ETV Bharat / state

ಆನ್‌ಲೈನ್‌ ಪಠ್ಯದ ಜೊತೆಗೆ ಅಶ್ಲೀಲ ಫೋಟೋ ಕಳಿಸಿದ ಪೋಲಿ: ಅತಿಥಿ ಉಪನ್ಯಾಸಕ ಮನೆಗೆ - guest lecturer sent vulgar image to students

ಮಂಡ್ಯ ಜಿಲ್ಲೆಯ ಕಾಲೇಜೊಂದರ ಅತಿಥಿ ಉಪನ್ಯಾಸಕರೊಬ್ಬರು ವಾಟ್ಸ್​ಆ್ಯಪ್​ ‌ಗ್ರೂಪ್​ನಲ್ಲಿ ಆನ್‌ಲೈನ್‌ ಪಠ್ಯ ಕಳುಹಿಸುವುದರ ಜೊತೆಗೆ ಅಶ್ಲೀಲ ಫೋಟೋ ಕಳುಹಿಸಿದ ಹಿನ್ನೆಲೆ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.

vulgar image with online notes
ಆನ್‌ಲೈನ್‌ ಪಠ್ಯದ ಜೊತೆಗೆ ಅಶ್ಲೀಲ ಫೋಟೋ ರವಾನಿಸಿದ ಅತಿಥಿ ಉಪನ್ಯಾಸಕ
author img

By

Published : Feb 13, 2021, 10:07 AM IST

ಮಂಡ್ಯ: ಕೆ.ಆರ್.‌ ಸಾಗರ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕನೋರ್ವ ಆನ್‌ಲೈನ್‌ ಪಠ್ಯದ ಜೊತೆಗೆ ಅಶ್ಲೀಲ ಫೋಟೋ ರವಾನೆ ಮಾಡಿದ್ದು, ಆತನನ್ನು ಸೇವೆಯಿಂದ ಬಿಡುಗಡೆಗೊಳಿಸಿರುವ ಘಟನೆ ಶ್ರೀರಂಗಪಟ್ಟದಲ್ಲಿ ನಡೆದಿದೆ.

ಹಲವು ವರ್ಷಗಳಿಂದ ಕೆ.ಆರ್​‌. ಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಲ್ಲಿ ಸೇವೆಯಲ್ಲಿದ್ದ ಅತಿಥಿ ಉಪನ್ಯಾಸಕರೊಬ್ಬ ಕಳೆದ ಸೋಮವಾರ ವಿದ್ಯಾರ್ಥಿಗಳಿಗೆ ವಾಟ್ಸ್​ಆ್ಯಪ್​ ‌ಗ್ರೂಪ್​ನಲ್ಲಿದ್ದ ಆನ್‌ಲೈನ್‌ ಪಠ್ಯ ಕಳುಹಿಸುವುದರ ಜೊತೆಗೆ ಅಶ್ಲೀಲ ಫೋಟೋ ಕಳುಹಿಸಿದ್ದಾರೆ ಎನ್ನಲಾಗ್ತಿದೆ.

ಈ ವಿಷಯವನ್ನು ಇತರೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲೆ ಹಂಸವೇಣಿ ಅವರ ಗಮನಕ್ಕೆ ತಂದಿದ್ದಾರೆ. ನಂತರ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕರ ಜೊತೆ ಚರ್ಚಿಸಿದ ಪಾಂಶುಪಾಲರಾದ ಹಂಸವೇಣಿ, ನಿರ್ದೇಶನದಂತೆ ಕಾಲೇಜಿನ ಹಿತದೃಷ್ಟಿಯಿಂದ ಆ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆಗೊಳಿಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತ: ಕಾರಿನಲ್ಲೇ ಸಿಲುಕಿ ಪ್ರಾಣತೆತ್ತ ಆರು ಜನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.