ETV Bharat / state

ಗೊರೂರು ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ; ಗ್ರಾಮಗಳಿಗೆ ಮುಳುಗಡೆ ಭೀತಿ - ಗೊರೂರು ಜಲಾಶಯ

ಗೊರೂರು ಜಲಾಶಯದಿಂದ ಹೇಮಾವತಿ ನದಿಗೆ ಭಾರೀ ಪ್ರಮಾಣದ ನೀರು ಹರಿಸಿದ್ದು, ನದಿ ಪಾತ್ರದ ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ.

ಮುಳುಗಡೆ ಭೀತಿಯಲ್ಲಿ ಹಲವು ಗ್ರಾಮಗಳು
author img

By

Published : Aug 10, 2019, 10:47 AM IST

ಮಂಡ್ಯ: ಹೇಮಾವತಿ ನದಿಗೆ ಗೊರೂರು ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ತಾಲೂಕಿನ ನದಿ ಅಂಚಿನ ಹಲವು ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಕೆ.ಆರ್. ಪೇಟೆ ತಾಲೂಕಿನ ಚಿಕ್ಕ ಮಂದಗೆರೆ ಗ್ರಾಮದ ಬಳಿ ಜಮೀನಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ನದಿ ನೀರಿನ ರಭಸಕ್ಕೆ ಬೆಳೆಗಳು ಕೊಚ್ಚಿಹೋಗಿವೆ‌. ಸಣ್ಣ ಸಣ್ಣ ಸೇತುವೆಗಳು ಮುಚ್ಚಿ ಹೋಗಿವೆ.

ಮುಳುಗಡೆ ಭೀತಿಯಲ್ಲಿ ಹಲವು ಗ್ರಾಮಗಳು

ಚಿಕ್ಕಮಂದಗೆರೆ ಗ್ರಾಮಕ್ಕೆ ನೀರು ನುಗ್ಗಿದ್ದು ಕೆಲವು ಮನೆಗಳು ಜಲಾವೃತವಾಗಿವೆ. ಹಲವು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದ್ದು, ಗ್ರಾಮಸ್ಥರೇ ಮುಂದೆ ನಿಂತು ಸಹಾಯಹಸ್ತ ಚಾಚುತ್ತಿದ್ದಾರೆ. ಪ್ರವಾಹ ನೋಡಲು ಜನತೆ ನದಿ ಪಾತ್ರ ಹಾಗೂ ಚಿಕ್ಕ ಮಂದಗೆರೆ, ಬೇವಿನಕೊಪ್ಪಲು ಗ್ರಾಮದ ಬಳಿ ಆಗಮಿಸುತ್ತಿದ್ದಾರೆ.

ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮುಂಜಾಗ್ರತೆ ಕ್ರಮವಹಿಸಿದ್ದು, ನದಿಪಾತ್ರಕ್ಕೆ ಜನರು ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.

Intro:ಮಂಡ್ಯ: ಹೇಮಾವತಿ ನದಿಗೆ ಗೊರೂರು ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರನ್ನು ಬಿಟ್ಟ ಹಿನ್ನಲೆ ಕೆ.ಆರ್.ಪೇಟೆ ತಾಲ್ಲೂಕಿನ ನದಿ ಹಂಚಿನ ಹಲವು ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಕೆ.ಆರ್. ಪೇಟೆ ತಾಲ್ಲೂಕಿನ ಚಿಕ್ಕ ಮಂದಗೆರೆ ಗ್ರಾಮದ ಬಳಿ ಜಮೀನಿಗೆ ನದಿಯ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ನದಿ ನೀರಿನ ರಭಸಕ್ಕೆ ಕೆಲವು ಬೆಳೆಗಳು ಕೊಚ್ಚಿಹೋಗಿವೆ‌. ಸಣ್ಣ ಸಣ್ಣ ಸೇತುವೆಗಳು ಮುಚ್ಚಿ ಹೋಗಿದ್ದು ಜನರ ಪರದಾಟ ಶುರುವಾಗಿದೆ.
ಚಿಕ್ಕಮಂದಗೆರೆ ಗ್ರಾಮಕ್ಕೆ ನೀರು ನುಗ್ಗಿದ್ದು ಕೆಲವು ಮನೆಗಳು ಜಲಾವೃತವಾಗಿವೆ. ಕುಟುಂಬಗಳು ಸ್ಥಳಾಂತರವಾಗಿದ್ದು, ಗ್ರಾಮಸ್ಥರೇ ಮುಂದೆ ನಿಂತು ಸಹಾಯ ಹಸ್ತ ಚಾಚುತ್ತಿದ್ದಾರೆ. ಇನ್ನು ಪ್ರವಾಹ ನೋಡಲು ಜನತೆ ನದಿ ಪಾತ್ರದತ್ತ ಹಾಗೂ ಚಿಕ್ಕ ಮಂದಗೆರೆ, ಬೇವಿನಕೊಪ್ಪಲು ಗ್ರಾಮದ ಬಳಿ ಆಗಮಿಸುತ್ತಿದ್ದಾರೆ.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗಳ ಹಿನ್ನಲೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೊದಲೇ ಜನರಿಗೆ ಎಚ್ಚರಿಕೆ ಕೊಟ್ಟ ಹಿನ್ನಲೆ ನದಿಪಾತ್ರಕ್ಕೆ ಜನರು ಹೋಗುತ್ತಿಲ್ಲ.Body:ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.