ಮಂಡ್ಯ: ಶವ ಸಂಸ್ಕಾರ ಮಾಡಿ ಸ್ವಗ್ರಾಮದತ್ತ ಹೊರಟಿದ್ದ ವೇಳೆ ಟಾಟಾ ಏಸ್ ವಾಹನ ಪಲ್ಟಿಯಾಗಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಸಮೀಪದ ತೂಬಿನಕೆರೆ ಬಳಿ ನಡೆದಿದೆ.
ಮಧ್ಯಾಹ್ನ ಶವ ಸಂಸ್ಕಾರಕ್ಕೆ ಹೋಗಿದ್ದ ಕೊತ್ತತ್ತಿ, ಬೇವಿನಹಳ್ಳಿ, ತೂಬಿನಕೆರೆ ಗ್ರಾಮದ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಮಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶವ ಸಂಸ್ಕಾರಕ್ಕೆ ಬಂದ ಜನರು ಟಾಟಾ ಏಸ್ ವಾಹನದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬರುವಾಗ ಅವಘಡ ನಡೆದಿದೆ. ಚಾಲಕನ ಅತಿಯಾದ ವೇಗವೇ ಘಟನೆಗೆ ಕಾರಣ ಎನ್ನಲಾಗಿದೆ.
ಘಟನೆಯಲ್ಲಿ 5 ಮಂದಿಗೆ ಗಂಭೀರ ಗಾಯಗಳಾಗಿದ್ದು, ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.