ETV Bharat / state

ಮಂಡ್ಯ; ಮನೆಗಳ್ಳನ ಬಂಧನ 18 ಲಕ್ಷ ಮೌಲ್ಯದ ಚಿನ್ನಾಭರಣ ವಶ - ETV Bharat kannada News

ಸಾಕಷ್ಟು ಮನೆಗಳ್ಳತನ ಮಾಡಿದ ಕುಖ್ಯಾತ ಮನೆಗಳ್ಳನ ಬಂಧನ -ಕೆ.ಎಂ.ದೊಡ್ಡಿ ಪೊಲೀಸರಿಂದ ಯಶಸ್ವಿ ಕಾರ್ಯಚರಣೆ

Successful operation by police
ಪೊಲೀಸರಿಂದ ಯಶಸ್ವಿ ಕಾರ್ಯಚರಣೆ
author img

By

Published : Feb 1, 2023, 12:16 PM IST

ಮಂಡ್ಯ :ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಪೊಲೀಸರು ಕುಖ್ಯಾತ ಮನೆಗಳ್ಳನ ಬಂಧಿಸಿದ್ದು, ಆತನಿಂದ 18 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ, ಆಟೋ, 4 ಬೈಕ್ ವಶ ಪಡಿಸಿಕೊಂಡಿದ್ದಾರೆ. ಶ್ರೀರಂಗಪಟ್ಟಣ ತಾಲ್ಲೂಕು ಅರಕೆರೆ ಗ್ರಾಮದ ಮಹಮ್ಮದ್ ರಫೀಕ್ ಎಂಬುವವನು ಬಂಧಿತ ಆರೋಪಿಯಾಗಿದ್ದಾನೆ.

ದಿನಾಂಕ:4-01-2003ರಂದು ಕೆ.ಎಂ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಸುನೀತಾ ಎಂಬುವವರ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲನ್ನು ಹೊಡೆದು ಚಿನ್ನಾಭರಣ, ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಸುನೀತಾ ಅವರು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇತ್ತ ಪೊಲೀಸರು ಕೂಡ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದರು. ಈ ವೇಳೆ ಆರೋಪಿ ಮೊಹಮ್ಮದ್ ರಫೀಕ್ ಪೊಲೀಸರಿಗೆ ಸಿಕ್ಕಿಬಿದ್ದ.

ಈತ ಮಂಡ್ಯ ಜಿಲ್ಲೆ ಸೇರಿದಂತೆ ಎಂಟು ಪೋಲಿಸ್ ಠಾಣೆಗಳ ವ್ಯಾಪ್ತಿಯ ಸುಮಾರು ಮನೆಗಳಲ್ಲಿ ಕಳವು ಮಾಡಿದ್ದ. ಈತನಿಂದ ಸುಮಾರು 18 ಲಕ್ಷ ರೂ. ಬೆಲೆ ಬಾಳುವ 271 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿಯ ಡಾಬು, ಒಂದು ಗೂಡ್ಸ್ ಆಟೋ ಹಾಗೂ ಕೃತ್ಯಕ್ಕೆ ಬಳಸಿದ್ದ 2 ಬೈಕ್, 5 ಸಾವಿರ ರೂ. ನಗದು ಹಣವನ್ನು ಪೊಲೀಸರು ವಶಪಡಿಸಿಕೊಂದಿದ್ದಾರೆ.

ಈ ಪ್ರಕರಣವನ್ನು ಮಂಡ್ಯ ಎಸ್ಪಿ ಎನ್.ಯತೀಶ್, ಎಎಸ್ಪಿ ವೇಣುಗೋಪಾಲ್, ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ನವೀನ್ ಅವರ ಮಾರ್ಗದರ್ಶನದಲ್ಲಿ ಕೆ.ಎಂ.ದೊಡ್ಡಿ ಠಾಣೆಯ ಇನ್ಸ್‌ಪೆಕ್ಟರ್ ಶಿವಮಲಯ್ಯ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್​ಗಳಾದ ಭೀಮಪ್ಪ ಬನಾಸಿ, ರಾಮಸ್ವಾಮಿ, ಎಎಸ್‌ಐ ಕರಿಗಿರಿಗೌಡ, ಸಿಬ್ಬಂದಿಗಳಾದ ಪ್ರಭುಸ್ವಾಮಿ, ಮೋಹನ್ ಕುಮಾರ್, ವಿಠಲ್ ಕರಿಗಾರ್, ಸುಬ್ರಮಣಿ, ನರಸಿಂಹ ಮೂರ್ತಿ, ಸಿಡಿಆರ್ ವಿಭಾಗದ ರವಿಕಿರಣ್ ಮತ್ತು ಲೋಕೇಶ್ ಅವರು ಕಾರ್ಯಾಚರಣೆ ನಡೆಸಿ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ :ಜೈಂಟ್​​ ವ್ಹೀಲ್‌ಗೆ ಬಾಲಕಿಯ ತಲೆಕೂದಲು ಸಿಲುಕಿದ ಪ್ರಕರಣ: ಮೂವರ ವಿರುದ್ಧ FIR

ETV Bharat Logo

Copyright © 2025 Ushodaya Enterprises Pvt. Ltd., All Rights Reserved.