ETV Bharat / state

ನನಗೆ ಖಾತೆ ಬಗ್ಗೆ ಚಿಂತೆಯಿಲ್ಲ : ಸಚಿವ ನಾರಾಯಣಗೌಡ

ನಾನು ಜಿಲ್ಲೆಗೆ ಅನುಕೂಲ ಆಗುವ ಕೆಲಸ ಮಾಡಿದ್ದೇನೆ. ನಾನು ಇಂತಹ ಖಾತೆ ಬೇಕು ಎಂದು ಒತ್ತಡ ಹಾಕಲು ದೆಹಲಿಗೆ ಹೋಗಿಲ್ಲ. ನನಗೆ ಉಸ್ತುವಾರಿ ಜವಾಬ್ದಾರಿ ಸಿಕ್ಕ ತಕ್ಷಣ ಮಂಡ್ಯಕ್ಕೆ ಬಂದಿದ್ದೇನೆ. ಕೆಲಸ ಮಾಡುವಂತಹವರಿಗೆ ಯಾವ ಖಾತೆಯಾದರೇನು..

Minister Narayana Gowda
ಸಚಿವ ನಾರಾಯಣಗೌಡ
author img

By

Published : Aug 6, 2021, 7:49 PM IST

ಮಂಡ್ಯ : ನನಗೆ ಖಾತೆ ಬಗ್ಗೆ ಚಿಂತೆಯಿಲ್ಲ. ಆದರೆ, ಜಿಲ್ಲಾ ಉಸ್ತುವಾರಿ ಬಗ್ಗೆ ನನಗೆ ಅರ್ಜೆಂಟ್ ಇತ್ತು. ಆ ಸ್ಥಾನ ಕೊಟ್ಟಿದ್ದಾರೆ. ಹೀಗಾಗಿ, ನನಗೆ ಜಿಲ್ಲೆಯಲ್ಲಿ ಕೆಲಸ ಮಾಡುವ ಭಾಗ್ಯ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಸಿ ನಾರಾಯಣಗೌಡ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ ಸಿ ನಾರಾಯಣಗೌಡ

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಾತೆ ಯಾವಾಗ ಬೇಕಾದರೂ ನೀಡಲಿ, ಸದ್ಯ ನನಗೆ ನಮ್ಮ ಜಿಲ್ಲೆಯಲ್ಲಿ ಕೆಲಸ ಮಾಡಲು ಸಿಎಂ ಬೊಮ್ಮಾಯಿಯವರು ಅನುವು ಮಾಡಿಕೊಟ್ಟಿದಕ್ಕೆ ಸರ್ಕಾರ ಹಾಗೂ ಸಿಎಂಗೆ ಅಭಿನಂದನೆ ಎಂದರು.

ಯಾವ ಖಾತೆ ಕೊಟ್ಟರು ನಿಭಾಯಿಸುವೆ : ನನಗೆ ಯಾವ ಖಾತೆ ಕೊಟ್ಟರೂ ನಿಭಾಯಿಸಲು ಸಿದ್ಧನಿದ್ದೇನೆ. ನನಗೆ ಈ ಮೊದಲು ತೋಟಗಾರಿಕೆ, ರೇಷ್ಮೆ ಹಾಗೂ ಕ್ರೀಡಾ ಖಾತೆಗಳನ್ನು ನೀಡಿದ್ದರು. ಈ ವೇಳೆ ಖುಷಿಯಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ, ಯಾವುದೇ ಖಾತೆ ನೀಡಿದರೂ ಕೆಲಸ ಮಾಡುತ್ತೇನೆ ಎಂದ ಹೇಳಿದರು.

ಒತ್ತಡ ಹಾಕಲು ದೆಹಲಿಗೆ ಹೋಗಿರಲಿಲ್ಲ : ನಾನು ಜಿಲ್ಲೆಗೆ ಅನುಕೂಲ ಆಗುವ ಕೆಲಸ ಮಾಡಿದ್ದೇನೆ. ನಾನು ಇಂತಹ ಖಾತೆ ಬೇಕು ಎಂದು ಒತ್ತಡ ಹಾಕಲು ದೆಹಲಿಗೆ ಹೋಗಿಲ್ಲ. ನನಗೆ ಉಸ್ತುವಾರಿ ಜವಾಬ್ದಾರಿ ಸಿಕ್ಕ ತಕ್ಷಣ ಮಂಡ್ಯಕ್ಕೆ ಬಂದಿದ್ದೇನೆ. ಕೆಲಸ ಮಾಡುವಂತಹವರಿಗೆ ಯಾವ ಖಾತೆಯಾದರೇನು ಎಂದರು.

ಓದಿ: 'ಹಣ ಜಾಸ್ತಿ ಇದ್ದರೆ ಬಿಜೆಪಿಯವರ ಮನೆ ಮೇಲೂ ದಾಳಿ‌ ಮಾಡುತ್ತೆ'.. ಸಚಿವ ಪೂಜಾರಿ ತಿರುಗೇಟು

ಅತೃಪ್ತ ಶಾಸಕರು ರಮೇಶ್ ಜಾರಕಿಹೊಳಿ ಮನೆಯಲ್ಲಿ ಇಂದು ಸಭೆ ನಡೆಸಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸಭೆಯ ಬಗ್ಗೆ ನನಗೆ ಮಾಹಿತಿ ಇಲ್ಲ. ಅದೇನೆ ಇದ್ದರೂ ಮುಖ್ಯಮಂತ್ರಿ ಸರಿಪಡಿಸುತ್ತಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.