ETV Bharat / state

ಲೋಕಸಭೆ ಫಲಿತಾಂಶದ ನಂತರ ನನ್ನ ರಾಜೀನಾಮೆ ನಿರ್ಧಾರ ಬದಲಿಸಿದ್ದು ಪ್ರಧಾನಿ ಮೋದಿ: ಹೆಚ್​ಡಿಡಿ - ಪ್ರಧಾನಿ ಮೋದಿಯೊಂದಿಗೆ ದೇವೇಗೌಡರ ಮೈತ್ರಿ ವಿಚಾರ

ಕಳೆದ ಲೋಕಸಭಾ ಚುನಾವಣೆ ವೇಳೆ ರಾಜೀನಾಮೆ ಘೋಷಿಸಿ ಬಳಿಕ ಆ ನಿರ್ಧಾರದಿಂದ ಏಕೆ ಹಿಂದೆ ಸರಿದೆ ಎಂಬ ವಿಚಾರವಾಗಿ ಇಂದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

hd devegowda responds to allegations of his alliance with pm narendra modi
ಪ್ರಧಾನಿ ಮೋದಿ ಜೊತೆಗಿನ ಮೈತ್ರಿ ಆರೋಪಕ್ಕೆ ಹೆಚ್​ಡಿಡಿ ಪ್ರತಿಕ್ರಿಯೆ
author img

By

Published : Dec 5, 2021, 8:49 PM IST

Updated : Dec 5, 2021, 10:38 PM IST

ಮಂಡ್ಯ: ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಬಹುಮತ ಬಂದರೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದ ಜೆಡಿಎಸ್ ನಾಯಕ ಹೆಚ್​.ಡಿ. ದೇವೇಗೌಡ ನಂತರ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಈ ಕುರಿತು ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಹಲವು ವರ್ಷಗಳ ಹಿಂದೆ ನಡೆದಿದ್ದ ಬೆಳವಣಿಗೆ ಕುರಿತಂತೆ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು

ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷತ್​​ ಚುನಾವಣಾ ಅಭ್ಯರ್ಥಿ ಅಪ್ಪಾಜಿಗೌಡರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಕಳೆದ ಬಾರಿ ಸ್ಪರ್ಧೆ ಮಾಡಿ ಗೆದ್ದಿರುವವರನ್ನೇ ಶಾಸಕರೆಲ್ಲ ಒಗ್ಗೂಡಿ ಆಯ್ಕೆ ಮಾಡಿದ್ದೀವಿ. ಈ ಕುರಿತಂತೆ ಯಾರಲ್ಲೂ ಯಾವುದೇ ಗೊಂದಲಯಿಲ್ಲ. ನಿಖಿಲ್ ಕುಮಾರಸ್ವಾಮಿ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ಮೂರ್ನಾಲ್ಕು ಬಾರಿ ಇಲ್ಲಿಗೆ ಬಂದಿದ್ದಾರೆ. ನಾನಾಗಲಿ, ಕುಮಾರಸ್ವಾಮಿಯಾಗಲಿ ಜಿಲ್ಲೆಗೆ ಬಂದಿಲ್ಲ. ಜಿಲ್ಲೆಯ ಎಲ್ಲಾ ಶಾಸಕರು ಒಟ್ಟಿಗೆ ಚುನಾವಣೆ ಮಾಡುತ್ತಿರುವುದರಿಂದ ನಾನು ಜಿಲ್ಲೆಗೆ ಬಂದಿರಲಿಲ್ಲ. ಅಭ್ಯರ್ಥಿ ಹಾಗೂ ಅವರ ಮನೆಯವರು ಎಲ್ಲಾ ಮತದಾರರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಉಳಿದಂತೆ ಆಯಾ ತಾಲೂಕಿನಲ್ಲಿ ಶಾಸಕರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಮಹಿಳೆಯರಿಗೆ ಮೀಸಲಾತಿ ನೀಡಿದ್ದೇ ಜೆಡಿಎಸ್​:

ನಾನು 1995ರಲ್ಲಿ ಮಹಿಳೆಯರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಕಲ್ಪಿಸಿದ್ದೆ. ಇದರ ಪರಿಣಾಮವಾಗಿ 16 ಲೋಕಸಭೆ ಸ್ಥಾನಗಳನ್ನು ಗೆದ್ದಿದ್ದೆವು. ನಾನೊಬ್ಬ ಸಾಮಾನ್ಯ ಹಳ್ಳಿಯ ರೈತನ ಮಗ. ನಾನೆಂದು ಪ್ರಧಾನಮಂತ್ರಿ ಆಗ್ತಿನಿ ಅಂದುಕೊಂಡಿರಲಿಲ್ಲ. ಬಿಜೆಪಿಯ ವಾಜಪೇಯಿ ನೇತೃತ್ವದ ಸರ್ಕಾರ ಬಿದ್ದು ಹೋದ ನಂತರ ಕಾಂಗ್ರೆಸ್ಸೇತರ, ಬಿಜೆಪಿಯೇತರ ಸರ್ಕಾರ ರಚನೆಗಾಗಿ ದೆಹಲಿಗೆ ಕರೆಸಿಕೊಂಡರು. ಅಂದು ಒತ್ತಾಯ ಮಾಡಿ ನನ್ನನ್ನು ಆ ಸ್ಥಾನದಲ್ಲಿ ಕೂರಿಸಿದ ನಂತರ ನಾನೇನು ಕೆಲಸ ಮಾಡಿದ್ದೆ ಎಂದು ಹೇಳಲು ಹೋಗಲ್ಲ ಎಂದರು.

ಪುಸ್ತಕ ಬಿಡುಗಡೆ:

ರೈತನ ಮಗನಾದ ಪ್ರಧಾನಿಯಾಗಿ ಮಾಡಿರುವ ಕೆಲಸಗಳ ಬಗ್ಗೆ ಪುಸ್ತಕವೊಂದು ಬಿಡುಗಡೆಗೆ ಸಿದ್ಧವಾಗುತ್ತಿದೆ. ನಾನು ಏನು ಮಾಡಿದೆ ಎಂದು ಪ್ರಶ್ನಿಸುವವರಿಗೆ ಅದರಲ್ಲಿ ಉತ್ತರ ಸಿಗುತ್ತದೆ. ನಾನು ದೆಹಲಿಗೆ ಹೋದಾಗ ಒಂದು ಲೋಟ ಕಾಫಿ ಕೊಡಲಿಲ್ಲ. ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯನಾದಾಗ ರಾಜ್ಯದಲ್ಲಿ ಆಡಳಿತ ನಡೆಸಿದವರಿಂದಾಗಿ ಆಡಳಿತ ನಡೆಸಿದವರಿಂದ ನಮ್ಮ ಪಕ್ಷ 16 ರಿಂದ 2 ಸ್ಥಾನಕ್ಕೆ ಕುಸಿಯಿತು. ನನ್ನ ರಾಜಕೀಯ ಜೀವನಕ್ಕೆ ಶಕ್ತಿ ತುಂಬಿದ್ದು ಹಾಸನ ಮತ್ತು ಮಂಡ್ಯ ಜಿಲ್ಲೆಗಳು. ನಾನು ಮುಖ್ಯಮಂತ್ರಿ ಆಗಲು ನಾಡಿನ ಸಮಸ್ತ ಜನರ ಕೊಡುಗೆಯಿದೆ. 2023-2024ರ ಚುನಾವಣೆಗಳಲ್ಲೂ ನಾನು ಸುಮ್ಮನೇ ಕೂರುವುದಿಲ್ಲ. ನನ್ನ ಹೋರಾಟದ ಸಂಕಲ್ಪವನ್ನು ಯಾರೂ ಕಿತ್ತುಕೊಳ್ಳಲು ಆಗುವುದಿಲ್ಲ ಎಂದರು.

ರಾಜೀನಾಮೆ ಹಿಂದೆ ತೆಗೆದುಕೊಳ್ಳಲು ಕಾರಣ ತಿಳಿಸಿದ ಮಾಜಿ ಪಿಎಂ:

ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಬಹುಮತ ಗಳಿಸಿದ್ರೆ ನಾನು ರಾಜೀನಾಮೆ ನೀಡ್ತಿನಿ ಎಂದಿದ್ದೆ. ಅದರಂತೆ ಫಲಿತಾಂಶ ಪ್ರಕಟವಾದ ನಂತರ ಪ್ರಧಾನಿ ನರೇಂದ್ರ ಮೋದಿ ದೆಹಲಿಗೆ ಬರುವಂತೆ ನನಗೆ ಪತ್ರ ಬರೆದಿದ್ದರು. ದೆಹಲಿಗೆ ಹೋದಾಗ ರಾಜೀನಾಮೆ ತೆಗೆದುಕೊಳ್ಳಿ ಎಂದು ಹೇಳಿದ್ದೆ. ರಾಜಕೀಯದಲ್ಲಿ ಹೀಗೆ ಮಾತನಾಡುವುದು ಮಾಮೂಲಿ. ಇದನ್ನೆಲ್ಲ ಸೀರಿಯಸ್​ ಆಗಿ ತೆಗೆದುಕೊಳ್ಳಬೇಡಿ ಎಂದು ಮೋದಿ ನನ್ನ ಮನವೊಲಿಸಿದ್ದರು ಎಂದು ಹಿರಿಯ ರಾಜಕಾರಣಿ ದೇವೇಗೌಡರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಹೇಗಿದ್ದರು ಎಂಬುದು ನನಗೆ ಗೊತ್ತಿದೆ. ಎರಡೂ ಹುದ್ದೆಗಳನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರಲ್ಲಿ ಆಗಿರುವ ವ್ಯತ್ಯಾಸಗಳನ್ನು ಗಮನಿಸಿದ್ದೇನೆ. ಪ್ರಧಾನಿ ಮೋದಿ ಅವರ ವಿಚಾರದಲ್ಲಿ ನಾನು ಈಗ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಮಾತನಾಡುವವರು, ಗೋದ್ರಾ ಹತ್ಯಾಕಾಂಡದ ಬಗ್ಗೆ ನಾನು ಸಂಸತ್ತಿನಲ್ಲಿ ಏನೆಲ್ಲಾ ಮಾತನಾಡಿದ್ದೇನೆ ಎಂಬ ದಾಖಲೆಗಳನ್ನು ನೋಡಲಿ ಎಂದರು.

ತಮ್ಮ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದ ಜೆಡಿಎಸ್​ ನಾಯಕ ನಿಖಿಲ್​ ಕುಮಾರಸ್ವಾಮಿ

ಇದೇ ವೇಳೆ ಜೆಡಿಎಸ್ ನಾಯಕ ನಿಖಿಲ್​ ಕುಮಾರಸ್ವಾಮಿಯವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಉಂಟಾದ ಸೋಲನ್ನು ನೆನಪಿಸಿಕೊಂಡ ಅವರು, ಅಂದಿನ ಚುನಾವಣೆಯ ಸೋಲನ್ನು ಮರೆಯಲು ಈ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: ಬಾಳೆಹೊನ್ನೂರು ಜವಾಹರ್​ ನವೋದಯ ವಿದ್ಯಾಲಯದಲ್ಲಿ ಕೋವಿಡ್​ ಸ್ಫೋಟ.. 70 ಮಂದಿಗೆ ಸೋಂಕು ದೃಢ

Last Updated : Dec 5, 2021, 10:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.