ETV Bharat / state

ಅಮಿತ್​ ಶಾ, ನರೇಂದ್ರ ಮೋದಿ ಕರ್ನಾಟಕಕ್ಕೆ ಬರುವುದು ಕೇವಲ ಮತ ಕೇಳಲು: ಎಚ್ ಡಿ ಕುಮಾರಸ್ವಾಮಿ - ಪಂಚ ರತ್ನ ರಥಯಾತ್ರೆ

ಸಕ್ಕರೆ ನಾಡಲ್ಲಿ ಅಲೆ ಎಬ್ಬಿಸಿದ ಕುಮಾರಸ್ವಾಮಿಯ ಪಂಚ ರತ್ನ ರಥಯಾತ್ರೆ - ರಾಜ್ಯಕ್ಕೆ ಅಮಿತ್​ ಶಾ, ಮೋದಿ ಬರುತ್ತಿರುವುದು ಕೇವಲ ವೋಟಿಗಾಗಿ- ಎಚ್​ಡಿಕೆ ಟೀಕೆ

HD Kumaraswamy responded to the media in Mandya
ಮಂಡ್ಯದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಎಚ್ ಡಿ ಕುಮಾರಸ್ವಾಮಿ
author img

By

Published : Dec 25, 2022, 8:12 PM IST

ಮಂಡ್ಯದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಎಚ್ ಡಿ ಕುಮಾರಸ್ವಾಮಿ

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಂಚ ರತ್ನ ರಥಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. 6ನೇ ದಿನವಾದ ಇಂದು ಸಚಿವ ನಾರಾಯಣಗೌಡ ಕ್ಷೇತ್ರವಾದ ಕೆಆರ್ ಪೇಟೆಗೆ ಪಂಚ ರತ್ನ ರಥ ಯಾತ್ರೆ ಆಗಮಿಸಿದೆ. ನಾರಾಯಣಗೌಡ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾದ ಎಚ್​ಡಿಕೆ ರಥಯಾತ್ರೆಯನ್ನು ಅದ್ಧೂರಿಯಾಗಿ ನಡೆಸಿದ್ದಾರೆ.

ಸಾವಿರಾರು ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಅವರಿಗೆ ದಾರಿ ಉದ್ದಕ್ಕೂ ಮಾಲಾರ್ಪಣೆ ಮಾಡುವ ಮುಖಾಂತರ ಭತ್ತದ ಹಾರ, ಸೇಬು, ಕಬ್ಬು, ಬೆಲ್ಲ ಹೀಗೆ ಹಲವು ರೀತಿಯ ಹಾರಗಳನ್ನು ಸಿದ್ಧಪಡಿಸಿ ಕ್ರೇನ್​ ಮುಖಾಂತರ ಕುಮಾರಸ್ವಾಮಿಯವರಿಗೆ ಹಾಕಲಾಗಿದೆ. ಇನ್ನು, ಹೆಚ್​ಡಿಕೆ ರಥವೇರುತ್ತಿದ್ದಂತೆ ಕಾರ್ಯಕರ್ತರು ಹರ್ಷೋದ್ಘಾರದ ಜೊತೆ ಘೋಷಣೆಯನ್ನು ಕೂಗಿದರು. ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ಮುಖಾಂತರ ಯಾತ್ರೆಯಲ್ಲಿ ಸೇರಿದ ಜನಸ್ತೋಮಕ್ಕೆ ಹೂ ಮಳೆ ಸುರಿಸಲಾಯಿತು. ನಂತರ ಪಟಾಕಿ ಸಿಡಿಸಿ ವೀರಗಾಸೆ, ಪೂಜಾಕುಣಿತ, ತಮಟೆ ವಾದ್ಯ ಸೇರಿದಂತೆ ವಿವಿಧ ಕಲಾ ತಂಡಗಳಿಂದ ಸ್ವಾಗತಿಸಿದರು.

ಕುಮಾರ ಸ್ವಾಮಿಯನ್ನು ನೋಡಲೆಂದೇ ಕಟ್ಟಡಗಳ ಮೇಲೆ ಜನಸಾಗರ ಕಂಡುಬಂದಿದೆ. ಇದರಿಂದ ಮತ್ತಷ್ಟು ಜೆಡಿಎಸ್ ಕಾರ್ಯಕರ್ತರ ಸಂಭ್ರಮ ದುಪ್ಪಟ್ಟಾಯಿತು. ಈ ಸಂದರ್ಭದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು ಸಚಿವ ನಾರಾಯಣ ಗೌಡ ವಿರುದ್ಧ ವಾಕ್ಸಮರ ನಡೆಸಿದರು.

ಸಚಿವ ನಾರಾಯಣಗೌಡ ವಿರುದ್ಧ ಅಭಿವೃದ್ಧಿ ವಿಚಾರವಾಗಿ ನಾನು ಸಿಎಂ ಆಗಿದ್ದಾಗ ಕೆಆರ್‌ಪೇಟೆ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ನೂರಾರು ಕೋಟಿ ಬಿಡುಗಡೆ ಮಾಡಿದ್ದೆ. ಈಗಲೂ ಸಹ ಕೆಆರ್‌ಪೇಟೆಯಲ್ಲಿ ನಾನು ತೆಗೆದುಕೊಂಡ ಕಾರ್ಯಕ್ರಮಗಳೇ ಮುಂದುವರೆಯುತ್ತಿವೆ. ನಾರಾಯಣಗೌಡ ತಾವು ಮಂತ್ರಿಯಾಗಿ ಯಾರು ಮಾಡದ ಕೆಲಸ ಮಾಡಿದ್ದೇನೆ ಎನ್ನುತ್ತಿದ್ದಾರೆ. ಬೂಕನಕೆರೆ ಯಡಿಯೂರಪ್ಪ ಅವರ ಊರು, ಈ ರಸ್ತೆಯನ್ನೇ ಸರಿಪಡಿಸಲಾಗಲಿಲ್ಲ. ನಾರಾಯಣಗೌಡ ಬಗ್ಗೆ ಚರ್ಚೆ ಮಾಡುವ ಮಟ್ಟಕ್ಕೆ ನಾನು ಇಳಿಯಲ್ಲ. ಆದರೆ ಸದ್ಯದಲ್ಲೇ ಆತನ ಬಣ್ಣ ಬಯಲು ಆಗಲಿದೆ. ಜನರೇ ಈ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದು ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಗಂಗಾಮತಸ್ಥರ ಸಮಾಜದ ಮೀಸಲಾತಿ: ಗಂಗಾಮತಸ್ಥರ ಸಮಾಜಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾಗಿರುವುದು ತಿಳಿದಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿ. ಆಗ ಖಂಡಿತ ಸರ್ಕಾರದಿಂದ ವಿಶೇಷ ಮೀಸಲಾತಿಯಾಗಿ ಪರಿಗಣಿಸಿ ಗಂಗಾಮತಸ್ಥ ಸಮುದಾಯಕ್ಕೆ ನ್ಯಾಯ ಒದಗಿಸುತ್ತೇನೆ. ನಿಮ್ಮ ಸಮುದಾಯದ ಆರ್ಥಿಕತೆ ಹೆಚ್ಚಾಗುವಂತೆ ಮಾಡ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

ಪಂಚರತ್ನ ರಥ ಯಾತ್ರೆ ಕುರಿತು: ಈಗಾಗಲೇ ನಾಲ್ಕು ದಿನದ ಮಂಡ್ಯ ಜಿಲ್ಲಾ ಪ್ರವಾಸದಲ್ಲಿ ಅತ್ಯಾದ್ಭುತ ರೀತಿಯುಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ಜನತೆಯ ಆಶೀರ್ವಾದ ಸಂಪೂರ್ಣವಾಗಿ ಇದೆ ಎಂಬುದು ನನ್ನ ಅಭಿಪ್ರಾಯ. ಕಳೆದ ಬಾರಿ ಯಾವ ರೀತಿಯಲ್ಲಿ ಮಂಡ್ಯ ಜಿಲ್ಲಾ ಜನತೆ ಏಳಕ್ಕೆ ಏಳು ಸ್ಥಾನಗಳಿಗೆ ಅಭ್ಯರ್ಥಿಗಳು ಗೆಲ್ಲುವಂತೆ ಆಶೀರ್ವಾದ ಮಾಡಿದ್ದಾರೆ. ಅದೇ ರೀತಿ ಈ ಬಾರಿಯು ಅದಕ್ಕಿಂಥ ಹೆಚ್ಚಿನ ಮತಗಳಲ್ಲಿ ನಮ್ಮ ಏಳು ಅಭ್ಯರ್ಥಿಗಳನ್ನು ಚುನಾಯಿತರಾಗುವಂಥದಕ್ಕೆ ಆರ್ಶೀವಾದವನ್ನು ಮಂಡ್ಯದ ಜನ ಮಾಡುತ್ತಾರೆ ಎನ್ನುವ ನಂಬಿಕೆ ನನಗೆ ಇದೆ ಎಂದು ತಮ್ಮ ಅಭಿಪ್ರಾಯುವನ್ನು ಹೊರಹಾಕಿದರು.

ಕೊರೋನಕ್ಕೆ ಸರ್ಕಾರದ ಗೈಡ್​ಲೈನ್ಸ್ ಕುರಿತು ಪ್ರತಿಕ್ರಿಯೆ: ಕೋವಿಡ್​ ಗೆ ಸಂಬಂಧಿಸಿ ಮುನ್ನೆಚ್ಚರಿಕೆಯಾಗಿ ಸರ್ಕಾರ ತೆಗೆದುಕೊಂಡಿರುವ ಮುಂಜಾಗೃತ ಕ್ರಮ, ನಿರ್ಧಾರ ಅದು ಅವರ ಕರ್ತವ್ಯ. ಆದರೆ ಅಷ್ಟರ ಮಟ್ಟಿಗೆ ಆತಂಕ ಪಡಬೇಕಾಗಿಲ್ಲ ಎಂಬುವಂಥದ್ದು ನನಗಿರುವ ಮಾಹಿತಿ ಎಂದರು.

ಇನ್ನು, ಸಿದ್ದರಾಮಯ್ಯ ಹೇಳಿರುವ " ಜೆಡಿಎಸ್​​ಗು ವೋಟ್​ ಹಾಕಬೇಡಿ ಬಿಜೆಪಿಗು ವೋಟ್​ ಹಾಕಬೇಡಿ ಕಾಂಗ್ರೆಸ್​ಗೆ ಹಾಕಿ ಆಗ ನಾನು ಮುಖ್ಯಮಂತ್ರಿ ಆಗುತ್ತೇನೆ " ಎಂದಿದ್ದಾರೆ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಎಚ್​ ಡಿ ಕುಮಾರಸ್ವಾಮಿ ಅದು ಅವರ ಪಕ್ಷದವರ ಬಗ್ಗೆ ಹೇಳುತ್ತಾರೆ. ಅವರು ಜೆಡಿಎಸ್​ ಗೆ ವೋಟ್​ ಹಾಕಿ ಎಂದು ಹೇಳಲಿಕ್ಕೆ ಆಗುತ್ತದಾ? ಕಾಂಗ್ರೆಸ್​ ಪಕ್ಷದ ನಾಯಕರಾಗಿ ಜೆಡಿಎಸ್​ಗೆ ಬಿಜೆಪಿಗೆ ವೋಟ್​ ಹಾಕಿ ಎಂದು ಹೇಳಲಾಗುತ್ತದೆಯೇ. ಅವರು ಹೇಳಿದ್ದರಲ್ಲಿ ತಪ್ಪಿಲ್ಲ. ಇದರ ಬಗ್ಗೆ ನಾನು ಯಾಕೆ ಚರ್ಚೆ ಮಾಡಲಿ. ಈಗ ಬಹಳ ಜನ ಮುಖ್ಯಮಂತ್ರಿ ಆಗಬೇಕೆಂದು ಆಸೆ ಪಟ್ಟಿದ್ದಾರೆ. ಆದರೆ ದೇವರ ಇಚ್ಛೆ ಏನಿದೆಯೋ, ಜನಗಳ ತೀರ್ಮಾನ ಏನಿದೆಯೋ ಎಲ್ಲರೂ ಅಲ್ಲಿಯವರೆಗೆ ಕಾಯೋಣ ಎಂದು ಹೇಳಿದರು.

ಮುಂದುವರೆದು, ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಇದೇ ತಿಂಗಳ 30ಕ್ಕೆ ಮಂಡ್ಯ ಜಿಲ್ಲೆಗೆ ಬರುವ ಕುರಿತು ಪ್ರತಿಕ್ರಿಯಿಸಿ, ಅಮಿತ್​ ಶಾ ಬರುವಂಥದ್ದು ಆಶ್ಚರ್ಯವನ್ನೇನು ತರುವುದಿಲ್ಲ. ಇನ್ನು ಪ್ರತಿನಿತ್ಯ ಅವರಿಗೆ ಕರ್ನಾಟಕವೇ ಮನೆ ಆಗಲಿದೆ. ಮುಂದಿನ ಮೇ ತಿಂಗಳವರೆಗೂ ಅಮಿತ್​ ಶಾ ಅವರು ಕರ್ನಾಟಕಕ್ಕೆ ಬರಬಹುದು, ಪ್ರಧಾನಿ ನರೇಂದ್ರ ಮೋದಿಯವರು ಬರಬಹುದು. ಈಗಾಗಲೇ ಕೇಂದ್ರ ಸರ್ಕಾರಗದ ಮಂತ್ರಿಗಳ ದಂಡು ಬರುತ್ತಲೇ ಇದೆ. ಆದರೆ ಅವರು ಬರುವುತ್ತಿರುವುದು ಚುನವಾಣೆಯ ಕಾರಣಕ್ಕಾಗಿಯೇ ಹೊರತು ಕರ್ನಾಟಕ ಜನತೆಯ ಸಮಸ್ಯೆಗೆ ಪರಿಹಾರ ಒದಗಿಸುವ ಸಲುವಾಗಿಯಲ್ಲ. ಅವರು ಚುನಾವಣೆಯಲ್ಲಿ ಮತ ಕೇಳಲು ಬರುತ್ತಿದ್ದಾರೆ ಅಷ್ಟೇ ಎಂದು ಟಾಂಗ್​ ನೀಡಿದರು.

ಇದನ್ನೂ ಓದಿ; ಡಿಸೆಂಬರ್ 30ರಂದು ಮಂಡ್ಯಕ್ಕೆ ಅಮಿತ್ ಶಾ.. ಬಿಜೆಪಿಯಿಂದ ಬೃಹತ್ ಸಮಾವೇಶ ಆಯೋಜನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.