ETV Bharat / state

ಬಿದ್ಹೋಗಿದ್ದ ಕಾಂಗ್ರೆಸ್‌ನ ಮಳವಳ್ಳಿಯಲ್ಲಿ ನಿಲ್ಲಿಸಿದ್ದೇವೆ.. ಮಾಜಿ ಸಚಿವ ನರೇಂದ್ರ ಸ್ವಾಮಿ

ನನ್ನ ವಿರುದ್ಧ ಚುನಾವಣೆಯಲ್ಲಿ ಹೈಕೊರ್ಟ್ ದಂಡ ಹಾಕಿದ್ದು ಮರೆತೇ ಹೋಯ್ತಾ? ದಂಡ ಕಟ್ಟುವುದರಲ್ಲಿ ಶೂರ. ನಾನು ದಂಡು ಎತ್ತಿಕೊಂಡು ಬರುವುದರಲ್ಲಿಯೂ ವೀರ. ನಾಯಕರ ಫೋಟೋ ಬಿಟ್ಟು, ವೈಯಕ್ತಿಕವಾಗಿ ಏನೂ ಇಲ್ಲದ ವ್ಯಕ್ತಿ ಸದಾ ಟೀಕೆ ಮಾಡೋದೆ ಕೆಲಸ..

Former minister Narendra Swamy
ಮಾಜಿ ಸಚಿವ ನರೇಂದ್ರ ಸ್ವಾಮಿ
author img

By

Published : Jan 18, 2021, 9:59 PM IST

ಮಂಡ್ಯ : ಮನೆಗೆ ಬೆಂಕಿಯಿಡುವ ಕೆಲಸ ಮಾಡಬೇಡಿ. ಮಳವಳ್ಳಿಯಲ್ಲಿ ಕಾಂಗ್ರೆಸ್ ಬಿದ್ದು ಹೋಗಿದ್ದನ್ನು ಬಹಳ ಕಷ್ಟಪಟ್ಟು ಎತ್ತಿ ನಿಲ್ಲಿಸಿದ್ದೀವಿ. ಇವತ್ತು ನಾನು ಸೋತಿರಬಹುದು. ಆದರೆ, ಕಾಂಗ್ರೆಸ್ ಸತ್ತಿಲ್ಲ ಎಂದು ಮಳವಳ್ಳಿಯಲ್ಲಿ ಮಾಜಿ ಸಚಿವ ನರೇಂದ್ರ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಸದಸ್ಯರಿಗೆ ಕಾಂಗ್ರೆಸ್​ನಿಂದ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂದು ನಿಖಿಲ್‌ ಕುಮಾರಸ್ವಾಮಿ ಪರ 8 ಶಾಸಕರು ನೀವೇ ಇದ್ದಿರಿ. ಅದರಲ್ಲಿ ಮೂವರು ಮಂತ್ರಿಗಳಿದ್ದರು.

ಮಾಜಿ ಸಚಿವ ನರೇಂದ್ರ ಸ್ವಾಮಿ

ಜೊತೆಗೆ ಎಂಎಲ್​ಸಿ ಇದ್ದರು. ಆಗ ಕಾಂಗ್ರೆಸಿನವರು ಶಸ್ತ್ರತ್ಯಾಗ ಮಾಡಿದ್ದೆವು. ನಾವು ಯುದ್ದಕ್ಕೆ ಬಂದಿರಲಿಲ್ಲ. ಆದರೆ, ನೀವೇ ಶೂರರು, ಧೀರರು ವೀರಾವೇಷದ ವೇಷ ಹಾಕಿದ್ದೀರಲ್ಲ ಎಂದು ವ್ಯಂಗ್ಯವಾಡಿದರು.

ನನ್ನ ವಿರುದ್ಧ ಚುನಾವಣೆಯಲ್ಲಿ ಹೈಕೊರ್ಟ್ ದಂಡ ಹಾಕಿದ್ದು ಮರೆತೇ ಹೋಯ್ತಾ? ದಂಡ ಕಟ್ಟುವುದರಲ್ಲಿ ಶೂರ. ನಾನು ದಂಡು ಎತ್ತಿಕೊಂಡು ಬರುವುದರಲ್ಲಿಯೂ ವೀರ. ನಾಯಕರ ಫೋಟೋ ಬಿಟ್ಟು, ವೈಯಕ್ತಿಕವಾಗಿ ಏನೂ ಇಲ್ಲದ ವ್ಯಕ್ತಿ ಸದಾ ಟೀಕೆ ಮಾಡೋದೆ ಕೆಲಸ ಎಂದು ಶಾಸಕ ಡಾ‌.ಕೆ‌.ಅನ್ನದಾನಿ ವಿರುದ್ಧ ಹರಿಹಾಯ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.