತ್ತೆ ಎಂದು ಬಹಿರಂಗವಾಗಿಯೇ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ ಎಂಎಲ್‌ಸಿ ಮರಿತಿಬ್ಬೇಗೌಡ, ನಾನು ಜೆಡಿಎಸ್ ಅಭ್ಯರ್ಥಿ ಪರವಾಗಿ ಮತ ಕೇಳೋದಿಲ್ಲ ಎಂದಿದ್ದಾರೆ. ಆ ಮೂಲಕ ಜೆಡಿಎಸ್ನಿಂದ ಹೊರ ಹೋಗುವ ಮುನ್ಸೂಚನೆ ಕೊಟ್ಟಿದ್ದಾರೆ.
ಜೆಡಿಎಸ್ ನಾಯಕರ ನಡೆ ಬಗ್ಗೆ ನನಗೆ ಬಹಳ ಬೇಸರವಾಗಿದೆ. ಇದು ಈಗಿನಿಂದಲ್ಲ, ನಾಲ್ಕಾರು ವರ್ಷದಿಂದ ಅನುಭವಿಸಿಕೊಂಡು ಬಂದಿದ್ದೇನೆ. ಪಕ್ಷ ಸಂಘಟನೆ, ಕಾರ್ಯಕರ್ತರ ಬಗ್ಗೆ ನಾಯಕರಿಗೆ ಕಿಂಚಿತ್ತೂ ಕಾಳಜಿ ಇಲ್ಲ. ದಕ್ಷಿಣ ಪದವೀಧರ ಕ್ಷೇತ್ರದ ಟಿಕೆಟ್ ಬಗ್ಗೆ ಕೆಟ್ಟ ನಿರ್ಧಾರ ತೆಗೆದುಕೊಳ್ತಾರೆ ಅಂತಾ ನಾನು ಅಂದುಕೊಂಡಿರಲಿಲ್ಲ. ಜಯರಾಂ ಬಳಿ ಹಣ ಇಲ್ಲ ಎಂಬ ಕಾರಣಕ್ಕೆ ಟಿಕೆಟ್ ಬೇಡ ಅಂದ್ರು. ರಾಮು ಒಂದೇ ದಿನವೂ ಪಕ್ಷ ಬಾವುಟ ಹಿಡಿದಿಲ್ಲ, ಪಕ್ಷಕ್ಕಾಗಿ ದುಡಿದಿಲ್ಲ. ಹಣ ಇದೆ ಎಂಬ ಕಾರಣಕ್ಕೆ ರಾಮುಗೆ ಟಿಕೆಟ್ ನೀಡಿದ್ದಾರೆ. ನಾನು ಜೆಡಿಎಸ್ ಅಭ್ಯರ್ಥಿ ಪರವಾಗಿ ಮತ ಕೇಳೋದಿಲ್ಲ ಎಂದರು.
ದೇವೇಗೌಡ-ನಿಖಿಲ್ ಸೋಲಿಗೆ ಕುಟುಂಬವೇ ಕಾರಣ : ದೇವೇಗೌಡ ಮತ್ತು ನಿಖಿಲ್ ಸೋಲಿಗೆ ಯಾವ ಶಾಸಕರು ಮತ್ತು ಕಾರ್ಯಕರ್ತರು ಕಾರಣ ಅಲ್ಲ. ಕುಟುಂಬದ ತೀರ್ಮಾನದಿಂದಲೇ ದೇವೇಗೌಡ-ನಿಖಿಲ್‌ಗೆ ಸೋಲಾಯ್ತು. ನಿಖಿಲ್ ಸೋಲಿಗೆ ಮಂಡ್ಯ ಜಿಲ್ಲೆ ಶಾಸಕರು ಕಾರಣ ಎಂಬುದು ಸುಳ್ಳು. ಮಂಡ್ಯ ಶಾಸಕರು ಕೈಕೊಟ್ಟಿದ್ರೆ 5 ಲಕ್ಷಕ್ಕೂ ಅಧಿಕ ಮತ ಬರುತ್ತಿರಲಿಲ್ಲ ಎಂದರು.
ಇದನ್ನೂ ಓದಿ: ಸಚಿವ ಅಶ್ವತ್ಥನಾರಾಯಣ್ ಕಚೇರಿ ಮುಂದೆ ಧರಣಿ ಕುಳಿತ ಎಂಎಲ್‌ಸಿ ಮರಿತಿಬ್ಬೇಗೌಡ: ಕಾರಣ?