ಮಂಡ್ಯ: ಕಟಾವಿಗೆ ಬಂದ ಕಬ್ಬನ್ನು ಕಡಿಸಲು ಸಾಧ್ಯವಾಗದೇ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಸಮೀಪದ ಹುಲಿವಾನ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ್(43) ಜಮೀನಿನ ಮರವೊಂದಕ್ಕೆ ನೇಣು ಬಿಗುದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಪಿತ್ರಾರ್ಜಿವಾಗಿ ಬಂದ ಜಮೀನಿನಲ್ಲಿ ಕಬ್ಬನ್ನು ಬೆಳೆದಿದ್ದ. ಕಬ್ಬು ಕಟಾವಿಗೆ ಬಂದು 2 ತಿಂಗಳು ಕಳೆದರೂ ಖಾಸಗಿ ಕಾರ್ಖಾನೆಗಳು ಒಪ್ಪಿಗೆ ನೀಡದ ಹಿನ್ನೆಲೆ ಮನನೊಂದಿದ್ದ ಎನ್ನಲಾಗಿದೆ. ಜೊತೆಗ ಮೈಶುಗರ್ ಇನ್ನೂ ಆರಂಭವಾಗಿಲ್ಲ ಅಲ್ಲದೆ ಸಾಲಗಾರರ ಕಾಟ ಜಾಸ್ತಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೈತ ಸಂಘದ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.