ETV Bharat / state

ವಾಚ್ ರಿಪೇರಿ ಮಾಡುತ್ತಿದ್ದ ಹುಡುಗ ಕೆಜಿಎಫ್ ಸಿನಿಮಾದ ಛಾಯಾಗ್ರಾಹಕನಾಗಿದ್ದು ಹೇಗೆ? - ಕೆಜಿಎಫ್ 2 ಚಿತ್ರದ ಚಿಕ್ಕವರ ದೊಡ್ಡ ಪ್ರತಿಭೆ

ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಕೆಜಿಎಫ್-2 ಸಿನಿಮಾದ ಎಡಿಟರ್ ಉಜ್ವಲ್ ಕುಲಕರ್ಣಿ ಎಂಬ 19 ವರ್ಷದ ಯುವಕನ ಸುದ್ದಿ ಕೂಡ ಇತ್ತೀಚೆಗೆ ಸಾಕಷ್ಟು ಸದ್ದು ಮಾಡಿತ್ತು. ಚಿಕ್ಕ ವಯಸ್ಸಿನಲ್ಲೇ ಇಷ್ಟು ದೊಡ್ಡ ಮಟ್ಟದ ಸಿನಿಮಾವನ್ನು ಎಡಿಟ್ ಮಾಡಿ ಸೈ ಅನ್ನಿನಿಸಿಕೊಳ್ಳುವುದು ನಿಜಕ್ಕೂ ಒಂದು ಸಾಧನೆ ಎಂದು ಬಣ್ಣಿಸಲಾಗಿತ್ತು. ಇದೀಗ ಈ ಸಾಲಿಗೆ ಮದ್ದೂರಿನ ಛಾಯಾಗ್ರಾಹಕ ಭುವನ್‌ಗೌಡ ಕೂಡ ಸೇರಿಕೊಂಡಿದ್ದಾರೆ..

Interesting Facts About KGF Cinematographer Bhuvan Gowda

author img

By

Published : Apr 19, 2022, 4:15 PM IST

ಮಂಡ್ಯ : ಸ್ಯಾಂಡಲ್​ವುಡ್​ನ ರಾಕಿಂಗ್ ಸ್ಟಾರ್ ಯಶ್​ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್​​ 'ಕೆಜಿಎಫ್ 2'​ ಸದ್ಯ ವಿಶ್ವದಲ್ಲೆಡೆ ಅಬ್ಬರಿಸುತ್ತಿರುವ ಬ್ಲಾಕ್​ ಬಸ್ಟರ್​ ಚಿತ್ರ. ಎಲ್ಲೆ ಹೋದರೂ ಇದರ ಬಗ್ಗೆಯೇ ಚರ್ಚೆ. ಈ ನಡುವೆ ಚಿತ್ರದಲ್ಲಿನ ರಣರೋಚಕ ದೃಶ್ಯಗಳನ್ನು ಸೆರೆಹಿಡಿದ ಛಾಯಾಗ್ರಾಹಕ ಕೈಚಳಕಕ್ಕೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ವಾಚ್​​​ಗಳನ್ನು ರಿಪೇರಿ ಮಾಡುತ್ತಿದ್ದ ಯುವಕ, ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವುದರ ಹಿಂದಿನ ಶ್ರಮ ಸಾಕಷ್ಟಿದೆ.

Interesting Facts About KGF Cinematographer Bhuvan Gowda
ಕೆಜಿಎಫ್-2 ಸಿನಿಮಾದ ಚಿತ್ರೀಕರಣ

ವಿಶ್ವದೆಲ್ಲೆಡೆ ಅಬ್ಬರಿಸುತ್ತಿರುವ ಕೆಜಿಎಫ್ ಚಿತ್ರದ ಛಾಯಾಗ್ರಾಹಕ ಭುವನ್‌ಗೌಡ ಮೂಲತಃ ಮದ್ದೂರು ತಾಲೂಕು ಕೌಡ್ಲೆ ಗ್ರಾಮದವರು. ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ಉಗ್ರಂ ಸಿನಿಮಾದಿಂದ ತಮ್ಮ ಸಿನಿ ಪಯಣ ಆರಂಭಿಸಿದ ಭುವನ್, ಇಂದು ಅತ್ಯಂತ ಬ್ಯೂಸಿ ಛಾಯಾಗ್ರಾಹಕರಾಗಿದ್ದಾರೆ.

ಉಗ್ರಂನಿಂದ ಹಿಡಿದು ಕೆಜಿಎಫ್ ಚಾಪ್ಟರ್ 2ವರೆಗೆ ಆರು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಇವರು, ಸೈಮಾ ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡಿದ್ದಾರೆ. ಕೆಲ ವರ್ಷದ ಹಿಂದೆ ಕೇವಲ ಐದರಿಂದ ಹತ್ತು ಸಾವಿರ ರೂ. ಸಂಪಾದನೆಗೆಂದು ಬೆಂಗಳೂರಿಗೆ ಹೋದ ಭುವನ್, ಇದೀಗ ಮಾಯಾನಗರಿಯಲ್ಲಿ ಮಿಂಚುತ್ತಿರುವ ಸಾಧಕ. ಅವರ ಇತಿಹಾಸವೂ ಸಹ ಅಷ್ಟೇ ಕುತೂಹಲಕಾರಿಯಾಗಿದೆ.

ಸೈಮಾ ಪ್ರಶಸ್ತಿ ಸ್ವೀಕರಿಸುತ್ತಿರುವ ಭುವನ್‌ಗೌಡ

ಹಳ್ಳಿಯಲ್ಲಿ ವಾಚ್ ರಿಪೇರಿ : ಕೌಡ್ಲೆ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಭುವನ್‌ಗೌಡ, ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ಶಿಕ್ಷಣ ಪಡೆದರು. ವ್ಯಾಸಂಗದ ಜತೆಗೆ ಕ್ರೀಡೆಯಲ್ಲಿಯೂ ಸಹ ಆಸಕ್ತಿ ಹೊಂದಿದ್ದರು. ಸ್ನೇಹಿತರು ಇವರನ್ನು ಪ್ರೀತಿಯಿಂದ ಬೋನಿ ಎಂದೇ ಕರೆಯುತ್ತಿದ್ದರಂತೆ. ಪಿಯುಸಿ ನಂತರ ಜೀವನೋಪಾಯಕ್ಕಾಗಿ ಗ್ರಾಮದಲ್ಲಿ ಚಿಕ್ಕದಾಗಿ ವಾಚ್ ರಿಪೇರಿ ಮಾಡುವ ಅಂಗಡಿ ಪ್ರಾರಂಭಿಸಿದರು. ಒಂದಷ್ಟು ತಿಂಗಳು ಕೆಲಸ ಮಾಡಿ, ಇನ್ನಷ್ಟು ಸಂಪಾದನೆ ಮಾಡಬೇಕೆಂದು ಬೆಂಗಳೂರಿನತ್ತ ಮುಖ ಮಾಡಿದರು.

ನಟ ಯಶ್​ ಅವರೊಂದಿಗೆ ಭುವನ್‌ಗೌಡ

ಅಂದುಕೊಂಡಂತೆ ಜೀವನ ಅಷ್ಟೊಂದು ಸುಲಭವಾಗಿರಲಿಲ್ಲ. ಈ ಹಿನ್ನೆಲೆ ವಾಚ್ ರಿಪೇರಿ ಬಿಟ್ಟು ಸಿಮೆಂಟ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿಯೂ ಸ್ವಲ್ಪ ದಿನ ದುಡಿದು ನಂತರ ರಿಲಯನ್ಸ್‌ನಲ್ಲಿ ಬಿಲ್ ಕಲೆಕ್ಟರ್ ಉದ್ಯೋಗ ಗಿಟ್ಟಿಸಿಕೊಂಡರು. ಈ ವೇಳೆ ಚಿತ್ರ ಕಲಾವಿದರೊಂದಿಗೆ ಬಾಂಧವ್ಯ ಬೆಳೆಯಿತು.

ನೋಡಲು ಸುಂದರವಾಗಿದ್ದ ಕಾರಣಕ್ಕೆ ಧಾರಾವಾಹಿಯಲ್ಲಿ ನಟಿಸುವಂತೆ ಸಲಹೆ ನೀಡಿದ್ದರಂತೆ. ಅದರಂತೆ ಭುವನ್‌ಗೌಡ ಫೋಟೋಶೂಟ್ ಕೂಡ ಮಾಡಿಸಿಕೊಂಡರಂತೆ. ಆದರೆ, ಅದ್ಯಾಕೋ ಕೈಹಿಡಿಯಲಿಲ್ಲ. ನಂತರ ತಾನೇ ಫೋಟೋಗ್ರಫಿ ಮಾಡಬೇಕೆಂದು ನಿರ್ಧರಿಸಿ ತರಬೇತಿ ಪಡೆದರು. ಇಲ್ಲಿಂದ ಚಿತ್ರರಂಗದೊಂದಿಗೆ ನಂಟು ಆರಂಭವಾಯಿತು. ಇದೇ ಅವರ ಮೊದಲ ಮೆಟ್ಟಿಲಾಯಿತು.

ಚಿತ್ರೀಕರಣದ ವೇಳೆ ಭುವನ್‌ಗೌಡ

ಬದುಕು ಬದಲಿಸಿದ ಉಗ್ರಂ : ಸ್ಟಿಲ್ ಫೋಟೋಗ್ರಫಿ ಮಾಡುತ್ತಿದ್ದ ಭುವನ್, ನಂತರ ಛಾಯಾಗ್ರಾಹಕ ತರಬೇತಿ ಪಡೆದುಕೊಂಡರು. ಈ ವೇಳೆ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ಪರಿಚಯವಾಯಿತು. ಉಗ್ರಂ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಆಯ್ಕೆಯಾದವರು ಕೈಕೊಟ್ಟ ಕಾರಣ ಭುವನ್‌ಗೌಡಗೆ ಅವಕಾಶ ಸಿಕ್ಕಿತ್ತು.

ಇಲ್ಲಿಂದ ಅವರ ಬದುಕು ಬದಲಿಸಿತು. ಉಗ್ರಂನಲ್ಲಿಯೇ ಉತ್ತಮ ಕೈಚಳಕ ತೋರಿದ ನಂತರ ಒಂದೊಂದೇ ಸಿನಿಮಾ ಹುಡುಕಿ ಬಂದವು. ಉಗ್ರಂ ನಂತರ ನಟ ಶ್ರೀಮುರುಳಿ ಅವರೊಂದಿಗೆಯೇ ರಥಾವರ ಬಳಿಕ ವಿಭಿನ್ನ ಚಿತ್ರ ಪುಷ್ಪಕ ವಿಮಾನ ಮಾಡಿದರು. ಇದಾದ ನಂತರ ಪ್ರಶಾಂತ್ ನೀಲ್ ಹಾಗೂ ನಟ ಯಶ್ ತಂಡದೊಂದಿಗೆ ಕೆಜಿಎಫ್ ಪ್ರಾರಂಭಿಸಿದರು.

Still Photographer Bhuvan Gowda's Interesting Facts
ರಾಕಿಂಗ್ ಸ್ಟಾರ್ ಯಶ್​ ಮತ್ತು ಪ್ರಶಾಂತ್ ನೀಲ್

ಹೊಸ ಸಂಚಲನ ಮೂಡಿಸಿದ ಕೆಜಿಎಫ್ : ಕೆಜಿಎಫ್ ಚಾಫ್ಟರ್ 1ನೇ ಭಾಗ ಭಾರತೀಯ ಚಿತ್ರರಂಗದಲ್ಲೇ ಹೊಸ ಸಂಚಲನ ಮೂಡಿಸಿದ ಚಿತ್ರವಾಯಿತು. ಚಿತ್ರದ ದೃಶ್ಯ ಅದ್ಧೂರಿಯಾಗಿ ಕಾಣಿಸಿದ್ದವು. ಚಿತ್ರದ ಗೆಲುವಿನಲ್ಲಿ ಛಾಯಾಗ್ರಾಹಣವೂ ಒಂದು ಪ್ರಮುಖ ಭಾಗವಾಗಿತ್ತು. ಭುವನ್ ಪರಿಶ್ರಮಕ್ಕೆ ಸೈಮಾ ಪ್ರಶಸ್ತಿಯೂ ಸಿಕ್ಕಿತ್ತು. ಈಗ ಬಿಡುಗಡೆಯಾಗಿರುವ ಕೆಜಿಎಫ್ ಚಾಫ್ಟರ್ 2 ಕೂಡ ಎಲ್ಲೆಡೆ ಅಬ್ಬರಿಸುತ್ತಿದೆ. ಚಿತ್ರದ ದೃಶ್ಯಗಳಿಗೆ ಫುಲ್ ಮಾರ್ಕ್ಸ್ ಸಿಕ್ಕಿದೆ. ಇದರಿಂದಾಗಿ ಭುವನ್ ಇನ್ನಷ್ಟು ಎತ್ತರಕ್ಕೆ ಹೋಗಿದ್ದಾರೆ.

ಅಂದು ಗ್ರಾಮದ ಚಿಕ್ಕ ಅಂಗಡಿಯೊಂದರಲ್ಲಿ ವಾಚ್ ರಿಪೇರಿ ಮಾಡುತ್ತಿದ್ದ ಯುವಕ, ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದುಕೊಂಡಿರುವುದಕ್ಕೆ ಗ್ರಾಮಸ್ಥರು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಂತೆಯೇ ಶ್ರಮವಹಿಸಿ ಕೆಲಸ ಮಾಡಿದರೆ ಏನನ್ನಾದರೂ ಸಾಧನೆ ಮಾಡುಬಹುದೆಂದು ಇನ್ನಷ್ಟು ಯುವಕರಿಗೆ ಇವರು ಮಾದರಿಯಾಗಿದ್ದಾರೆ.

ಸ್ನೇಹಿತರೊಂದಿಗೆ ಭುವನ್‌ಗೌಡ

ಯುವಕರಿಗೆ ಅವಕಾಶ : ವಿಶ್ವಮಟ್ಟದಲ್ಲಿ ಹೆಸರು ಗಳಿಸಿದರೂ ಸ್ವಗ್ರಾಮ ಕೌಡ್ಲೆ ಗ್ರಾಮದೊಂದಿಗೆ ಬಾಂಧವ್ಯವನ್ನು ಉಳಿಸಿಕೊಂಡಿರುವ ಭುವನ್, ಆಗಾಗ ಹಳ್ಳಿಗೆ ಬರುತ್ತಿರುತ್ತಾರೆ. ಚುನಾವಣೆ ಸಮಯದಲ್ಲಿ ಮತದಾನ ಮಾಡಲು ತಪ್ಪದೇ ಆಗಮಿಸುತ್ತಿದ್ದಾರೆ. ಇದಲ್ಲದೆ ಇವರಿಗೆ ದೊಡ್ಡ ಸ್ನೇಹಿತರ ಬಳಗವೂ ಇದೆ. ಇನ್ನು ತನ್ನಂತೆಯೇ ಛಾಯಾಗ್ರಾಹಕ ತರಬೇತಿ ಪಡೆಯಲು ಆಸಕ್ತಿ ಇರುವ ಯುವಕರಿಗೆ ಅವಕಾಶ ನೀಡುತ್ತಿರುವ ಅವರು, ಕೆಜಿಎಫ್‌ನಲ್ಲಿ ಸಹಾಯಕರಾಗಿ ಜಿಲ್ಲೆಯ ನಾಲ್ಕೈದು ಯುವಕರನ್ನು ಬಳಸಿಕೊಂಡಿದ್ದಾರಂತೆ.

ಕೆಜಿಎಫ್-2 ಸಿನಿಮಾದ ಎಡಿಟರ್ ಉಜ್ವಲ್ ಕುಲಕರ್ಣಿ

ಚಿಕ್ಕವರ ದೊಡ್ಡ ಪ್ರತಿಭೆ : ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಕೆಜಿಎಫ್-2 ಸಿನಿಮಾದ ಎಡಿಟರ್ ಉಜ್ವಲ್ ಕುಲಕರ್ಣಿ ಎಂಬ 19 ವರ್ಷದ ಯುವಕನ ಸುದ್ದಿ ಕೂಡ ಇತ್ತೀಚೆಗೆ ಸಾಕಷ್ಟು ಸದ್ದು ಮಾಡಿತ್ತು. ಚಿಕ್ಕ ವಯಸ್ಸಿನಲ್ಲೇ ಇಷ್ಟು ದೊಡ್ಡ ಮಟ್ಟದ ಸಿನಿಮಾವನ್ನು ಎಡಿಟ್ ಮಾಡಿ ಸೈ ಅನ್ನಿನಿಸಿಕೊಳ್ಳುವುದು ನಿಜಕ್ಕೂ ಒಂದು ಸಾಧನೆ ಎಂದು ಬಣ್ಣಿಸಲಾಗಿತ್ತು. ಇದೀಗ ಈ ಸಾಲಿಗೆ ಮದ್ದೂರು ತಾಲೂಕು ಕೌಡ್ಲೆ ಗ್ರಾಮದ ಛಾಯಾಗ್ರಾಹಕ ಭುವನ್‌ಗೌಡ ಕೂಡ ಸೇರಿಕೊಂಡಿದ್ದಾರೆ.

ಕೆಜಿಎಫ್-2 ಸಿನಿಮಾದ ಪೋಸ್ಟರ್​

ಇದನ್ನೂ ಓದಿ: Bollywood KGF 2 collections record : ರಾಕಿ ಭಾಯ್​ ಆರ್ಭಟಕ್ಕೆ ಬಾಲಿವುಡ್ ಶಾಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.