ಮಂಡ್ಯ: ಜಲ ಸಂಪನ್ಮೂಲ ಹಾಗೂ ಕಾವೇರಿ ನೀರಾವರಿ ನಿಗಮ ವತಿಯಿಂದ ಇಂದು ಬಹು ಗ್ರಾಮ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಲಾಯಿತು.
ತೂಬಿನಕೆರೆ ಬಳಿ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಹಾಗೂ ಸಚಿವ ನಾರಾಯಣಗೌಡ ಚಾಲನೆ ನೀಡಿದರು. ಕೊತ್ತತ್ತಿ ಹೋಬಳಿಯ 28 ಗ್ರಾಮಗಳ ಕುಡಿಯುವ ನೀರಿನ ಯೋಜನೆ ಇದಾಗಿದ್ದು, ಹಲವು ವರ್ಷಗಳ ಬಹು ಬೇಡಿಕೆಯ ಯೋಜನೆ ಇದಾಗಿದೆ.
ಸುಮಾರು 5 ಕರೆಗಳನ್ನು ತುಂಬಿಸಿ ಆ ಮೂಲಕ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ. ಯೋಜನೆ ಪೂರ್ಣಗೊಂಡಿದ್ದು, ಕೆರೆಗಳನ್ನು ತುಂಬಿಸಿ ಕುಡಿಯುವ ನೀರು ಸರಬರಾಜಿಗೆ ಚಾಲನೆ ನೀಡಲಾಗಿದೆ.