ETV Bharat / state

ದಾರಿಯಲ್ಲಿ ಸಿಕ್ಕ ಚಿನ್ನದ ಸರ ಪೊಲೀಸರಿಗೊಪ್ಪಿಸಿದ ಪ್ರಾಮಾಣಿಕ ಯುವಕ - mandya youth honesty

ಯುವಕನೊಬ್ಬ ದಾರಿಯಲ್ಲಿ ಸಿಕ್ಕ 33 ಗ್ರಾಂ ತೂಕದ ಚಿನ್ನದ ಸರವನ್ನು ಪೊಲೀಸ್ ಠಾಣೆಗೆ ನೀಡಿ ವಾರಸುದಾರರಿಗೆ ತಲುಪಿಸುವಂತೆ ಮನವಿ ಮಾಡಿದ್ದಾನೆ.

honest-youth-gave-gold-chain-to-police-station
ದಾರಿಯಲ್ಲಿ ಸಿಕ್ಕ ಚಿನ್ನದ ಸರ ಪೊಲೀಸರಿಗೊಪ್ಪಿಸಿದ ಪ್ರಾಮಾಣಿಕ ಯುವಕ
author img

By

Published : May 27, 2022, 9:58 PM IST

ಮಂಡ್ಯ: ರಸ್ತೆಯಲ್ಲಿ ಒಂದು ರೂಪಾಯಿ ಕಾಯಿನ್ ಕಂಡರೂ ಅದನ್ನು ಯಾರಿಗೂ ಕಾಣದಂತೆ ಎತ್ತಿಕೊಂಡು ಹೋಗುವ ಜನರೇ ಹೆಚ್ಚು. ಇನ್ನು ಚಿನ್ನಾಭರಣ ಸಿಕ್ಕರೆ ಬಿಡ್ತಾರಾ? ಆದರೆ, ಇಲ್ಲೊಬ್ಬ ಯುವಕ ದಾರಿಯಲ್ಲಿ ಸಿಕ್ಕ 33 ಗ್ರಾಂ ತೂಕದ ಚಿನ್ನದ ಸರವನ್ನು ಪೊಲೀಸ್ ಠಾಣೆಗೆ ನೀಡಿ ವಾರಸುದಾರರಿಗೆ ತಲುಪಿಸುವಂತೆ ಮನವಿ ಮಾಡಿದ್ದಾನೆ.

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಈ ಘಟನೆ ನಡೆದಿದೆ. ಮೈಸೂರಿನ ಟ್ರ್ಯಾಕ್ಟರ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ಚಂದ್ರಶೇಖರ್​ ಎಂಬಾತ ಗುರುವಾರ ರಾತ್ರಿ ಕುಟುಂಬಸ್ಥರ ಜೊತೆ ಸಂಬಂಧಿಕರ ಮದುವೆಗೆಂದು ನಾಗಮಂಗಲಕ್ಕೆ ಬಂದಿದ್ದ. ನಿದ್ರೆ ಮಾಡಲು ರೂಂಗೆ ತೆರಳುತ್ತಿದ್ದ ವೇಳೆ ದಾರಿಯಲ್ಲಿ ಚಿನ್ನದ ಸರ ಸಿಕ್ಕಿದೆ.

ಬಳಿಕ ಅದನ್ನು ತೆಗೆದುಕೊಂಡು ರೂಂಗೆ ಹೋದ ಚಂದ್ರಶೇಖರ್, ಶುಕ್ರವಾರ ಬೆಳಗ್ಗೆ ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ವಾರಸುದಾರರಿಗೆ ತಲುಪಿಸಿ ಎಂದು ಪೊಲೀಸರಿಗೆ ನೀಡಿದ್ದಾನೆ. ಚಂದ್ರಶೇಖರ್‌ನ ಪ್ರಾಮಾಣಿಕತೆಗೆ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೋಡಿಹಳ್ಳಿ ಚಂದ್ರಶೇಖರ್ ಡೀಲ್ ಹೋರಾಟಗಾರ: ಬಿಜೆಪಿ ಟೀಕೆ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.