ಮಂಡ್ಯ: ಬೆಳ್ಳಂ ಬೆಳಗ್ಗೆ ಪುರಸಭೆಗೆ ಆಡಳಿತಾಧಿಕಾರಿ ಭೇಟಿ ನೀಡಿ ಪುರಸಭೆ ಅಧಿಕಾರಿಗಳಿಗೆ ಚಳಿ ಬಿಡಿಸಿರುವ ಘಟನೆ ಕೆ.ಆರ್.ಪೇಟೆಯಲ್ಲಿ ನಡೆದಿದೆ.
ಇಂದು ಪುರಸಭೆ ಆಡಳಿತಾಧಿಕಾರಿಯಾಗಿರುವ ಪಾಂಡವಪುರ ಉಪವಿಭಾಗಾಧಿಕಾರಿ ನಟರಾಜ್ರವರು ಪುರಸಭೆಗೆ ದಿಢೀರನೆ ಭೇಟಿ ನೀಡಿದ್ದು, ದಿನವಹಿ ಹಾಜರಿ ಪುಸ್ತಕ, ಕಡತಗಳ ಪರಿಶೀಲನೆ ಮಾಡಿದರು. ಈ ವೇಳೆ ಕಂದಾಯ ಮತ್ತು ಖಾತೆಗಳ ವಿಲೇವಾರಿ ಆಗದಿರುವ ವಿಷಯ ಬೆಳಕಿಗೆ ಬಂದಿದೆ. ಒಂದು ತಿಂಗಳ ಒಳಗೆ ಖಾತೆ ಕುರಿತ ಕಡತಗಳು ವಿಲೇವಾರಿ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ದೂರು ನೀಡುತ್ತಿದ್ದು, ಇಂತಹ ದೂರು ಮುಂದೆ ಬಾರದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವೆ ಕಾನೂನಾತ್ಮಕ ಕ್ರಮ ಕೈಗೊಳ್ಳವ ಎಚ್ಚರಿಕೆಯನ್ನು ಅಧಿಕಾರಿಗಳು ಹಾಗೂ ನೌಕರರಿಗೆ ನೀಡಿದರು.