ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆನ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಸದ್ಯ 13,418 ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ. ಕೆಆರ್‌ಎಸ್ ಡ್ಯಾಂನ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಸದ್ಯ 109.52 ಅಡಿ ಭರ್ತಿಯಾಗಿದೆ. ಟಿಎಂಸಿ ಪ್ರಮಾಣದಲ್ಲಿ ಕೆಆರ್‌ಎಸ್ ಗರಿಷ್ಠ ಸಾಂದ್ರತೆ 49.452 ಟಿಎಂಸಿ ಇದ್ರೆ, ಪ್ರಸ್ತುತ 31.242 ಟಿಎಂಸಿಯಷ್ಟು ನೀರು ತುಂಬಿದೆ.
ತುಂಬಿ ಹರಿಯುತ್ತಿರುವ ತುಂಗಾ ನದಿ: ಶಿವಮೊಗ್ಗ ನಗರದ ಮಧ್ಯ ಭಾಗದಲ್ಲಿ ಹರಿಯುವ ತುಂಗಾ ನದಿಯು ತುಂಬಿ ಹರಿಯುತ್ತಿದೆ. ತುಂಗಾ ನದಿ ಹುಟ್ಟುವ ಪಶ್ಚಿಮ ಘಟ್ಟದ ಶೃಂಗೇರಿ, ಕಿಗ್ಗಾ ಸೇರಿದಂತೆ ಇತರೆ ಕಡೆ ವಿಪರೀತ ಮಳೆಯಾಗುತ್ತಿದೆ. ಇದರಿಂದ ತುಂಗಾ ಅಣೆಕಟ್ಟೆಗೆ ಸುಮಾರು 50 ಸಾವಿರ ಕ್ಯೂಸೆಕ್ ನೀರು ಬರುತ್ತಿದೆ. ಇದರಿಂದ ಅಷ್ಟೇ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
ಇದನ್ನೂ ಓದಿ: ಬೆಳ್ಳಕ್ಕಿಗಳ ಸಂತಾನೋತ್ಪತ್ತಿ ತಾಣ ಶಿರಸಿಯ ಮುಂಡಿಗೆಕೆರೆ : ಇಲ್ಲಿ ಸಿಗುತ್ತದೆ ಮಳೆಗಾಲದ ಮುನ್ಸೂಚನೆ
ತುಂಗಾ ಅಣೆಕಟ್ಟೆಯ 10 ಗೇಟುಗಳಿಂದ ನದಿಗೆ 50 ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಇದರಿಂದ ಶಿವಮೊಗ್ಗದ ನಗರ ಭಾಗದಲ್ಲಿರುವ ಮಂಟಪ ಮುಳುಗಲು ಎರಡು ಅಡಿ ಅಷ್ಟೇ ಬಾಕಿ ಇದೆ. ಶಿವಮೊಗ್ಗದ ಮಂಟಪ ಮುಳುಗಡೆಯಾದ್ರೆ, ಶಿವಮೊಗ್ಗ ನಗರ ಹಾಗೂ ಕಾಲುವೆ ನೀರು ಅವಲಂಬಿಸಿರುವ ರೈತರು ನಿಟ್ಟುಸಿರು ಬಿಡುತ್ತಾರೆ.
ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ:
ತುಂಗಾ ಅಣೆಕಟ್ಟು:
ಗರಿಷ್ಠ ಮಟ್ಟ- 588.26 ಮೀಟರ್
ಇಂದಿನ ನೀರಿನ ಮಟ್ಟ- 588.25 ಮೀಟರ್
ಒಳ ಹರಿವು- 50 ಸಾವಿರ ಕ್ಯೂಸೆಕ್
ಹೊರ ಹರಿವು- 50 ಸಾವಿರ ಕ್ಯೂಸೆಕ್
ಭದ್ರಾ ಜಲಾಶಯ:
ಗರಿಷ್ಠ ಮಟ್ಟ: 186 ಅಡಿ
ಇಂದಿನ ನೀರಿನ ಮಟ್ಟ- 158.60 ಅಡಿ
ಒಳ ಹರಿವು- 30.167 ಕ್ಯೂಸೆಕ್
ಹೊರ ಹರಿವು- ಇಲ್ಲ
ಲಿಂಗನಮಕ್ಕಿ ಜಲಾಶಯ:
ಗರಿಷ್ಠ ಮಟ್ಟ- 1819 ಅಡಿ
ಒಳ ಹರಿವು- 39.262 ಕ್ಯೂಸೆಕ್
ಹೊರ ಹರಿವು- ಇಲ್ಲ
ಜಿಲ್ಲೆಯ ತಾಲೂಕುವಾರು ಮಳೆಯ ವಿವರ:
ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 214.6 ಮಿ.ಮೀಟರ್ ಮಳೆಯಾಗಿದೆ. ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ 764.90 ಮಿ.ಮೀ ಮಳೆಯಾಗಬೇಕು. ಆದರೆ ಈವರೆಗೆ 128.66 ಮಿ.ಮೀ ಮಳೆಯಾಗಿದೆ.
ಶಿವಮೊಗ್ಗ -- 9.80 ಮಿ.ಮೀ.
ಭದ್ರಾವತಿ- 7.40 ಮಿ.ಮೀ.
ತೀರ್ಥಹಳ್ಳಿ-47.80 ಮಿ.ಮೀ.
ಸಾಗರ-57.10 ಮಿ.ಮೀ.
ಶಿಕಾರಿಪುರ- 13.30 ಮಿ.ಮೀ.
ಸೊರಬ-38.50; ಮಿ.ಮೀ.
ಹೊಸನಗರ-40.70 ಮಿ.ಮೀ ಮಳೆಯಾಗಿದೆ.