ETV Bharat / state

ಒಂದೇ ಕುಟುಂಬದ ಮೂವರಿಂದ ಸ್ಪರ್ಧೆ: ರಂಗೇರಿದ ಕೆನ್ನಾಳು ಗ್ರಾಪಂ ಚುನಾವಣಾ ಕಣ

ಪಾಂಡುಪುರ ತಾಲೂಕಿನ ಗ್ರಾಮ ಪಂಚಾಯತಿಯಲ್ಲಿ ಒಂದೇ ಕುಟುಂಬದ ಮೂವರು ಪ್ರತ್ಯೇಕ ವಾರ್ಡ್‌ನಲ್ಲಿ ಸ್ಪರ್ಧಿಸುವ ಮೂಲಕ ಗಮನ ಸೆಳೆದಿದ್ದಾರೆ. ಇಂದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಒಟ್ಟಿಗೆ ನಾಮಪತ್ರ ಸಲ್ಲಿದ್ದಾರೆ.

Grama panchayat election
ನಾಮಪತ್ರ ಸಲ್ಲಿಸುತ್ತಿರುವ ಸ್ಪರ್ಧಾಳುಗಳು
author img

By

Published : Dec 16, 2020, 8:59 PM IST

ಮಂಡ್ಯ: ಪಾಂಡುಪುರ ತಾಲೂಕಿನ ಗ್ರಾಮ ಪಂಚಾಯತ್​ ಚುನಾವಣೆಗೆ ಒಂದೇ ಕುಟುಂಬದ ಮೂವರು ಪ್ರತ್ಯೇಕ ವಾರ್ಡ್‌ನಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ. ಹಾಗಾಗಿ ಇಲ್ಲಿನ ಗ್ರಾಮ ಪಂಚಾಯತ್​ ಚುನಾವಣಾ ಕಣ ರಂಗೇರುತ್ತಿದೆ.

ಹೌದು, ಪಾಂಡುಪುರ ತಾಲೂಕಿನ ಕೆನ್ನಾಳು ಗ್ರಾಮ ಪಂಚಾಯತಿಯ ಹರಹಳ್ಳಿ ಗ್ರಾಮದ ಒಂದೇ ಕುಟುಂಬದ ಪತಿ, ಪತ್ನಿ ಮತ್ತು ಪುತ್ರ ಪ್ರತ್ಯೇಕವಾಗಿ ಮೂರು ವಾರ್ಡ್‌ಗಳಲ್ಲಿ ಸ್ಪರ್ಧೆ ಮಾಡಲು ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಗಂಡನ ವಿರುದ್ಧ ಹೆಂಡತಿ ಸ್ಪರ್ಧೆ: ಕುತೂಹಲ ಕೆರಳಿಸಿದ ಕೊಡಗಿನ ಹೊಸಕೋಟೆ ಗ್ರಾಪಂ ಚುನಾವಣೆ

ಹರಳಹಳ್ಳಿ ಗ್ರಾಮದ 1ನೇ ವಾರ್ಡ್‌ನ ಸಾಮಾನ್ಯ ಮೀಸಲಾತಿಗೆ ಅಂಬರೀಷ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಅಂಬಿ ಸುಬ್ಬಣ್ಣ ಸ್ಪರ್ಧಿಸಿದ್ದರೆ, ಇವರ ಪತ್ನಿ ಸುಮಿತ್ರ ಸುಬ್ಬಣ್ಣ ವಿಶ್ವೇಶ್ವರನಗರ ಬಡಾವಣೆಯ 3ನೇ ವಾರ್ಡ್‌ನ ಬಿಸಿಎಂ ಮಹಿಳೆ ಮೀಸಲು ಕ್ಷೇತ್ರಕ್ಕೆ ನಾಮಪತ್ರ ಸಲ್ಲಿದ್ದಾರೆ.

ಇನ್ನು ಅಂಬಿ ಸುಬ್ಬಣ್ಣ ಅವರ ಪುತ್ರ ಎಸ್‌.ಅಭಿಷೇಕ್ ಸುಬ್ಬಣ್ಣ ಹರಳಹಳ್ಳಿ ಗ್ರಾಮದ 2ನೇ ವಾರ್ಡ್‌ನ ಸಾಮಾನ್ಯ ಮೀಸಲು ಕ್ಷೇತ್ರಕ್ಕೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ನಾಮಪತ್ರ ಸಲ್ಲಿಸುತ್ತಿರುವ ಸ್ಪರ್ಧಾಳುಗಳು

ಹರಳಹಳ್ಳಿ ಗ್ರಾಮದ ತಮ್ಮ ನಿವಾಸದಿಂದ ಕುಟುಂಬ ಸಮೇತರಾಗಿ ಮೂವರು ಒಟ್ಟಿಗೆ ಹೊರಟು ಮಾರಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಕೆನ್ನಾಳು ಗ್ರಾಮ ಪಂಚಾಯತಿಗೆ ತೆರಳಿ ಚುನಾವಣಾಧಿಕಾರಿಯೂ ಆದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸೌಮ್ಯ ಅವರಿಗೆ ಅಂಬಿ ಸುಬ್ಬಣ್ಣ ಕುಟುಂಬದ ಮೂವರು ನಾಮಪತ್ರ ಸಲ್ಲಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.