ETV Bharat / state

ಕ್ಯಾಟ್​ ಫಿಶ್​ ಪ್ರಕರಣ: ಅಧಿಕಾರಿಗಳೇ ಅಕ್ರಮ ದಂಧೆಯಲ್ಲಿ ಪಾಲ್ಗೊಂಡಿದ್ದಾರಾ..?

author img

By

Published : Aug 21, 2019, 12:45 AM IST

ಅಕ್ರಮ ಕ್ಯಾಟ್​ ಫಿಶ್ ದಂಧೆಗೆ ಅಧಿಕಾರಿಗಳೆ ಬೆಂಬಲವಾಗಿದ್ದಾರಾ ಎಂಬ ಅನುಮಾನಕ್ಕೆ ಪುಷ್ಟಿ ನೀಡುವಂತೆ ಜಿಲ್ಲಾ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ದಾಳಿ ನಡೆಸಿದ ಮೀನುಗಾರಿಕಾ ಇಲಾಖೆ ಅಧಿಕಾರಿಗಳು

ಮಂಡ್ಯ: ಜಿಲ್ಲೆಯಲ್ಲಿ ಕ್ಯಾಟ್ ಫಿಶ್ ದಂಧೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮೀನುಗಾರಿಕೆ ಇಲಾಖೆ ಸಹಾಯಕ ಉಪನಿರ್ದೇಶಕರು ಪೊಲೀಸ್ ಸಿಬ್ಬಂದಿ ಸಮೇತ ದಾಳಿ ಮಾಡಿದರೂ ಮೀನುಗಳ ನಾಶ ಅಥವಾ ವಶಕ್ಕೆ ಪಡೆಯದೇ ತೆರಳಿದ್ದಾರೆ ಇದು ಅನುಮಾನಕ್ಕೆ ಕಾರಣವಾಗಿದೆ.

ದಾಳಿ ನಡೆಸಿದ ಮೀನುಗಾರಿಕಾ ಇಲಾಖೆ ಅಧಿಕಾರಿಗಳು

ಆಗಸ್ಟ್ 18 ರಂದು ಅಕ್ರಮ ಕ್ಯಾಟ್​ ಫೀಶ್ ದಂಧೆ ಬಗ್ಗೆ ಈಟಿವಿ ಭಾರತ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡು, ಮೀನು ಸಾಕಾಣಿಕೆ ಹೊಂಡದ ಮೇಲೆ ಆಗಸ್ಟ್ 20ರಂದು ದಾಳಿ ನಡೆಸಿದ್ದಾರೆ. ಆದರೆ, ಅಲ್ಲಿ ಮೀನುಗಳ ನಾಶ ಮಾಡಬೇಕಾದ ಅಧಿಕಾರಿಗಳು ಯಾವುದೋ ಕರೆಗೆ ಬೆದರಿ ಜಾಗದಿಂದ ಕಾಲು ಕಿತ್ತಿದ್ದಾರೆ ಎನ್ನಲಾಗುತ್ತಿದೆ.

ಮೀನುಗಾರಿಕೆ ಇಲಾಖೆ ಸಹಾಯಕ ಉಪನಿರ್ದೇಶಕಿ ಪುಷ್ಪಲತಾ, ಮಂಡ್ಯ ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಜೊತೆ, ತಮ್ಮ ಇಲಾಖೆ ವಾಹನ ಬಿಟ್ಟು ಬೈಕ್​ನಲ್ಲಿ ಕಾರಸವಾಡಿ ಸಮೀಪದ ಮೀನು ಸಾಕಾಣಿಕಾ ಕೇಂದ್ರಕ್ಕೆ ಆಗಮಿಸಿದ್ದರು. ಆದರೆ, ಫೋನ್​ ಕರೆ ಬರುತ್ತಿದ್ದಂತೆ ಜಾಗ ಖಾಲಿ ಮಾಡಿದ್ದಾರೆ. ಹೀಗಾಗಿ ಅಧಿಕಾರಿಗಳು ಇಂತಹ ಅಕ್ರಮ ಸಾಗಾಣಿಕೆಗೆ ಸಹಾಯಮಾಡುತ್ತಿದ್ದಾರಾ ಎಂಬುದು ಇಲ್ಲಿನ ಗ್ರಾಮಸ್ಥರ ಅನುಮಾನವಾಗಿದೆ.

ಕ್ಯಾಟ್ ಫಿಶ್ ಸಾಕಾಣಿಕೆ ನಿಷೇಧ ಮಾಡಲಾಗಿದೆ. ಇದು ಅಪರಾಧ ಕೂಡಾ. ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ತೆಗೆದುಕೊಳ್ಳಲು ಶೀಘ್ರವೇ ತಿಳಿಸುವುದಾಗಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದರು..

Intro:ಮಂಡ್ಯ: ಕ್ಯಾಟ್ ಫಿಶ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ದಾಳಿ ಮಾಡಿದ ಅಧಿಕಾರಿಗಳೇ ದಂಧೆಯಲ್ಲಿ ಪಾಲ್ಗೊಂಡಿದ್ದಾರಾ ಎಂಬ ಅನುಮಾನ ಎದುರಾಗಿದೆ. ಮೀನುಗಾರಿಕೆ ಇಲಾಖೆ ಸಹಾಯಕ ಉಪನಿರ್ದೇಶಕರು ಪೊಲೀಸ್ ಸಿಬ್ಬಂದಿ ಸಮೇತ ದಾಳಿ ಮಾಡಿದರೂ ಮೀನುಗಳ ನಾಶ ಮಾಡದೇ ತೆರಳಿರುವುದು ಅನುಮಾನಕ್ಕೆ ಕಾರಣವಾಗಿದೆ.

ಹೌದು, ಆಗಸ್ಟ್ 18ರಂದು ಕ್ಯಾಶ್ ಫಿಶ್ ದಂಧೆ ಬಗ್ಗೆ ಈಟಿವಿ ಭಾರತ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದರಿಂದ ಅಧಿಕಾರಿಗಳು ಎಚ್ಚೆತ್ತುಕೊಂಡರು, ಮೀನ ಸಾಕಾಣಿಕೆ ಹೊಂಡದ ಮೇಲೆ ದಾಳಿ ಮಾಡಿದರು ಎಂಬ ನೆಮ್ಮದಿಯೂ ಇತ್ತು. ಆದರೆ ಅಧಿಕಾರಿಗಳು ಮಾಡಿದ್ದೇ ಬೇರೆಯಾಗಿದೆ. ಮೀನುಗಳ ನಾಶ ಮಾಡಬೇಕಾದ ಅಧಿಕಾರಿಗಳು ಯಾವುದೋ ಫೋನ್ ಕಾಲ್ ಗೆ ಬೆದರಿ ಜಾಗದಿಂದ ಕಾಲು ಕಿತ್ತರು.

ಮೀನುಗಾರಿಕೆ ಇಲಾಖೆ ಸಹಾಯಕ ಉಪನಿರ್ದೇಶಕಿ ಪುಷ್ಪಲತಾ ಮಂಡ್ಯ ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಜೊತೆ, ತಮ್ಮ ಇಲಾಖಾ ವಾಹನ ಬಿಟ್ಟು ಬೈಕ್ ನಲ್ಲಿ ಕಾರಸವಾಡಿ ಸಮೀಪದ ಮೀನು ಸಾಕಾಣಿಕಾ ಕೇಂದ್ರಕ್ಕೆ ಆಗಮಿಸಿದ್ದರು. ಆದರೆ ಯಾವುದೋ ಕರೆಗೆ ಓಗಟ್ಟು ಸ್ಥಳದಿಂದ ತೆರಳಿದ ಅಧಿಕಾರಿ, ಮೀನುಗಳ ನಾಶದ ಬದಲು ಅದರ ಸಾಗಾಣಿಕೆಗೆ ಸಹಾಯ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಡಾ. ವೆಂಕಟೇಶ್, ಕ್ಯಾಟ್ ಫಿಶ್ ಸಾಕಾಣಿಕೆ ನಿಷೇಧ ಮಾಡಲಾಗಿದೆ. ಇದು ಅಪರಾದ. ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸೋದಾಗಿ ಹೇಳಿದರು. ಆದರೆ ಸ್ಥಳಕ್ಕೆ ಹೋಗಿದ್ದ  ಅಧಿಕಾರಿ ಮಾತ್ರ ಏನೂ ಕ್ರಮ ಕೈಗೊಳ್ಳದೇ ವಾಪಸ್ ಬಂದಿರೋದು ಜಿಲ್ಲಾಡಳಿತದ ಮೇಲೆಯೇ ಅನುಮಾನ ಮೂಡಿಸುತ್ತಿದೆ.Body:ಬೈಟ್: ಡಾ. ವೆಂಕಟೇಶ್, ಜಿಲ್ಲಾಧಿಕಾರಿ

ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.