ಮಂಡ್ಯ: ಭಯೋತ್ಪಾದಕರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮನಾದ ಗುರು ಕುಟುಂಬಕ್ಕೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ದೂರವಾಣಿ ಮೂಲಕ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.
ತಮ್ಮ ಬೆಂಬಲಿಗನ ಮೊಬೈಲ್‌ಗೆ ಕರೆ ಮಾಡಿದ್ದ ಸಚಿವರು, ಯೋಧನ ಕುಟುಂಬದ ಜೊತೆ ಸರ್ಕಾರ ಇರುವುದಾಗಿ ಭರವಸೆ ನೀಡಿದ್ದಾರೆ. ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ಶೀಘ್ರವಾಗಿ ತರಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಗುರುವಿನ ತಂದೆ ಹೊನ್ನಯ್ಯ ಅವರೊಂದಿಗೆ ಸಚಿವ ತಮ್ಮಣ್ಣ ಮಾತನಾಡಿ, ಸಾಂತ್ವನ ಹೇಳಿದ್ರು.