ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ನದಿಗೆ ನೀರು ಹರಿಸುವ ವಿವಿಧ ಮಟ್ಟದ ಗೇಟ್‌ಗಳಿಗೆ ಗ್ರೀಸ್, ಆಯಿಲಿಂಗ್ ಮಾಡುವ ಕಾರ್ಯ ಭರದಿಂದ ಸಾಗುತ್ತಿದೆ. ಪ್ರತಿವರ್ಷ ಗೇಟ್‌ಗಳ ಪ್ರಸ್ತುತ ಸ್ಥಿತಿ - ಗತಿಗಳನ್ನು ನೋಡಿಕೊಂಡು ದೋಷವಿದ್ದರೆ ದುರಸ್ತಿ ಮಾಡಲಾಗುತ್ತದೆ. ಅದರಂತೆ ಈ ಬಾರಿ 80 ಅಡಿಗಳಿಗೆ ಮತ್ತು 103 ಅಡಿಗಳಿಗೆ ಸಂದ ಪಟ್ಟ ಗೇಟ್‌ಗಳು ಹಾಗೂ ವಿಶ್ವೇಶ್ವರಯ್ಯ ನಾಲೆಯ ಗೇಟ್‌ಗಳಿಗೆ ಗ್ರೀಸ್, ಆಯಲಿಂಗ್ ಕಾರ್ಯ ಕೈಗೊಳ್ಳಲಾಗಿದೆ.
ಓದಿ: KRS Dam: ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಳ
ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಎಂ.ಬಿ.ರಾಜು ಕಾಮಗಾರಿ ವೀಕ್ಷಿಸಿ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ನೌಕರರ ಸುರಕ್ಷತೆ ದೃಷ್ಟಿಯಿಂದ ಕಡಿಮೆ ಸಿಬ್ಬಂದಿ ಬಳಸಿ ಕೊಂಡು ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ತಿಳಿಸಿದರು.
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಫಾರೂಖ್ ಅಹಮ್ಮದ್ ಅಬು, ಸಹಾಯಕ ಇಂಜಿನಿಯರ್ ಕಿಶೋರ ಕಿರಿಯ ಇಂಜಿನಿಯರ್ ಅಭಿಲಾಷ್ ಹಾಜರಿದ್ದರು.