ETV Bharat / state

ಮುಂಬೈನಿಂದ ಮಂಡ್ಯಕ್ಕೆ ಮೃತದೇಹ ತಂದ ಪ್ರಕರಣಕ್ಕೆ ಹೊಸ ತಿರುವು ಕೊಟ್ಟ ಶಾಸಕ - Former minister who gave a new twist to the Mumbai dead case

ಮುಂಬೈನಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹದ ಅಂತ್ಯಸಂಸ್ಕಾರವನ್ನು ಮಂಡ್ಯದ ಪಾಂಡವಪುರ ತಾಲೂಕಿನ ಬಿ.ಕೊಡಗಳ್ಳಿ ಗ್ರಾಮದಲ್ಲಿ ಮಾಡಲಾಗಿತ್ತು.

Corona to the dead man
ಶಾಸಕ ಸಿ.ಎಸ್​.ಪುಟ್ಟರಾಜು
author img

By

Published : May 2, 2020, 2:54 PM IST

ಮಂಡ್ಯ: ಮುಂಬೈನಿಂದ ಮಂಡ್ಯಕ್ಕೆ ಮೃತದೇಹ ತಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸಿ.ಎಸ್​.ಪುಟ್ಟರಾಜು ಅವರು ಹೊಸ ತಿರುವು ಕೊಟ್ಟಿದ್ದಾರೆ.

ಮುಂಬೈನಲ್ಲಿ ಸಾವಿಗೀಡಾಗಿ ಮಂಡ್ಯದ ಪಾಂಡವಪುರ ತಾಲೂಕಿನ ಬಿ.ಕೊಡಗಳ್ಳಿ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಿದ ವ್ಯಕ್ತಿಗೂ ಕೊರೊನಾ ಬಂದಿತ್ತು ಎಂಬ ಅನುಮಾನ ಇದೆ. ಈ ಬಗ್ಗೆ ಸಂಬಂಧಿಕರು ನಮಗೆ ಮಾಹಿತಿ ನೀಡಿದ್ದಾರೆ ಎಂದು ಶಾಸಕ ಸಿ.ಎಸ್. ಪುಟ್ಟರಾಜು ತಿಳಿಸಿದರು.

ಶಾಸಕ ಸಿ.ಎಸ್​.ಪುಟ್ಟರಾಜು

ಈ ಪ್ರಕರಣದಲ್ಲಿ ನನ್ನ ಕೈವಾಡವಿಲ್ಲ. ನಕಲಿ ದಾಖಲೆ ಸೃಷ್ಟಿಸಿ ಶವವನ್ನು ಜಿಲ್ಲೆಗೆ ತರಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಅನಾಹುತವಾದರೆ ಮಹಾರಾಷ್ಟ್ರ ಸರ್ಕಾರವೇ ಹೊಣೆ ಹೊರಬೇಕು ಎಂದು ಎಚ್ಚರಿಕೆ ನೀಡಿದರು.

ಮುಂಬೈನಿಂದ ಶವದ ಜೊತೆ ಮತ್ತೊಬ್ಬ ವ್ಯಕ್ತಿ ಬಂದಿದ್ದಾನೆ. ಆತ ಕೆ.ಆರ್.ಪೇಟೆಯಲ್ಲಿ ಇಳಿದುಕೊಂಡಿದ್ದ. ಆತನ ಪರೀಕ್ಷೆ ನಡೆಸಬೇಕು. ಆತ ಯಾರು ಎಂಬುದನ್ನು ಪತ್ತೆ ಹಚ್ಚಬೇಕು. ಇನ್ನು ಹಾಸನದಿಂದ ಕೊಡಗಳ್ಳಿವರೆಗೂ ಆ್ಯಂಬುಲೆನ್ಸ್​​​​ ನಿಲ್ಲಿಸಿ ಮೃತದೇಹವನ್ನು ಹಲವರು ನೋಡಿದ್ದಾರೆ. ಈ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.