ಮಂಡ್ಯ : ನಿನ್ನೆ ರಾತ್ರಿ ಹೆದ್ದಾರಿ ಬದಿ ಕೆಟ್ಟು ನಿಂತಿದ್ದ ಲಾರಿಗೆ ಬೈಕ್ವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿರುವ ಪರಿಣಾಮ ಬೈಕ್ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.
ಅಪಘಾತದಲ್ಲಿ ಜೆಡಿಎಸ್ ಕಾರ್ಯಕರ್ತ ಸಾವನ್ನಪ್ಪಿದ ಹಿನ್ನೆಲೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಇಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹೊಣಕೆರೆಯಲ್ಲಿ ಮೃತ ಕಾರ್ಯಕರ್ತನ ಅಂತಿಮ ದರ್ಶನ ಪಡೆದರು.
ಬಳಿಕ ಮಾತನಾಡಿದ ಮಾಜ ಸಿಎಂ ಹೆಚ್ಡಿಕೆ, ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಆನಂದ್ ಕುಮಾರ್ ಅವರನ್ನು ಕಳೆದುಕೊಂಡು ತುಂಬಾ ನೋವುಂಟಾಗಿದೆ. ಆ ಪುಟ್ಟ ಮಕ್ಕಳು ಸಾವನ್ನಪ್ಪಿರುವುದು ಕರುಳು ಚುರುಕ್ ಅನ್ನಿಸುತ್ತದೆ. ದೇವರು ಯಾಕೆ ಇಷ್ಟು ಬೇಗ ಕರೆದುಕೊಳ್ಳುತ್ತಾನೆ ಅಂತಾ ನೋವಾಗುತ್ತದೆ ಎಂದು ಭಾವುಕರಾದರು.
ನಾಗಮಂಗಲ ತಾಲೂಕಿನ ಹೂಣಕೆರೆ ಗ್ರಾಮದ ಬಳಿಯ ಶ್ರೀರಂಗಪಟ್ಟಣ-ನಾಗಮಂಗಲ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಬೈಕ್ನಲ್ಲಿದ್ದ ಜೆಡಿಎಸ್ ಕಾರ್ಯಕರ್ತ ಆನಂದ್ ಕುಮಾರ್, ಅಮ್ಮು ಹಾಗೂ ನಾಲ್ಕು ತಿಂಗಳ ಗಂಡು ಮಗು ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಓದಿ: ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ನಾಲ್ಕು ತಿಂಗಳ ಮಗು ಸೇರಿ ಮೂವರು ದುರ್ಮರಣ