ETV Bharat / state

ಜನರ ಕಷ್ಟ, ಸಮಸ್ಯೆ ಆಲಿಸುವ ವ್ಯಕ್ತಿಯನ್ನು ಆಯ್ಕೆ ಮಾಡಿ : ಹೆಚ್​​ಡಿಕೆ ಮನವಿ

ರಾಮ ಮಂದಿರ ಕಟ್ಟೋಕೆ 2500 ಕೋಟಿ ರೂ. ಹಣ ಸಂಗ್ರಹ ಆಗಿದೆ. ಅದೇ ಒಂದು ಊರಿನಲ್ಲಿ ದೇವಸ್ಥಾನ ಕಟ್ಟಲು ನಮ್ಮಂತವರ ಬಳಿ ಬರುತ್ತೀರಾ. ನಾನು ರಾಮನ ಬಗ್ಗೆ ಮಾತನಾಡುತ್ತಿಲ್ಲ, ಸದ್ಯದ ಪರಿಸ್ಥಿತಿ ಬಗ್ಗೆ ಹೇಳುತ್ತಾ ಇದ್ದೀನಿ. ಅಷ್ಟೊಂದು ಹಣ ಎಲ್ಲಿಂದ ಬಂತು ಅಂತಾ ನನಗೆ ಗೊತ್ತಿಲ್ಲ..

author img

By

Published : Mar 14, 2021, 9:22 PM IST

ಮಂಡ್ಯ : ಕಪ್ಪು ಹಣ ತಡೆಗಟ್ಟುತ್ತೇವೆ ಎನ್ನುತ್ತಾರೆ. ಆದರೆ, ಉಳ್ಳವರು ಚುನಾವಣೆಯಲ್ಲಿ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.

ಅಷ್ಟೊಂದು ಹಣ ಎಲ್ಲಿಂದ ಬಂತು?.. ಮಾಜಿ ಸಿಎಂ ಹೆಚ್​​ಡಿಕೆ ಪ್ರಶ್ನೆ..

ಓದಿ: ಜಾರಕಿಹೊಳಿ ಸಿಡಿ ಪ್ರಕರಣದಿಂದ‌ ನಿರಪರಾಧಿಯಾಗಿ ಹೊರಬರುತ್ತಾರೆ: ನಿರಾಣಿ ವಿಶ್ವಾಸ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನಡಕಲುಪುರ ಗೇಟ್‌ನಲ್ಲಿ ನಡೆದ ಎತ್ತಿನ ಗಾಡಿ ಓಟದ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಪಂ ಚುನಾವಣೆಯಲ್ಲಿ ಒಬ್ಬೊಬ್ಬ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಮನಗರದ ಒಂದು ಗ್ರಾಮದಲ್ಲಿ ಒಂದು ಕೋಟಿಗೂ ಅಧಿಕ ಹಣ ಖರ್ಚು ಮಾಡಿದ್ದಾನೆ. ಇನ್ನೊಬ್ಬ ಅದಕ್ಕಿಂತ ಹೆಚ್ಚು ಖರ್ಚು ಮಾಡಿದ್ದಾನೆ. ಆದರೆ, ಅವರಿಬ್ಬರೂ ಸೋತಿದ್ದಾರೆ. ಜನರು ಎಲ್ಲರ ಬಳಿಯೂ ದುಡ್ಡು ತಗೋತಾರೆ, ಯಾರಿಗೆ ವೋಟು ಹಾಕುತ್ತಾರೆ ಅಂತಾ ಗೊತ್ತಿಲ್ಲ ಎಂದರು. ಮುಂದೆ ತಾಪಂ ಚುನಾವಣೆ ಇದೆ, ಅದಕ್ಕೂ ಕೋಟಿ ಕೋಟಿ ಖರ್ಚು ಮಾಡುತ್ತಾರೆ ಎಂದು ಹೇಳಿದರು.

ರಾಮ ಮಂದಿರ ಕಟ್ಟೋಕೆ 2500 ಕೋಟಿ ರೂ. ಹಣ ಸಂಗ್ರಹ ಆಗಿದೆ. ಅದೇ ಒಂದು ಊರಿನಲ್ಲಿ ದೇವಸ್ಥಾನ ಕಟ್ಟಲು ನಮ್ಮಂತವರ ಬಳಿ ಬರುತ್ತೀರಾ. ನಾನು ರಾಮನ ಬಗ್ಗೆ ಮಾತನಾಡುತ್ತಿಲ್ಲ, ಸದ್ಯದ ಪರಿಸ್ಥಿತಿ ಬಗ್ಗೆ ಹೇಳುತ್ತಾ ಇದ್ದೀನಿ. ಅಷ್ಟೊಂದು ಹಣ ಎಲ್ಲಿಂದ ಬಂತು ಅಂತಾ ನನಗೆ ಗೊತ್ತಿಲ್ಲ ಎಂದು ಖಾರವಾಗಿ ಮಾತನಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.