ಮಂಡ್ಯ: ಮಂಡ್ಯದಲ್ಲಿ ಚುನಾವಣೆ ಸಂದರ್ಭ ಒಂದಲ್ಲೊಂದು ರೀತಿಯ ತಂತ್ರಗಾರಿಕೆ ನಡೆಯುತ್ತಲೇ ಇರುತ್ತವೆ. ಇಷ್ಟು ದಿನ ಜೆಡಿಎಸ್ನಲ್ಲಿ ಭಿನ್ನಮತ ಸದ್ದು ಮಾಡ್ತಿತ್ತು. ಆದರೀಗ ಕಾಂಗ್ರೆಸ್ನಲ್ಲೂ ಭಿನ್ನಮತ ಶುರುವಾಗಿದೆ.
ಸಂಸದೆ ಸುಮಲತಾ ಬೆಂಬಲಿಗರಲ್ಲಿ ಎರಡು ಬಣವಾಗಿದೆ. ಒಂದೆಡೆ ಬೇಲೂರು ಸೋಮಶೇಖರ್ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ರೆ, ಮತ್ತೊಂದೆಡೆ ಕಾಂಗ್ರೆಸ್ ಬೆಂಬಲಿಸದಿರಲು ಇಂಡುವಾಳು ಸಚ್ಚಿದಾನಂದ ನಿರ್ಧರಿಸಿದ್ದಾರೆ.
ಇಂಡುವಾಳು ಸಚ್ಚಿದಾನಂದ ಸಂಸದೆ ಸುಮಲತಾ ಆಪ್ತರು. ನಿನ್ನೆ ತಮ್ಮ ಬೆಂಬಲಿತ ಗ್ರಾ.ಪಂ ಸದಸ್ಯರ ಸಭೆ ನಡೆಸಿದ್ದು, ಕಾಂಗ್ರೆಸ್‌ನಲ್ಲಿ ನನ್ನನ್ನು ಕಡೆಗಣಿಸಿದ್ದಾರೆ. ಎಂಎಲ್ಸಿ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಬೆಂಬಲಿಸೋದು ಬೇಡ. ಡಿ.8 ರಂದು ಯಾವ ಅಭ್ಯರ್ಥಿಗೆ ಮತ ಹಾಕಬೇಕು ಎಂಬುದನ್ನು ಹೇಳುತ್ತೇನೆ ಎಂದು ಬೆಂಬಲಿಗರಿಗೆ ಸೂಚನೆ ಕೊಟ್ಟರು.
ಇದನ್ನೂ ಓದಿ: ಜಿ.ಟಿ.ದೇವೇಗೌಡರೇ ಇದು ನಿಮ್ಮ ಅಂತ್ಯಕಾಲ: ಜೆಡಿಎಸ್ ಶಾಸಕ ಸಿದ್ದೇಗೌಡ
ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಇಂಡವಾಳು ಸಚ್ಚಿದಾನಂದ ಚುನಾವಣೆಯ ವೇಳೆ ಸುಮಲತಾರಿಗೆ ಬೆಂಬಲ ನೀಡಿದ್ದು, ಪಕ್ಷದಿಂದ ಉಚ್ಛಾಟಿಸಲ್ಪಟ್ಟಿದ್ದರು. ಪ್ರಸಕ್ತ ಚುನಾವಣೆಯಲ್ಲಿ ತಮ್ಮನ್ನು ಕಡೆಗಣಿಸಿದ ಹಿನ್ನೆಲೆಯಲ್ಲಿ ತಟಸ್ಥವಾಗಿರುವ ಅವರು, ಶ್ರೀರಂಗಪಟ್ಟಣ ಕ್ಷೇತ್ರ ವ್ಯಾಪ್ತಿಯ ಗ್ರಾ.ಪಂ. ಸದಸ್ಯರೊಂದಿಗೆ ಸಭೆ ನಡೆಸಿ ಈ ರೀತಿಯ ಸೂಚನೆ ನೀಡಿದ್ದಾರೆ.