ಮಂಡ್ಯ: ಮದ್ದೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಡಿಸಿ ತಮ್ಮಣ್ಣ ಅವರಿಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಮದ್ದೂರು ಪಟ್ಟಣದ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಡಿಸಿ ತಮ್ಮಣ್ಣನಿ ಅವರಿಗೆ ಚುನಾವಣೆ ಠೇವಣಿ ಕಟ್ಟಲು ದೇವರಹಳ್ಳಿ ಗ್ರಾಮಸ್ಥರು ಹಣ ಕೊಟ್ಟು ಆಶೀರ್ವಾದಿಸಿದರು.
ಬಳಿಕ ತೆರದ ವಾಹನದಲ್ಲಿ ಬೆಂಬಲಿಗರು ಮತ್ತು ಕಾರ್ಯಕರ್ತರ ಜೊತೆ ವಿವಿಧ ಕಲಾತಂಡಗಳ ಜೊತೆ ಬೃಹತ್ ಮೆರವಣಿ ಮತ್ತು ಬೈಕ್ ರ್ಯಾಲಿ ಮೂಲಕ ಮದ್ದೂರು ತಾಲ್ಲೂಕು ಕಚೇರಿಗೆ ಕರೆತಂದರು. ನಾಮಪತ್ರ ಸಲ್ಲಿಸಲು ಬರಿಗಾಲಿನಲ್ಲೆ ಬೈಕ್ನಲ್ಲಿ ಬಂದಿಳಿತ ಡಿಸಿ ತಮ್ಮಣ್ಣ ನಂತರ ಪತ್ನಿ ಪ್ರಮೀಳಾ, ಪುತ್ರಿ ಸೌಮ್ಯ ಜೊತೆ ತೆರಳಿ ಹಸಿರು ಶಾಲು ಧರಿಸಿ ರೈತರ ಹೆಸರಲ್ಲಿ ನಾಮಪತ್ರ ಸಲ್ಲಿಸಿದ್ದರು. ತಾಲೂಕೂ ಕಚೇರಿಯ ಮುಂಬಾಗ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಜೈಕಾರ ಕೂಗಿದರು.
ಬಳಿಕ ಮಾತನಾಡಿದ ಅವರು "ಇಂದು ಬಹಳ ಸಂತೋಷವಾಗುತ್ತಿದೆ. 23 ವರ್ಷದ ರಾಜಕೀಯ ಸೇವೆ ಗುರುತಿಸಿ ಆಶೀರ್ವಾದ ಮಾಡಿದ್ದಾರೆ. ಮತದಾರರ ಪ್ರತಿಕ್ರಿಯೆಗೆ ತುಂಬು ಹೃದಯದಿಂದ ಧನ್ಯವಾದ ಹೇಳುತ್ತೇನೆ. ಕ್ಷೇತ್ರದ ಜನರು ನನ್ನ ಮರೆತಿಲ್ಲ, ನನ್ನ ಜೀವ ಇರುವವರೆಗೆ ಅವರ ಋಣ ನನ್ನ ಮೇಲಿರುತ್ತೆ. ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಮತದಾರರು ನನ್ನ ಕೈ ಹಿಡಿಯುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಏಳು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುತ್ತೆ. ಕುಮಾರಸ್ವಾಮಿ ಅವರು ಮತ್ತೊಮ್ಮೆ ಸಿಎಂ ಹಾಗಲು ಜನರು ಸ್ಪಂದಿಸುತ್ತಾರೆ ಎಂಬ ಭರವಸೆ ಇದೆ" ಎಂದರು.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ಹೆಸರಲ್ಲಿ 5 ಕೋಟಿ ರೂ. ಸಾಲ.. ಸ್ವಂತ ಕಾರು ಇಲ್ವಂತೆ!
"ನಮ್ಮ ಜೆಡಿಎಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ತಕ್ಷಣವೇ ಮದ್ದೂರು ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಮಾಡುತ್ತೇನೆ. ಬಿಜೆಪಿ ಸರ್ಕಾರದ ಅವ್ಯವಹಾರ, ತಾರತಮ್ಯ ನೀತಿಯಿಂದ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಈ ಚುನಾವಣೆಯಲ್ಲಿ ಖಂಡಿತ ಕುಮಾರಣ್ಣನ ಸರ್ಕಾರ ಖಂಡಿತವಾಗಿ ಅಧಿಕಾರಕ್ಕೆ ಬರುತ್ತೆ. ಜೆಡಿಎಸ್ ಸರ್ಕಾರ ರಚನೆಯಾರೆ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ದೀ ಮಾಡಲು ಕಾರ್ಯಪ್ರವೃತ್ತನಾಗುತ್ತೇನೆ ಎಂದು ಭರವಸೆ ಕೋಡುತ್ತೀನಿ" ಎಂದರು.
ಮುಂದುವರೆದು ಮಾತನಾಡಿ, "ಮಂಡ್ಯ ಜಿಲ್ಲೆಯ ಮತದಾರರು ಒಂದು ಸಾರಿ ಕುಮಾರಸ್ವಾಮಿ ಅವರಿಗೆ ಮತ ಕೊಡಿ. ಯಾರೇ ಏನೇ ಅಪಪ್ರಚಾರ ಮಾಡಿದರು ಕೂಡ ಕಿವಿಕೊಡಬೇಡಿ, ಇದು ನನ್ನ ಕೊನೆ ಚುನಾವಣೆ ಮತದಾರರು ನನ್ನ ಕೈಯಿಡಿಯುತ್ತಾರೆ ಎನ್ನುವ ಭರವಸೆ ಇದೆ. ಮದ್ದೂರಿನಲ್ಲಿ ಕುತಂತ್ರ ರಾಜಕಾರಣ ನಡೆಯಲ್ಲ ಎಂದು ತಿಳಿಸಿದರು.
ಸಂಸದೆ ಸುಮಲತಾ ಅವರು ಜೆಡಿಎಸ್ನ ಛಿದ್ರ ಮಾಡಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, "ಟೀಕೆ ಮಾಡುವರಿಗೆಲ್ಲಾ ಉತ್ತರ ಕೊಡುತ್ತಾ ಹೋದರೆ ಸಮಯ ವ್ಯರ್ಥ, ಉತ್ತರ ಕೊಡುವ ಅವಶ್ಯಕತೆಯು ನನಗಿಲ್ಲ" ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿಯ ಸಂಭಾವ್ಯ ಸಿಎಂ ಅಭ್ಯರ್ಥಿಗಳಿಗೆ ಟಿಕೆಟ್ ಸಿಗದಂತೆ ಪ್ರಹ್ಲಾದ ಜೋಶಿ ಮಾಡಿದ್ದಾರೆ; ಯು ಟಿ ಖಾದರ್