ಮಂಡ್ಯ : ಬೆಂಗಳೂರು - ಮೈಸೂರು ಹೆದ್ದಾರಿ ಕಾಮಗಾರಿಯಿಂದ ನಮ್ಮ ಕ್ಷೇತ್ರದ ರಸ್ತೆಗಳು ಮಣ್ಣು, ಕಲ್ಲು ತಗೆದುಕೊಂಡು ಹೋಗಿ ಹಾಳಾಗಿವೆ. ಕಾಮಗಾರಿಗೂ ಮುನ್ನ ರಸ್ತೆಯನ್ನು ಸರಿಪಡಿಸುತ್ತೆವೆ ಎಂದು ಹೇಳಿದ್ದರು. ಆದರೆ ಇದುವರೆಗು ಸರಿಪಡಿಸಿಲ್ಲ. ಇದಕ್ಕಾಗಿ ಒಂದು ವಾರ ಕಾಲಾವಕಾಶ ನೀಡುತ್ತೇವೆ. ಅದಾಗಿಯು ಸರಿಪಡಿಸಿಲ್ಲ ಎಂದರೆ ಪ್ರತಾಪ್ ಸಿಂಹ ಮನೆ ಎದುರು ಧರಣಿ ಮಾಡುತ್ತೇನೆ ಎಂದು ಶಾಸಕ ಪುಟ್ಟರಾಜು ಎಚ್ಚರಿಕೆ ನೀಡಿದರು.
ಮಂಡ್ಯದ ಪಾಂಡವಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಸದ ಪ್ರತಾಪ್ ಸಿಂಹಗೆ ಈ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು - ಮೈಸೂರು ಹೆದ್ದಾರಿ ಕಾಮಗಾರಿ ಜೊತೆ ಅದರ ಪ್ಲಾನ್ ಕೂಡ ಅವೈಜ್ಞಾನಿಕವಾಗಿ ಇದೆ. ರಸ್ತೆಯ ಗುಣಮಟ್ಟವು ಉತ್ತಮವಾಗಿಲ್ಲ. ಈ ರಸ್ತೆಯಿಂದ ಮಂಡ್ಯ ಜಿಲ್ಲೆಯ ವ್ಯಾಪಾರ ವಹಿವಾಟು ನೆಲಕಚ್ಚಿ ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ರಸ್ತೆಯಿಂದ ಮಂಡ್ಯ ಜಿಲ್ಲೆಯ ಜನರಿಗೆ ಉಪಯೋಗವಿಲ್ಲ. ಬೆಂ-ಮೈ ಗೆ ಹೋಗುವವರಿಗೆ ಮಾತ್ರ ಉಪಯೋಗ. ಈ ರಸ್ತೆಗಾಗಿ ಮಂಡ್ಯ ಜಿಲ್ಲೆಯ ಜನರು ಸಾಕಷ್ಟು ತ್ಯಾಗ ಮಾಡಿದ್ದಾರೆ ಆದರೂ ಈ ಭಾಗ ಜನರಿಗೆ ಅನಾನುಕೂಲವಾಗಿದೆ ಎಂದು ಪುಟ್ಟರಾಜು ಆಕ್ರೋಶ ಹೊರ ಹಾಕಿದರು.
ಇದನ್ನು ಓದಿ:ಕಾಂಗ್ರೆಸ್ನಿಂದ 1.50 ಲಕ್ಷಕ್ಕೂ ಹೆಚ್ಚು ಅಲ್ಪಸಂಖ್ಯಾತ ಮತದಾರರ ಹೆಸರು ಅಕ್ರಮ ಸೇರ್ಪಡೆ: ಎನ್ ಆರ್ ರಮೇಶ