ಮಂಡ್ಯ: 'ಆ ವ್ಯಕ್ತಿ ನಾಲಿಗೆ ಹರಿ ಬಿಡುವುದನ್ನ ಸ್ವಲ್ಪ ಕಂಟ್ರೋಲ್ ಮಾಡುವುದು ಒಳ್ಳೆಯದು' ಎಂದು ಮಾಜಿ ಸಂಸದ ಶಿವರಾಮೇಗೌಡರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಶಿವರಾಮೇಗೌಡರು ನಮ್ಮ ಪಕ್ಷಕ್ಕೆ ಕೊಟ್ಟ ಕೊಡುಗೆ ಏನು? ಎಂದು ನನಗೆ ಗೊತ್ತಿಲ್ಲ. ಒಕ್ಕಲಿಗ ಸಮಾಜದ ಮುಖಂಡರು, ನಮಗೂ, ದಿ.ಮಾದೇಗೌಡರಿಗೂ ರಾಜಕೀಯವಾಗಿ ವ್ಯತ್ಯಾಸ ಇದೆ. ನಾವು ಎಂದಿಗೂ ಸಹ ಮಾದೇಗೌಡರ ಬಗ್ಗೆ ಲಘುವಾಗಿ ನಡೆದುಕೊಂಡಿಲ್ಲ.
ಅವರು ಅವರದ್ದೇ ಆದ ಹೋರಾಟ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಜನತೆಯ ಸಮಸ್ಯೆಗೆ ಹೋರಾಟ ಮಾಡಿದ ನಾಯಕರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅಂತಹ ವ್ಯಕ್ತಿ ಇಂದು ನಮ್ಮ ಮುಂದೆ ಇಲ್ಲ. ಅವರ ಹೆಸರು ತರುವುದು ಯಾಕೆ?. ಅಂತವರ ಬಗ್ಗೆ ಮಾತನಾಡುವಾಗ ಎಚ್ಚರವಿರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಮುಂದಿನ ಚುನಾವಣೆಗೆ ಅಭ್ಯರ್ಥಿ ಆಗುವುದು ಬೇರೆ. ಮಾದೇಗೌಡರಿಗೂ ಅದಕ್ಕೂ ಸಂಬಂಧ ಏನು?. ಶಿವರಾಮೇಗೌಡರು, ಮಾದೇಗೌಡರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.
ನಮ್ಮ ಬಾಯಿನಲ್ಲಿ ಹೇಳುವುದಕ್ಕೂ ಅಸಹ್ಯವಾಗುತ್ತದೆ. ಅದಕ್ಕೆ ಅಂತಿಮವಾಗಿ ನಿರ್ಣಯ ಮಾಡಿ ಇಂತಹ ವ್ಯಕ್ತಿಗಳು ನಮ್ಮ ಪಕ್ಷಕ್ಕೆ ಬೇಡ ಎಂದು ತೀರ್ಮಾನಿಸಲಾಗಿದ್ದು, ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಹೆಚ್ಡಿಕೆ ತಿಳಿಸಿದರು.
ಇದನ್ನೂ ಓದಿ: ದಿ. ಮಾದೇಗೌಡರ ಅವಹೇಳನ: ಶಿವರಾಮೇಗೌಡರನ್ನು ಪಕ್ಷದಿಂದ ಹೊರಹಾಕಲು ಹೆಚ್ಡಿಕೆ ಸೂಚನೆ